Road Mishap ಮಿನಿ ಬಸ್ ಅಪಘಾತ; ಹಲವರಿಗೆ ಗಾಯ
Team Udayavani, May 14, 2024, 12:40 AM IST
ಬೆಳ್ತಂಗಡಿ: ಮಂಗಳೂರು-ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ವ್ಯಾಪ್ತಿಯ ಚಿಬಿದ್ರೆಯ ಕಾಪು ಚಡಾವು ಎಂಬಲ್ಲಿ ರವಿವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಗುಡ್ಡ ಏರಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಘಟನೆಯಲ್ಲಿ 17 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಬೆಂಗಳೂರಿನಿಂದ ಚಾರ್ಮಾಡಿ ಮೂಲಕ ಮಂಗಳೂರು ಕಡೆ ಪ್ರಯಾಣಿಸುತ್ತಿದ್ದ ಮಿನಿ ಬಸ್ ರಸ್ತೆ ಬಿಟ್ಟು ನದಿ ಬದಿ ಇರುವ ಗುಡ್ಡವನ್ನು ಹತ್ತಿದಾಗ ಖಾಸಗಿ ವಿದ್ಯುತ್ ಲೈನ್ ಕಂಬಕ್ಕೆ ಬಡಿದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ.
ಅಪಘಾತದಲ್ಲಿ ಬೆಂಗಳೂರು ಮೂಲದ ವೆಂಕಟಸ್ವಾಮಪ್ಪ (45) ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಳೆಮುರಿತ ಹಾಗೂ ಇತರ ಗಾಯಗೊಳಗಾಗಿರುವ ಕೀರ್ತನಾ (15), ತನಿಷ್ಕಾ (7), ಯಶವಂತ (21), ರೂಪಾ(37), ಹಂಸಾ (39), ತನುಶ್ರೀ(21), ವಿಕಾಸ್ (13), ಅಖೀಲಾ (23), ರತ್ನಮ್ಮ (47), ಬಾಲಕೃಷ್ಣ (33), ಎಲ್ಲಮ್ಮ (62), ರೂಪಾ (33), ಪ್ರೀತಮ್ (11) ಯಲ್ಲಮ್ಮ, ಪಾವನಾ, ಮಂಜುಳಾ, ಬಿಂದುಶ್ರೀ ಮಿಥುನ್ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳೀಯರ ಸಹಕಾರದಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.
ಕೆಳಭಾಗ ಮೃತ್ಯುಂಜಯ ನದಿ
ಅಪಘಾತ ಸ್ಥಳವೂ ತೀರ ತಿರುವಾಗಿದೆ. ಬಸ್ ಗುಡ್ಡ ಹತ್ತಿದ ಸ್ಥಳದಲ್ಲಿ ಖಾಸಗಿ ವಿದ್ಯುತ್ ಲೈನ್ನ ಕಂಬವಿದ್ದ ಕಾರಣ ಅದಕ್ಕೆ ಬಡಿದು ನಿಂತಿದೆ. ವಿದ್ಯುತ್ ಕಂಬವಿಲ್ಲದಿದ್ದರೆ ಕೆಳಭಾಗದಲ್ಲಿ ಹರಿಯುವ ಮೃತ್ಯುಂಜಯ ನದಿಗೆ ಮಿನಿ ಬಸ್ ಬೀಳುವ ಸಾಧ್ಯತೆ ಇತ್ತು. ರವಿವಾರ ಮಳೆ ಇದ್ದ ಕಾರಣ ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಕಳೆದ ವರ್ಷ ಇದೇ ಸ್ಥಳದಿಂದ ಸುಮಾರು 50 ಮೀ. ಕೆಳಭಾಗದಲ್ಲಿ ರಿಕ್ಷಾ ನದಿಗೆ ಉರುಳಿ ಮಹಿಳೆಯೊಬ್ಬರು ನೀರಲ್ಲಿ ಮುಳುಗಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.