B.Y ರಾಘವೇಂದ್ರ ಅವರಿಂದ ಸಚಿವೆ ನಿರ್ಮಲಾ ಭೇಟಿ- ಗೋಡಂಬಿ ಉದ್ಯಮಕ್ಕೆ ನೆರವಿಗೆ ಮನವಿ
Team Udayavani, Aug 10, 2023, 11:29 PM IST
ಬೈಂದೂರು/ಕುಂದಾಪುರ: ಕರಾವಳಿ ಕರ್ನಾಟಕವು ಗೋಡಂಬಿ ಸಂಸ್ಕರಣ ಉದ್ದಿಮೆಗಳ ಕೇಂದ್ರ ಮಾತ್ರವಲ್ಲದೆ ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವೂ ಆಗಿದೆ. ಹಾಗಾಗಿ ಗೋಡಂಬಿ ಸಂಸ್ಕರಣ ಉದ್ಯಮದ ಸಮಸ್ಯೆಗಳನ್ನು ಪರಿಹರಿಸುವಂತೆ ಕೋರಿ ಸಂಸದ ಬಿ.ವೈ. ರಾಘವೇಂದ್ರ ಗುರು ವಾರ ಹೊಸದಿಲ್ಲಿಯಲ್ಲಿ ಕೇಂದ್ರ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದರು.
ಈ ಉದ್ಯಮದಲ್ಲಿ 1.50 ಲಕ್ಷಕ್ಕೂ ಮಿಕ್ಕಿ ಮಹಿಳೆಯರು ಕೆಲಸ ಮಾಡು ತ್ತಿದ್ದು, ಇವರ ಕುಟುಂಬಗಳಿಗೆ ಇದೇ ಆದರೆ ಪ್ರಸ್ತುತ ಗೋಡಂಬಿ ಸಂಸ್ಕರಣ ಘಟಕಗಗಳಿಗೆ ಕೊರೊನಾ ಹಾಗೂ ಕೊರೊನಾನಂತರದ ಅವಧಿಯ ಎರಡೆ ರಡು ರೀತಿಯ ಸಾಲಗಳನ್ನು ಮರು ಪಾವತಿಸಲು ಸಮಸ್ಯೆಯಾಗಿದೆ. ತಾವು ಮಧ್ಯಪ್ರವೇಶಿಸಿ, ಇಎಂಐ ಭಾರ ಕಡಿಮೆ ಮಾಡಬೇಕು ಎಂದು ಕೋರಿದರು.
ಏನೆಲ್ಲ ಬೇಡಿಕೆ ಸಲ್ಲಿಕೆ?
ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಲೋನ್ ಸಾಲದ ಮರುಪಾವತಿ ಕನಿಷ್ಠ 18 ತಿಂಗಳು ಅಮಾನತು (ಮೊರಟೋರಿಯಂ) ಗೊಳಿಸಿ ಮತ್ತು ಅದಕ್ಕೆ ಅನುಗುಣವಾಗಿ ಮರುಪಾವತಿ ಅವ ಧಿ ವಿಸ್ತರಿಸಿ, ಗ್ಯಾರಂಟಿಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ಇಎಂಐ ಪಾವತಿ ಮುಕ್ತಾಯ ಹಂತದವರೆಗೆ, ಕೊರೊನಾ ಅನಂತರದ ಗ್ಯಾರಂಟಿಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ ವಿಸ್ತರಣೆ ಸಾಲದ ಇಎಂಐ ಅಮಾನತುಗೊಳಿಸಿ, ಅದರ ಮರು ಪಾವತಿ ಅವ ಧಿ ವಿಸ್ತರಿಸಿ, ನಿ ಧಿಯ ಬಡ್ಡಿ ಅವ ಧಿಯ ಸಾಲ (ಎಫ್‌ಐಟಿಎಲ್) ಒದಗಿಸುವಂತೆ ಕೋರಿದರು. ಅದೇ ರೀತಿ ವರ್ಕಿಂಗ್ ಕ್ಯಾಪಿಟಲ್ ಟರ್ಮ್ ಸಾಲ ಹಾಗೂ ಕೋವಿಡ್ ಸಾಲದ ಮೇಲಿನ ಬಡ್ಡಿದರ ಇಳಿಕೆಗೂ ಒತ್ತಾಯಿಸಿದರು.
ಆಮದು ಸಂಕಷ್ಟ
ವಿಯೆಟ್ನಾಂನಿಂದ ಕಡಿಮೆ ಗುಣಮಟ್ಟದ ಕಚ್ಚಾ ಗೋಡಂಬಿಯನ್ನು ಆಮದು ಮಾಡಿಕೊಳ್ಳುತ್ತಿರುವುದ ರರಿಂದ ಇಲ್ಲಿನ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಜುಲೈಯಲ್ಲಿ ಉಡುಪಿಗೆ ಭೇಟಿ ನೀಡಿದ್ದ ಸಚಿವೆ ನಿರ್ಮಲಾಗೆ ಕರ್ನಾಟಕ ಗೋಡಂಬಿ ಉತ್ಪಾದಕರ ಸಂಘವು ಮನವಿ ಸಲ್ಲಿಸಿದ್ದ ಬಗ್ಗೆಯೂ ಸಂಸದರು ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.