ವಿಧಾನಸಭೆಯಲ್ಲಿ ಕರಾವಳಿ ಬಿಜೆಪಿ ಶಾಸಕರಿಂದಲೇ ದುರ್ನಡತೆ: ಕಾಂಗ್ರೆಸ್
Team Udayavani, Jul 24, 2023, 5:05 AM IST
ಮಂಗಳೂರು: ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ಅನಾಗರಿಕ ವರ್ತನೆ ಹಾಗೂ ದುರ್ನಡತೆಯಲ್ಲಿ ಕರಾವಳಿಯ ಬಿಜೆಪಿ ಶಾಸಕರೂ ಭಾಗಿ ಯಾ ಗಿರು ವುದು ಖೇದಕರ. ಅವರನ್ನು ಅಮಾನತು ಮಾಡುವ ಮೂಲಕ ಸ್ಪೀಕರ್ ಸೂಕ್ತ ನಿರ್ಧಾರ ಕೈಗೊಂಡಿ ದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜಾ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿಯ ಕೇಂದ್ರ ನಾಯಕರ ಆಗಮನದ ವೇಳೆ ಬಿಜೆಪಿ ರಾಜ್ಯ ಮುಖಂಡರ ಮನವಿಯಂತೆ ಅಧಿ ಕಾರಿಗಳು ಸ್ವಾಗತ ಕೋರಿದ್ದರು. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲೂ ಇಡೀ ರಾಷ್ಟ್ರದ ನಾಯಕರು ರಾಜ್ಯಕ್ಕೆ ಬಂದಾಗ ಹಿರಿಯ ಅಧಿಕಾರಿಗಳು ಸ್ವಾಗತಕ್ಕೆ ತೆರಳಿದ್ದರು ಎಂದು ಹರೀಶ್ ಕುಮಾರ್ ಹೇಳಿದರು.
ಮಣಿಪುರ ಗಲಭೆ
ನಿಲ್ಲಿಸಲು ಅಸಾಧ್ಯವೇಕೆ
3 ತಿಂಗಳಿನಿಂದ ಮಣಿಪುರ ಜನಾಂಗೀಯ ದ್ದೇಷದಿಂದ ಹೊತ್ತಿ ಉರಿಯುತ್ತಿದ್ದು, ಶಾಲೆಗಳು ಇನ್ನೂ ಆರಂಭವಾಗಿಲ್ಲ. ಕೃಷಿ ಚಟುವಟಿಕೆ, ವ್ಯಾಪಾರ ವಹಿವಾಟು ನಡೆಸಲಾರದ ಸ್ಥಿತಿಯಲ್ಲಿ ಜನರಿ¨ªಾರೆ. ಸಾವಿರಾರು ಜನರು ನಿರಾಶ್ರಿರಾಗಿ¨ªಾರೆ. ವಿಶ್ವ ಗುರು ವಿನ ಒಂದು ಕರೆಗೆ ರಷ್ಯಾ- ಉಕ್ರೇನ್ ಯುದ್ಧ ನಿಲ್ಲುತ್ತದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಮಣಿಪುರ ಗಲಭೆ ನಿಲ್ಲಿಸಲು ವಿಶ್ವಗುರುವಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.
ಸಿಎಂ ಮಾಡಲೂ ಗೊತ್ತು ಇಳಿಸಲೂ ಗೊತ್ತು ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಹರೀಶ್, “ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ದೊಡ್ಡವರ ಹೇಳಿಕೆಗೆ ಪ್ರತಿಕ್ರಿಯೆ ಕೊಡುವಷ್ಟು ದೊಡ್ಡವರೂ ನಾವಲ್ಲ. ಆದರೆ ಕಾಂಗ್ರೆಸ್‌ನಿಂದ ಈಡಿಗ, ಬಿಲ್ಲವರಿಗೆ ಅನ್ಯಾಯವಂತೂ ಆಗಿಲ್ಲ’ ಎಂದರು.
ಕಾಂಗ್ರೆಸ್‌ನಿಂದ ಪ್ರತಿಭಟನೆ
ಐವನ್ ಮಾತನಾಡಿ, ಮಣಿಪುರ ಸಿಎಂ ರಾಜೀನಾಮೆ ಮತ್ತು ಜನರಿಗೆ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿ, ಕಾಂಗ್ರೆಸ್‌ನಿಂದ ಜು.24, 25, 26ರಂದು ವಿವಿಧ ತಾಲೂಕುಗಳಲ್ಲಿ ಮತ್ತು ಜು. 29ರಂದು ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನಾ ಆಯೋಜಿಸಿದ್ದೇವೆ ಎಂದರು.ಮುಖಂಡರಾದ ಪ್ರಕಾಶ್ ಬಿ. ಸಾಲಿಯಾನ್, ಅಪ್ಪಿ, ಜಯಶೀಲ ಅಡ್ಯಂತಾಯ, ನೀರಜ್‌ಪಾಲ್, ಭಾಸ್ಕರ್ ರಾವ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.