ಆತ್ಮೋನ್ನತಿಯ ದಶಲಕ್ಷಣ ಮಹಾಪರ್ವ


Team Udayavani, Sep 27, 2023, 11:53 PM IST

dashalakshana

ಭಾದ್ರಪದ ಮಾಸದಲ್ಲಿ ಜೈನ ಧರ್ಮೀಯರು ದಶಲಕ್ಷಣ ಪರ್ವವನ್ನು ಆಚರಿಸುತ್ತಾರೆ. ದಶಲಕ್ಷಣ ಪರ್ವವನ್ನು ಜೈನ ಧರ್ಮೀಯರು ಮಾತ್ರವಲ್ಲದೆ ಸರ್ವಧರ್ಮೀಯರೂ ಅನುಸರಿಸಲು ಯೋಗ್ಯವಾಗಿದೆ.

ಜೈನ ಧರ್ಮದಲ್ಲಿ ಪರ್ವಗಳ ರಾಜ ಎಂದೇ ಚಿರಪರಿಚಿತವಾಗಿರುವ ದಶಲಕ್ಷಣ ಪರ್ವವನ್ನು ಪರ್ಯೂಷಣ ಪರ್ವ ಎಂದೂ ಕರೆಯುತ್ತಾರೆ. ಇದನ್ನು ಮುನಿಗಳೂ, ಶ್ರಾವಕ-ಶ್ರಾವಕಿಯರೂ ಆತ್ಮೋನ್ನತಿಗಾಗಿ ಪ್ರತೀ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಪಂಚಮಿಯಿಂದ ಹತ್ತು ದಿನಗಳ ಕಾಲ ಉಪವಾಸ, ತಪ, ಧ್ಯಾನ, ಸ್ವಾಧ್ಯಾಯ ಹಾಗೂ ಸತ್‌ಚಿಂತನೆಗಳ ಮೂಲಕ ಭಕ್ತಿ, ಶ್ರದ್ಧೆಗಳಿಂದ ಆಚರಿಸುತ್ತಾರೆ. ಇದು ಸಂಭ್ರಮ-ಸಡಗರದ ಪರ್ವವಲ್ಲ. ಇದರ ಉದ್ದೇಶ ಮನಃಶುದ್ಧಿ ಹಾಗೂ ಕರ್ಮನಿರ್ಜರೆ, ರಾಗ-ದ್ವೇಷಗಳನ್ನು ದೂರ ಮಾಡುವುದೇ ಆಗಿದೆ.

ಆತ್ಮನಿಗೆ ಹಿತವಾಗುವ ಕ್ರಿಯೆಗಳನ್ನು ಆಚರಿಸುವುದಕ್ಕೆ ವ್ರತ ಎನ್ನುತ್ತಾರೆ. ಜೈನ ಧರ್ಮದ ಪ್ರಕಾರ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯಗಳು ಮೋಕ್ಷಪ್ರಾಪ್ತಿಗೆ ಸಹಕಾರಿ ಯಾಗಿವೆ. ಜೈನ ಧರ್ಮದ ಪವಿತ್ರ ಗ್ರಂಥಗಳಲ್ಲಿ ಒಂದಾದ ತತ್ವಾರ್ಥಸೂತ್ರದಲ್ಲಿ ಉತ್ತಮ ಕ್ಷಮಾ ಮಾರ್ದವಾರ್ಜವ ಸತ್ಯ ಶೌಚಸಂಯಮ ತಪಸ್ಯಾಗಾಕಿಂಚನ್ಯ ಬ್ರಹ್ಮಚರ್ಯಾಣಿ ದಶಧರ್ಮಃ ಎಂದು ಹೇಳಲಾಗಿದೆ. ಉತ್ತಮ ಕ್ಷಮಾ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಸತ್ಯ, ಉತ್ತಮ ಶೌಚ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ-ಇವೇ ಆತ್ಮನ ಹತ್ತು ಶ್ರೇಷ್ಠ ಹಾಗೂ ಸ್ವಾಭಾವಿಕ ಗುಣಗಳಾಗಿವೆ. ಪ್ರತಿಯೊಂದು ಗುಣಗಳನ್ನೂ ಧರ್ಮವೆಂದು ಕರೆದು, ಅವುಗಳ ಹಿಂದೆ ಉತ್ತಮ ಎಂಬ ವಿಶೇಷಣವನ್ನು ಸೇರಿಸಿ ಆಚರಿಸುವುದು ಪರ್ವದ ಮಹತ್ವವನ್ನು ಸ್ಪಷ್ಟಪಡಿಸುತ್ತದೆ. ಜಿನನಾಗುವುದೇ ಪ್ರತಿಯೊಬ್ಬ ಜೈನ ಧರ್ಮೀಯನ ಪರಮ ಉದ್ದೇಶವಾಗಿರುವುದರಿಂದ ಪರಮಾತ್ಮನ ಈ ಹತ್ತು ಗುಣಗಳನ್ನು ತನ್ನಲ್ಲೂ ಅಳವಡಿಸಿ ಕೊಂಡಾಗ ಮಾತ್ರ ಆತ್ಮೋನ್ನತಿಯಾಗಲು ಸಾಧ್ಯವೆಂಬ ನಂಬಿಕೆ ಈ ಪರ್ವದ ಆಚರಣೆಯ ಹಿಂದಿದೆ.

ತಪಸ್ಸಿನಲ್ಲಿ ಬಾಹ್ಯ ತಪಸ್ಸು ಹಾಗೂ ಆಂತರಿಕ ತಪಸ್ಸು ಎಂದು ಎರಡು ವಿಧ. ಬಾಹ್ಯ ತಪಸ್ಸುಗಳಲ್ಲಿ ಉಪವಾಸ, ಅಲ್ಪಾಹಾರ ಸೇವನೆ, ಏಕಾಂತ ಜೀವನ ಮೊದಲಾದುವುಗಳಿವೆ. ಸಂಯಮ ಗುಣ ಬೆಳೆಸಿಕೊಳ್ಳಲು ಇವು ನೆರವಾಗುತ್ತವೆ. ಆಂತರಿಕ ತಪಸ್ಸಿನಲ್ಲಿ ಪ್ರಾಯಶ್ಚಿತ್ತ, ವಿನಯ, ಸೇವೆ, ಸ್ವಾಧ್ಯಾಯ, ವೈರಾಗ್ಯ ಹಾಗೂ ಧ್ಯಾನ ಮೊದಲಾದುವುಗಳು ಸೇರಿವೆ. ತಪಸ್ಸಿನ ಮೂಲಕ ಆತ್ಮ ವೃದ್ಧಿಸುತ್ತದೆ, ಪೂರ್ವಕೃತ ಸಂಚಿತ ಕರ್ಮಗಳನ್ನು ನಾಶ ಮಾಡಿ ಕೊಳ್ಳಲು ಸಾಧ್ಯವಾಗುತ್ತದೆ.

ತಪಸ್ಸನ್ನು ಸಂಸಾರಿಗಳು ಯಥಾಶಕ್ತಿ ಆಚರಿಸುತ್ತಾರೆ. ಆದರೆ ಪರಮೇಷ್ಠಿಗಳೆಂದೇ ಆರಾಧಿಸಲ್ಪಡುವ ದಿಗಂಬರ ಮುನಿಗಳು ಮಾತ್ರ ಉತ್ತಮ ತಪವನ್ನು ಪೂರ್ಣ ಪ್ರಮಾಣದಲ್ಲಿ ಕಠಿನ ವ್ರತನಿಷ್ಠರಾಗಿ ಆಚರಿಸುತ್ತಾರೆ. ತಮಗೆ ಪ್ರಾಣ ಸಂಕಟವಾದರೂ ಅವರೆಂದೂ ಅಸತ್ಯ ನುಡಿಯುವುದಿಲ್ಲ. ಅಂತರಂಗ, ಬಹಿರಂಗ ರೂಪವಾದ ಯಾವುದೊಂದು ಪರಿಗ್ರಹ ವನ್ನೂ ಅವರು ಇಟ್ಟುಕೊಳ್ಳುವುದಿಲ್ಲ. ಬ್ರಹ್ಮಚರ್ಯ ವ್ರತವನ್ನು ಅವರು ಪೂರ್ಣರೂಪದಿಂದ ಪಾಲಿಸುತ್ತಾರೆ. ಹಿತಮಿತ, ಮಧುರವಾದ ಮಾತುಗಳನ್ನಾಡುತ್ತಾರೆ. ಶ್ರಾವಕರ ಮನೆಗೆ ಹೋಗಿ ಶ್ರದ್ಧೆ ಮತ್ತು ವಿನಯಪೂರ್ವಕವಾಗಿ, ವಿಧಿಪೂರ್ವಕ ಅವರು ಕೊಟ್ಟ ಆಹಾರವನ್ನು ದಿನದಲ್ಲಿ ಒಂದು ಬಾರಿ ಮಾತ್ರ ಸ್ವೀಕರಿಸುತ್ತಾರೆ. ಭೋಜನದಲ್ಲಿ ಏನಾದರೂ ದೋಷವುಂಟಾದರೆ ತತ್‌ಕ್ಷಣ ಭೋಜನವನ್ನು ತ್ಯಾಗ ಮಾಡುತ್ತಾರೆ. ಭೋಜನದೊಡನೆ ನೀರನ್ನು ಒಂದೇ ಬಾರಿ ಸ್ವೀಕರಿಸುತ್ತಾರೆ. ಭೋಜನ ನೀಡುವವನ ದೊಡ್ಡಸ್ಥಿಕೆ, ಬಡತನಗಳ ಮೇಲೆ ಲಕ್ಷ್ಯವಿಡುವುದಿಲ್ಲ. ಕೇವಲ ಆತನ ಭಾವಶುದ್ಧಿ ಹಾಗೂ ಆಹಾರದ ಶುದ್ಧಿಯ ಮೇಲೆ ಮಾತ್ರ ಲಕ್ಷ್ಯವಿಡುತ್ತಾರೆ.

ಮುನಿಧರ್ಮದ ಈ ಕಠಿನ ಚರ್ಯೆಗೆ ಪ್ರಸ್ತುತ ಜ್ವಲಂತವಾದ ನಿದರ್ಶನವನ್ನು ನೀಡುವುದು ಔಚಿತ್ಯಪೂರ್ಣವಾಗಿದೆ. ಜೈನರ ಅತಿಶಯ ಕ್ಷೇತ್ರವಾದ ಸಮ್ಮೇದ ಶಿಖರ್ಜಿಯ ಪಾರ್ಶ್ವನಾಥ ಕೂಟದಲ್ಲಿ ಆಚಾರ್ಯ ಪೂಜ್ಯಶ್ರೀ 108 ಪ್ರಸನ್ನ ಸಾಗರ್‌ಜಿ ಮುನಿಮಹಾರಾಜರು ಚಾತುರ್ಮಾಸ ವ್ರತಾಚರಣೆಯಲ್ಲಿದ್ದು ಜಪ, ತಪ, ಧ್ಯಾನ, ಉಪವಾಸ, ಸ್ವಾಧ್ಯಾಯ ಮೊದಲಾದ ಆತ್ಮಚಿಂತನೆಯೊಂದಿಗೆ ಅನೇಕ ವ್ರತ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಪೂಜ್ಯರು ದಿನಾಂಕ 14-09-2021ರಿಂದ 28-01-2023ರ ವರೆಗೆ ಸಿಂಹನಿಷ್ಕ್ರಿàಡಿತ ವ್ರತವೆಂಬ ಕಠಿನ ವ್ರತವನ್ನು ಆಚರಿಸಿದ್ದಾರೆ.

ಈ ವ್ರತವನ್ನು ವ್ರತಗಳ ರಾಜ ಎನ್ನುತ್ತಾರೆ. ಈ ವ್ರತಧಾರಣೆ ಮಾಡಿದ ಸಾಧಕ ಮುನಿಗಳು ಒಂದು ದಿನ ಆಹಾರ, ಒಂದು ದಿನ ಉಪವಾಸ, ಒಂದು ದಿನ ಆಹಾರ, ಎರಡು ದಿನ ಉಪವಾಸ, ಒಂದು ದಿನ ಆಹಾರ, ಮೂರು ದಿನ ಉಪವಾಸ – ಈ ಕ್ರಮದಲ್ಲಿ ಆಹಾರ ಮತ್ತು ಉಪವಾಸಗಳ ನಡುವಿನ ದಿನಗಳ ಅಂತರವನ್ನು ಹೆಚ್ಚಿಸುತ್ತಾ ಹೋಗಬೇಕಾಗುತ್ತದೆ. ಈ ವ್ರತದ ನಡುವೆ ಕಠಿನ ಮೌನವ್ರತವನ್ನೂ ಆಚರಿಸುತ್ತಾರೆ. ಹೀಗೆ ಒಟ್ಟು 145 ದಿನಗಳ ಕಾಲ ಉಪವಾಸ ಮತ್ತು ಕೇವಲ 32 ದಿನ ಆಹಾರ ಸ್ವೀಕಾರ ಮಾಡಿದರೆ ಅದನ್ನು ಸಿಂಹನಿಷ್ಕ್ರಿಡಿತ ವ್ರತ ಎನ್ನುತ್ತಾರೆ.
ಉಪವಾಸ ಎಂದರೇನು? ಉಪ ಅಂದರೆ ಆತ್ಮ, ವಾಸ ಅಂದರೆ ತಲ್ಲೀನನಾಗುವುದು ಎಂದು ಅರ್ಥ. ಹಾಗಾಗಿ ಉಪವಾಸ ಅಂದರೆ ಆಹಾರ ಸೇವಿಸದೆ ಇರುವುದು ಮಾತ್ರವಲ್ಲ, ಆತ್ಮನ ಚಿಂತನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು ಕೂಡ ಆಗಿದೆ. ಪೂಜ್ಯಶ್ರೀ 108 ಶ್ರೀ ಪ್ರಸನ್ನಸಾಗರ ಮುನಿ ಮಹಾರಾಜರ ಸಿಂಹನಿಷ್ಕ್ರಿಡಿತ ವ್ರತದ ಅವಧಿ 557 ದಿನಗಳು. ಇಷ್ಟೂ ದಿನ ಪೂಜ್ಯರು ಮೌನವ್ರತದಲ್ಲಿದ್ದರು. ಇದರಲ್ಲಿ 61 ದಿನ ಮಾತ್ರ ಆಹಾರವನ್ನು ಸ್ವೀಕರಿಸಿದ್ದು, 496 ದಿನ ಉಪವಾಸ ವ್ರತದಲ್ಲಿದ್ದರು.

ಆಧುನಿಕ ಯುಗದಲ್ಲಿ ಮುನಿಧರ್ಮದ ಆಚರಣೆಯನ್ನು ಪ್ರಾರಂಭಿಸಿದ ಪರಮಪೂಜ್ಯ ಆಚಾರ್ಯ 108 ಶ್ರೀ ಶಾಂತಿಸಾಗರ ಮುನಿಮಹಾರಾಜರು ತಮ್ಮ ಜೀವಿತಾವಧಿಯಲ್ಲಿ ಮೂರು ಸಲ ಸಿಂಹನಿಷ್ಕ್ರಿಡಿತ ವ್ರತಾಚಾರಣೆ ಮಾಡಿದ್ದರು. ಜೈನ ಮುನಿಗಳ ಆಹಾರ ಪದ್ಧತಿ ಅತ್ಯಂತ ಕ್ಲಿಷ್ಟಕರವಾಗಿದ್ದು, ಅದರಲ್ಲೂ ಇಂಥ ಪರ್ವಗಳು ಬಂದಾಗ ಹೆಚ್ಚಿನ ಮುನಿಗಳು 10 ದಿನಗಳ ಕಾಲ ನೀರನ್ನೂ ಸೇವಿಸದೆ ಉಪವಾಸ ವ್ರತವನ್ನು ಆಚರಿಸುತ್ತಾರೆ.

ಭತೃಹರಿಯು ವೈರಾಗ್ಯ ಶತಕದಲ್ಲಿ ಹೀಗೆಂದಿದ್ದಾರೆ: ಯೋಗಿಗಳಿಗೆ ಪವಿತ್ರವಾದ ಕೈಗಳೇ ಭೋಜನಪಾತ್ರಗಳು: ಭಿಕ್ಷೆಯಿಂದ ಎತ್ತಿದ ಅನ್ನವೇ ಆಹಾರವು. ದಶದಿಕ್ಕುಗಳೇ ವಿಶಾಲವಾದ ವಸ್ತ್ರವು. ಅಖಂಡ ಭೂಮಂಡಲವೇ ಹಾಸಿಗೆಯು. ಈ ರೀತಿಯಲ್ಲಿ ಯಾವ ಮಹಾಪುರಷರು ಇರುವರೋ ಅವರು ಜನನ ಮರಣ ರೂಪವಾದ ಸಂಸಾರ ಕರ್ಮವನ್ನು ನಾಶಪಡಿಸಿಕೊಂಡು ಮೋಕ್ಷಗಾಮಿಗಳಾಗುವರು ಇದು ಜೈನ ಮುನಿಗಳಿಗೆ ಸಲ್ಲುವ ಮಾತುಗಳಾಗಿವೆ. ಆತ್ಮನ ಈ ಹತ್ತು ಶ್ರೇಷ್ಠಗುಣಗಳನ್ನು ನಾವು ನಮ್ಮ ಬದುಕಿನಲ್ಲಿ ಅಲ್ಪ ಪ್ರಮಾಣದಲ್ಲಾದರೂ ಅಳವಡಿಸಿಕೊಂಡಲ್ಲಿ ಸ್ವಹಿತ ಹಾಗೂ ಪರಹಿತಗಳು ಉಂಟಾಗಿ ಲೋಕಕಲ್ಯಾಣವಾಗುತ್ತದೆ.

ಹೇಮಾವತಿ ವೀ.ಹೆಗ್ಗಡೆ, ಶ್ರೀ ಕ್ಷೇತ್ರ ಧರ್ಮಸ್ಥಳ

ಟಾಪ್ ನ್ಯೂಸ್

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BJP Congress;ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರಿಗೆ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.