Belthangady: ನೆಲ ಮಹಡಿಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
Team Udayavani, Sep 15, 2023, 1:09 AM IST
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕಡಂಬಳ್ಳಿಯ ಪ್ರಮೋದ್ ವಿ. ಭಿಡೆ ಅವರ ನಿವಾಸದ ನೆಲ ಮಾಳಿಗೆಯಲ್ಲಿ ಇರಿಸಿದ್ದ ಚಿನ್ನಾಭರಣ ಕಳವಾದ ಘಟನೆ ನಡೆದಿದೆ.
ಜು. 5ರಂದು ಮನೆಯ ಸಾರಣೆ ಹಾಗೂ ಪೈಂಟಿಗ್ ಕೆಲಸವನ್ನು ಪ್ರಾರಂಭಿಸಿದ್ದು, ಕೆಲಸ ಪ್ರಾರಂಭ ಮಾಡುವ ಮುಂಚಿತವಾಗಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು, ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಇರಿಸಿದ್ದರು. ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳ ಕೋಣೆಗೆ ಬೀಗ ಹಾಕದೆ ಇದ್ದು, ಕೆಲಸಕ್ಕೆ ಸುಮಾರು 10ರಿಂದ 13 ಕಾರ್ಮಿಕರು ಬಂದಿದ್ದರು.
ಜು. 19ರಂದು ಕೆಲಸ ಮುಗಿದಿದ್ದು, ಸೆ. 12ರಂದು ಬೆಳಗ್ಗೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭ ಆಭರಣ ಇಟ್ಟಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಇಡಲಾಗಿದ್ದ ಒಟ್ಟು 122 ಗ್ರಾಂ ಚಿನ್ನಾಭರಣ ಕಳವಾಗಿರುವುದು ಕಂಡುಬಂದಿದೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 5 ಲಕ್ಷ ರೂ. ಆಗಿದೆ. ಚಿನ್ನಾಭರಣವಿರಿಸಿ ಮೂರು ತಿಂಗಳವರೆಗೂ ಮನೆಮಂದಿ ಪರಿಶೀಲಿಸದೇ ಇರುವುದರಿಂದ ಯಾವಾಗ ಕಳವಾಗಿರಬಹುದು ಎಂಬುದರ ಬಗ್ಗೆ ನಿಖರತೆಯಿಲ್ಲದೆ ಮನೆಮಂದಿ ಚಿಂತೆಗೀಡಾಗಿದ್ದಾರೆ.
ಪೊಲೀಸ್ ತನಿಖೆ ಚುರುಕು
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು ಕಾರ್ಮಿಕರ ಪೈಕಿ ಹಲವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಮಂದಿ ಊರಲ್ಲಿ ಇರದೇ ಇರುವುದರಿಂದ ಅವರನ್ನು ಕೇಂದ್ರೀಕರಿಸಿ ತನಿಖೆಯನ್ನು ಚುರುಕುಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
Supreme Court: ತೀರ್ಪಿನಲ್ಲಿ ಲವ್ ಜೆಹಾದ್ ಉಲ್ಲೇಖ ತೆಗೆದುಹಾಕಲು ಸುಪ್ರೀಂ ಕೋರ್ಟ್ ನಕಾರ
Kumbh Mela: ನೇಪಾಲ, ಉತ್ತರಾಖಂಡದಿಂದ ಪೂಜಾ ಸಾಮಗ್ರಿ ಖರೀದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.