Bantwal: ಮಿಲಾದ್ ರ್ಯಾಲಿ ಆಡಿಯೋ ಸವಾಲು ವಿಚಾರ: ಮೂವರ ವಿರುದ್ಧ ಕೋರ್ಟ್ ಸಮನ್ಸ್
Team Udayavani, Dec 6, 2024, 11:58 PM IST
ಬಂಟ್ವಾಳ: ಮಿಲಾದ್ ರ್ಯಾಲಿಗೆ ಸಂಬಂಧಿಸಿ ಹಾಕಿರುವ ಸವಾಲಿನ ಆಡಿಯೋ ವಿಚಾರಕ್ಕೆ ಸಂಬಂಧಿಸಿ ಸೆ. 16ರಂದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಿ.ಸಿ. ರೋಡಿನಲ್ಲಿ ಜಮಾಯಿಸಿದ ವಿಚಾರಕ್ಕೆ ಸಂಬಂಧಿಸಿ ಮೂವರು ಮುಖಂಡರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ.
ಘಟನೆಗೆ ಸಂಬಂಧಿಸಿ ಈ ಹಿಂದೆ ವಿಹಿಂಪ ಮುಖಂಡರಾದ ಶರಣ್ ಪಂಪ್ವೆಲ್ ಹಾಗೂ ಭರತ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಬಿಜೆಪಿ ಮುಖಂಡರಾದ ವಿಕಾಸ್ ಪುತ್ತೂರು, ಆರ್. ಚೆನ್ನಪ್ಪ ಕೋಟ್ಯಾನ್ ಹಾಗೂ ವಿಹಿಂಪ ಮುಖಂಡ ಸಚಿನ್ ಮೆಲ್ಕಾರ್ ವಿರುದ್ಧ ಸಮನ್ಸ್ ಜಾರಿಯಾಗಿದೆ.
ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಕಿರುವ ಸವಾಲಿಗೆ ಸಂಬಂಧಿಸಿ ಬಿ.ಸಿ.ರೋಡಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.