ಪ್ಲಾಟ್ ಫಾರ್ಮ್ ಮೇಲೆ ಅಂಗಡಿ ನಿರ್ಮಾಣ : ಸ್ಥಳಾಂತರಕ್ಕೆ ವ್ಯಾಪಾರಸ್ಥರ ಆಗ್ರಹ
Team Udayavani, Feb 23, 2022, 8:05 PM IST
ಭಟ್ಕಳ: ಬಸ್ ನಿಲ್ದಾಣದಲ್ಲಿ ಟೆಂಡರ್ ಮೂಲಕ ಅಂಗಡಿಗಳನ್ನು ಪಡೆದು ನಡೆಸುತ್ತಿರುವವರಿಗೆ ಏಕಾ ಏಕಿ ನಂದಿನಿ ಪಾರ್ಲರ್ ಎನ್ನುವ ಶೆಡ್ ಒಂದನ್ನು ತಮ್ಮ ಅಂಗಡಿಗಳ ಮುಂದೆಯೇ ಪ್ಲಾಟ್ ಫಾರ್ಮ ಮೇಲೆ ಇಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಾವು ಸಾವಿರಾರು ರೂಪಾಯಿ ಬಾಡಿಗೆಗೆ ಟೆಂಡರ್ ಹಿಡಿದು ಅಂಗಡಿಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಈಗಾಗಲೇ ಕರೊನಾದಿಂದ ಸಾಕಷ್ಟು ನಷ್ಟ ಅನುಭವಿಸಿದ ನಮಗೆ ನಮ್ಮ ಅಂಗಡಿಗಳ ಮುಂದೆ ದೊಡ್ಡ ಶೆಡ್ ತಂದಿಟ್ಟಿರುವುದು ಇನ್ನಷ್ಟು ತೊಂದರೆಗೆ ಕಾರಣವಾಗುತ್ತದೆ. ಸಾರಿಗೆ ಇಲಾಖೆಯು ನಮಗೆ ಅನುಕೂಲ ಮಾಡಿಕೊಡಬೇಕೇ ವಿನಹ ಅನನುಕೂಲ ಮಾಡಿಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸುವ ಅವರು ತಕ್ಷಣ ಇದನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಅಂಗಡಿಕಾರ ರಾಘವೇಂದ್ರ ದೇವಡಿಗ ಬಸ್ ನಿಲ್ದಾಣದಲ್ಲಿ ಅಂಗಡಿಕಾರರು 30-40 ಸಾವಿರ ಬಾಡಿಗೆ ಪಡೆದು ಅಂಗಡಿ ನಡೆಸುತ್ತಿದ್ದೇವೆ. ಕೊರೋನಾ ಮತ್ತಿತರ ಕಾರಣದಿಂದ ಸಮರ್ಪಕ ವ್ಯಾಪಾರವಿಲ್ಲದೇ ಬಾಡಿಗೆ ಪಾವತಿಸುವುದೇ ಕಷ್ಟವಾಗಿದೆ. ಇಂತಹ ಸಂಕಷ್ಟಕರ ಪರಿಸ್ಥಿತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಬಸ್‍ನಿಲ್ದಾಣದ ಪ್ಲಾಟ್ ಪಾರ್ಮನಲ್ಲಿ ಶೆಡ್‍ವೊಂದನ್ನು ತಂದಿಡಲಾಗಿದೆ. ಇದನ್ನು ಪ್ಲಾಟ್‍ಫಾರ್ಮ ಮಧ್ಯಭಾಗದಲ್ಲಿಟ್ಟಿರುವುದರಿಂದ ಪ್ರಯಾಣಿಕರಿಗೆ ಓಡಾಡಲು ಕಷ್ಟವಾಗಿದೆ. ಅದಲ್ಲದೇ ಇದರ ಹಿಂದೆಯೇ ಶೌಚಾಲಯ, ಕಂಟ್ರೋಲ್ ರೂಮ್ ಇದೆ. ಇದನ್ನು ನಮ್ಮ ಅಂಗಡಿ ಮುಂದೆಯೇ ಇಟ್ಟಿರುವುದರಿಂದ ನಮ್ಮ ವ್ಯಾಪಾರಕ್ಕೂ ತೊಂದರೆಯಾಗಲಿದ್ದು, ಆದಷ್ಟು ಬೇಗ ಬಸ್ ನಿಲ್ದಾಣದ ಒಂದು ಬದಿಯಲ್ಲಿ ಇದನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : ರಷ್ಯಾ- ಉಕ್ರೇನ್ ಸಂಘರ್ಷ: ಗೋವಾದಲ್ಲಿ ಪ್ರತಿಕೂಲ ಪರಿಣಾಮ
ಇನ್ನೊರ್ವ ಅಂಗಡಿಕಾರ ಮೋಹನ ನಾಯ್ಕ ಮಾತನಾಡಿ ನಂದಿನಿ ಪಾರ್ಲರ್ ಮಾಡುವುದಕ್ಕೆ ನಮ್ಮ ವಿರೋದವಿಲ್ಲ. ಆದರೆ ಇದನ್ನು ನಿಲ್ದಾಣದ ಪ್ಲಾಟ್‍ಪಾರ್ಮನಲ್ಲಿ ಇಡುವುದಕ್ಕೆ ನಮ್ಮ ಆಕ್ಷೇಪವಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದರು. ಈ ಸಂದರ್ಭದಲ್ಲಿ ದಲಿತ ಮುಖಂಡ ಮಾರುತಿ ಪವಾಸ್ಕರ, ಅಂಗಡಿಕಾರರಾದ ಮನೋಜ ನಾಯ್ಕ, ನಾಗೇಶ ಸಾಲಿಗ್ರಾಮ, ರಾಘವೇಂದ್ರ ನಾಯ್ಕ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.