ಸಾರಿಗೆ ಸಚಿವರ ತಾಲೂಕಿನಲ್ಲೇ ವಾಹನ ನಂಬರ್ ಪ್ಲೇಟ್ ನಿಯಮಕ್ಕಿಲ್ಲ ಕಿಮ್ಮತ್ತು
Team Udayavani, Dec 20, 2020, 2:02 PM IST
ಅಥಣಿ: ಸಾರಿಗೆ ಸಚಿವರ ಕ್ಷೇತ್ರ ಸೇರಿದಂತೆ ಇಡೀ ತಾಲೂಕಿನಾದ್ಯಂತ ಅಸಂಖ್ಯಾತ ಬೈಕ್ ಸವಾರರು ತಮ್ಮ ವಾಹನಗಳಿಗೆ ಹೊಸ ಡಿಸೈನ್‌ನ ನಂಬರ್ ಪ್ಲೇಟ್ ಅಳವಡಿಸಿಕೊಂಡು ತಿರುಗಾಡಿ ಸಾರಿಗೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದರೂ ಕೂಡ ಪೊಲೀಸ್
ಇಲಾಖೆ ಹಾಗೂ ಆರ್.ಟಿ.ಓ ಅಧಿಕಾರಿಗಳು ಮಾತ್ರ ಇದು ತಮಗೆ ಸಂಬಂಧಿಸಿಲ್ಲ ಎಂಬ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ಬೈಕ್ ಸೇರಿದಂತೆ ಎಲ್ಲಾ ವಾಹನಗಳ ನಂಬರ್‌ಪ್ಲೇಟ್ ಹೇಗಿರಬೇಕೆಂದು ನಿಯಮಗಳಿವೆ. ಪ್ರತಿಯೊಂದು ವಾಹನಗಳ ನಂಬರ್‌ಪ್ಲೇಟ್ ಅಳತೆ, ಅಕ್ಷರಗಳ ವಿನ್ಯಾಸಗಳ ಬಗ್ಗೆ ನಿರ್ದಿಷ್ಟ ಮಾನದಂಡವಿದೆ. ಆದರೆ ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ನಂಬರ್‌ಪ್ಲೇಟ್ ಅಳವಡಿಸಿಕೊಂಡು ಅನೇಕರು ಯಾವುದೇ ಭಯವಿಲ್ಲದೆ ತಿರುಗಾಡುತ್ತಿರುವುದು
ಸಾಮಾನ್ಯವಾಗಿಬಿಟ್ಟಿದೆ.
ಬಹುತೇಕ ಯುವಜನರಲ್ಲಿ ಇಂತಹ ಫ್ಯಾನ್ಸಿ ನಂಬರ್ ಪ್ಲೇಟ್‌ಗಳ ಹುಚ್ಚು ಅತಿರೇಕಕ್ಕೂ ಹೋದದ್ದುಂಟು. ಕೆಲವರು ದಾದಾ, ಬಾಸ್, ರಾಜೆ, ಬಪ್ಪಾ ಮೋರಯಾ, ಅಪ್ಪನ ಆಶೀರ್ವಾದ, ಡ್ಯಾಡ್ ಗಿಫ್ಟ, ಮಹಾನಾಯಕ, ಅಥಣೀಶ, ಚಿನ್ನು, ಆಂಜನೇಯನ ಮುಖ ಮುಂತಾದವುಗಳು ನಂಬರ್‌ಪ್ಲೇಟ್‌ಗಳಲ್ಲಿ ರಾರಾಜಿಸುತ್ತಿವೆ. ಇನ್ನೂ ಕೆಲವರ ನಂಬರ್‌ಪ್ಲೇಟ್‌ಗಳಲ್ಲಿ ವಾಹನದ ನೋಂದಣಿ ಸಂಖ್ಯೆಯೇ ಇರುವುದಿಲ್ಲ ಬದಲಾಗಿ ಚಿತ್ರನಟರ ಪೊಟೊಗಳೇ ನಂಬರ್ ಪ್ಲೇಟ್‌ಗಳಾಗಿದ್ದು ಇದನ್ನು ನೋಡಿ ಅನೇಕರು ಅದೇ ರೀತಿ ಹಾಕಿಸುತ್ತಿದ್ದಾರೆ.
ವಾಹನ ಪತ್ತೆಗೆ ಸಮಸ್ಯೆ, ಅಪರಾಧ, ಕಳವು ಅಥವಾ ನಿಯಮ ಉಲ್ಲಂಘನೆ ಆದಾಗ ಸರಿಯಾಗಿ ನಂಬರ್ ಬರೆಸದ ವಾಹನ ಪತ್ತೆ ಹಚ್ಚುವುದು ಪೊಲೀಸರಿಗೆ ಕಠಿಣವಾಗುತ್ತದೆ. ಸರಗಳ್ಳತನ ಮಾಡಲು ದುಷ್ಕರ್ಮಿಗಳು ಪ್ರಮುಖವಾಗಿ ದ್ವಿಚಕ್ರ ವಾಹನಗಳನ್ನೇ ಬಳಸುತ್ತಾರೆ. ಇಂತಹ ಸಂದರ್ಭದಲ್ಲಿ ವಾಹನದ ನೊಂದಣಿ ಸಂಖ್ಯೆ ಗುರುತಿಸುವುದು ಪ್ರಮುಖವಾಗುತ್ತದೆ. ಆದರೆ ಫ್ಯಾನ್ಸಿ ನಂಬರ್ ಪ್ಲೇಟ್‌ಗಳಿಂದ ವಾಹನ ಪತ್ತೆ ಸಾಧ್ಯವಾಗದು.
ಸುಖಾಸುಮ್ಮನೆ ಶೋಕಿಗಾಗಿ ಏನೇನೋ ಬರೆದುಕೊಂಡು ಓಡಾಡುವವರಿಗೆ ಕಾನೂನು ರೀತಿ ಬಿಸಿಮುಟ್ಟಿಸುವುದು ಅಗತ್ಯವಾಗಿದೆ.
ಮಾಸ್ಕ್-ಹೆಲ್ಮೆಟ್ ಕಡ್ಡಾಯಕ್ಕಷ್ಟೇ ಆಸಕ್ತಿ: ಮಾಸ್ಕ್ ಹಾಗೂ ಹೆಲ್ಮೆಟ್ ಹಾಕಿಕೊಳ್ಳಿ ಎಂದು ಹೇಳಿ ದಂಡ ಹಾಕುವ ಪೋಲಿಸರು ಇತರ ನಿಯಮಗಳ ಪಾಲನೆಗೆ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ.
ಪೊಲೀಸರು ಲೈಸನ್ಸ್, ಆರ್.ಸಿ, ವಿಮೆ, ಮಾಲಿನ್ಯ ನಿಯಂತ್ರಣ ಚೀಟಿ ಮುಂತಾದ ದಾಖಲೆಗಳು ಸಹ ಸರಿಯಾಗಿ ಇವೆಯೋ
ಇಲ್ಲವೋ ಎಂದು ತಪಾಸಣೆ ಮಾಡಿದರೆ ನಿಜವಾದ ಸಾರಿಗೆ ನಿಯಮಗಳ ಪಾಲನೆಯಾಗುತ್ತದೆ ಎನ್ನುವುದು ಸಾರ್ವಜನಿಕರ ಅಂಬೋಣ.
– ಸಂತೋಷ ಬಡಕಂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.