![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
![rahul-gandhi](https://www.udayavani.com/wp-content/uploads/2025/02/rahul-gandhi-2-415x281.jpg)
Team Udayavani, Jan 29, 2025, 7:16 PM IST
ಗಾಲೆ: ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಸ್ವೀವ್ ಸ್ಮಿತ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರ ರನ್‌ಗಳ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಆ ಮೈಲುಗಲ್ಲು ತಲುಪಿದ ಆಸ್ಟ್ರೇಲಿಯಾದ ನಾಲ್ಕನೇ ಹಾಗೂ ಒಟ್ಟಾರೆಯಾಗಿ ವಿಶ್ವದ 15ನೇ ಬ್ಯಾಟ್ಸ್‌ಮನ್ ಎನಿಸಿದ್ದಾರೆ.
ಗಾಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಟೆಸ್ಟ್‌ನ ಮೊದಲ ದಿನದಂದು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ ಒಂಟಿರನ್ ತೆಗೆಯುವ ಮೂಲಕ 10 ಸಾವಿರ ರನ್‌ಗಳ ಪೂರೈಸುವ ಮೂಲಕ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಹಾಗೂ ಬ್ರಿಯಾನ್ ಲಾರಾ ಗುಂಪಿಗೆ ಸೇರ್ಪಡೆಯಾಗಿದ್ದಾರೆ.
ರಾಹುಲ್ ದ್ರಾವಿಡ್ ದಾಖಲೆ ಮುರಿದ ಸ್ಮಿತ್:
ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್ (13,378) ಹಾಗೂ ಅಲನ್ ಬಾರ್ಡರ್ (11,174) ಈ ದಾಖಲೆ ಬರೆದಿದ್ದರು. ಇದೀಗ ಈ ಸಾಧಕ ಪಟ್ಟಿಗೆ ಸ್ಟೀವ್ ಸ್ಮಿತ್ ಕೂಡ ಪ್ರವೇಶ ಪಡೆದಿದ್ದಾರೆ. ಇನ್ನು ಸ್ಟೀವ್ ಸ್ಮಿತ್ ಈ ಸಾಧನೆಯ ಟೆಸ್ಟ್ ಕ್ರಿಕೆಟ್‌ನಲ್ಲಿ 115 ಪಂದ್ಯ 205 ಇನ್ನಿಂಗ್ಸ್‌ಗಳ ಮೂಲಕ ವೇಗವಾಗಿ 10 ಸಾವಿರ ರನ್ ಪೂರೈಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಸ್ಟೀವ್ ಸ್ಮಿತ್ 5ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾದ 2ನೇ ದಾಂಡಿಗ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಐದನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ರಾಹುಲ್ ದ್ರಾವಿಡ್ ಇದ್ದರು. ದ್ರಾವಿಡ್ 206 ಇನಿಂಗ್ಸ್ಗಳ ಮೂಲಕ 10 ಸಾವಿರ ರನ್ ಪೂರೈಸಿದ್ದರು.
ಇನ್ನು ಟೆಸ್ಟ್ ಇತಿಹಾಸದಲ್ಲಿ ಅತೀ ವೇಗವಾಗಿ 10 ಸಾವಿರ ರನ್ ಕಲೆಹಾಕಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ, ಭಾರತದ ಸಚಿನ್ ತೆಂಡೂಲ್ಕರ್ ಹಾಗೂ ಶ್ರೀಲಂಕಾದ ಕುಮಾರ ಸಂಗಾಕ್ಕರ ಹೆಸರಿನಲ್ಲಿದೆ. ಈ ಮೂವರು ದಿಗ್ಗಜರು ಕೇವಲ 195 ಇನಿಂಗ್ಸ್ಗಳ ಮೂಲಕ 10,000 ರನ್ ಪೂರೈಸಿದ್ದರು.
10 ಸಾವಿರ ರನ್ ಪೂರೈಸಿ ಭರ್ಜರಿ ಶತಕ ಸಿಡಿಸಿದ ಸ್ಮಿತ್:
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಪರ ಆರಂಭಿಕ ಉಸ್ಮಾನ್ ಖ್ವಾಜಾ (147 ) ಸ್ಟೀವ್ ಸ್ಮಿತ್ (104) ಇಬ್ಬರು ಬ್ಯಾಟ್ಸ್‌ಮನ್‌ಗಳು ಭರ್ಜರಿ ಶತಕ ಸಿಡಿಸಿದರು. ಟ್ರಾವಿಸ್ ಹೆಡ್ (57) ಅರ್ಧಶತಕ ಬಾರಿಸಿದರೆ ಮಾರ್ನಸ್ ಲಬುಶೇನ್ (20) ಇಬ್ಬರು ಬ್ಯಾಟ್ಸ್‌ಮನ್‌ಗಳು ಔಟಾಗಿದ್ದಾರೆ. ಶ್ರೀಲಂಕಾ ಪರ ಪ್ರಭಾತ್ ಜಯಸೂರ್ಯ, ವಾಂಡರ್ಸೆ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್ – 330-2
Smith joins an elite list after tallying his 10,000th Test run, but his path to the top has never been straightforward 👏
FEATURE 👉 https://t.co/wJ8dHWnzHc pic.twitter.com/iPrOUcYz89
— Fox Cricket (@FoxCricket) January 29, 2025
You seem to have an Ad Blocker on.
To continue reading, please turn it off or whitelist Udayavani.