Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್ ಹಿಟ್ ʼಮಿರ್ಜಾಪುರ್ʼ ಸರಣಿ
Team Udayavani, Oct 28, 2024, 12:02 PM IST
ಮುಂಬಯಿ: ಹಿಂದಿಯ ಸೂಪರ್ ಹಿಟ್ ವೆಬ್ ಸಿರೀಸ್ ʼಮಿರ್ಜಾಪುರ್ʼ (Mirzapur) ಸೀಸನ್ -3 ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತು. ʼಮಿರ್ಜಾಪುರ್ʼ ಸರಣಿಗೆ ಅಪಾರ ವೀಕ್ಷಕರ ಬಳಗವಿದೆ. ಇದುವರೆಗೆ ಬಂದಿರುವ ಮೂರು ಸೀಸನ್ ಗಳು ಕೂಡ ಅಮೇಜಾನ್ ಪ್ರೈಮ್‌ನಲ್ಲಿ ದೊಡ್ಡ ಹಿಟ್ ಆಗಿದೆ. ಇದೀಗ ʼಮಿರ್ಜಾಪುರ್ʼ ಸಿನಿಮಾವಾಗಿ ತೆರೆ ಮೇಲೆ ಬರಲಿದೆ.
ʼಮಿರ್ಜಾಪುರ್ʼ ಕ್ರೈಮ್ ಲೋಕದ ಕರಾಳ ಕಥೆ ಬಿಗ್ ಸ್ಕ್ರೀನ್ ನಲ್ಲಿ ಬರಲಿದೆ. ʼಮಿರ್ಜಾಪುರ್ʼ ಸಿನಿಮಾವಾಗಿ ಬರಲಿದೆ. ಇದನ್ನು ಅನೌನ್ಸ್ ಮಾಡಲು ಚಿತ್ರತಂಡ ಟೀಸರ್ ರಿಲೀಸ್ ಮಾಡಿದೆ.
ಇದನ್ನೂ ಓದಿ: Bellary: ಕನ್ನಡಿಗರಿಗೆ, ಯಶ್ ಅಭಿಮಾನಿಗಳಿಗೆ ಅವಮಾನ ಮಾಡಿಲ್ಲ: ಪುಷ್ಪ 2 ವಿತರಕ
ಪಂಕಜ್ ತ್ರಿಪಾಠಿ, ಅಲಿ ಫಜಲ್, ಅಭಿಷೇಕ್ ಬ್ಯಾನರ್ಜಿ, ದಿವ್ಯೆಂದು ತಮ್ಮ ಪಾತ್ರದಲ್ಲಿ ಬಂದು ʼಮಿರ್ಜಾಪುರ್ʼ ನೋಡಲು ಈ ಬಾರಿ ನೀವು ಥಿಯೇಟರ್ ಗೆ ಬರಬೇಕೆಂದು ಡೈಲಾಗ್ಸ್ ಗಳನ್ನು ಹೇಳಿದ್ದಾರೆ.
ನಿಮ್ಮ ಬಳಿ ʼಮಿರ್ಜಾಪುರ್ʼ ಬರಲ್ಲ, ನೀವು ʼಮಿರ್ಜಾಪುರ್ʼ ನೋಡಲು ಬರಬೇಕೆಂದು ಅಲಿ ಫಜಲ್ ಹೇಳಿದ್ದಾರೆ. ಹಿಂದಿ ಸಿನಿಮಾದ ಹೀರೋ ನಾನು, ಹಿಂದಿ ಸಿನಿಮಾ ನೋಡಲು ಥಿಯೇಟರ್ ಗೆ ಬರಬೇಕೆಂದು ದಿವ್ಯೆಂದು ಹೇಳಿದ್ದಾರೆ.
Ab bhaukaal bhi bada hoga, aur parda bhi. #MirzapurTheFilm, coming soon.@TripathiiPankaj #AliFazal @divyenndu @nowitsabhi @gurmmeet #PuneetKrishna @ritesh_sid @J10kassim @vishalrr #AbbasKhan @excelmovies @PrimeVideoIN pic.twitter.com/eWMuCvwSDb
— Farhan Akhtar (@FarOutAkhtar) October 28, 2024
2018 ರಲ್ಲಿ ʼಮಿರ್ಜಾಪುರ್ʼ ಮೊದಲ ಸೀಸನ್ ಬಂದಿತ್ತು. ಆರಂಭದಿಂದಲೇ ಭರ್ಜರಿ ವೀಕ್ಷಣೆ ಕಂಡಿದ್ದ ʼಮಿರ್ಜಾಪುರ್ʼ ಅಪರಾಧ ಜಗತ್ತಿನ ಭೀಕರತೆಯನ್ನು ತೆರದಿಟ್ಟಿತ್ತು. ಅಲಿ ಫಜಲ್ ಅವರ ʼಗುಡ್ಡು ಭಯ್ಯಾʼ ಹಾಗೂ ಪಂಕಜ್ ತ್ರಿಪಾಠಿ ಅವರ ʼಕಾಲೀನ್ ಭಯ್ಯಾʼ ಪಾತ್ರ ಅಪಾರ ಮಂದಿಯ ಗಮನ ಸೆಳೆದಿತ್ತು. ಈ ಪಾತ್ರದ ಬಳಿಕ ಅವರ ಅಭಿನಯಕ್ಕೆ ಬಹುತೇಕರು ಫಿದಾ ಆಗಿದ್ದರು. ಮೊದಲ ಸೀಸನ್ ಬಳಿಕ ಎರಡನೇ ಸೀಸನ್ ಗೆ ಬೇಡಿಕೆ ಹೆಚ್ಚಾಗಿತ್ತು. 2020 ರಲ್ಲಿ ಎರಡನೇ ಸೀಸನ್ ಬಂದಿತ್ತು. ಇದಾದ ಬಳಿಕ ನಾಲ್ಕು ವರ್ಷದ ಬಳಿಕ ಮೂರನೇ ಸೀಸನ್ ಇದೇ ವರ್ಷ ತೆರೆಕಂಡಿತು.
2026ಕ್ಕೆ ʼಮಿರ್ಜಾಪುರ್ʼ ಸಿನಿಮಾ ತೆರೆಗೆ ಬರಲಿದ್ದು, ಈ ಸಿನಿಮಾಕ್ಕೆ ಗುರ್ಮೀತ್ ಸಿಂಗ್ ಅವರ ನಿರ್ದೇಶನವಿರಲಿದೆ. ಪುನೀತ್ ಕೃಷ್ಣ ಕಥೆ ಬರೆದಿದ್ದಾರೆ. ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ನಲ್ಲಿ ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.