Mivi ಕಮಾಂಡೋ X9 TWS: ಕಡಿಮೆ ಬಜೆಟ್ ನ ಇಯರ್ ಬಡ್


Team Udayavani, Apr 25, 2023, 11:56 AM IST

3-tech-news

Mivi ಬ್ರಾಂಡ್ ಭಾರತದಲ್ಲಿ ಆಡಿಯೋ ಸಾಧನಗಳಾದ ಟ್ರೂ ವೈರ್ ಲೆಸ್ ಇಯರ್ ಬಡ್ ಗಳು, ಇಯರ್ ಫೋನ್ ಗಳು, ಬ್ಲೂಟೂತ್ ಸ್ಪೀಕರ್ ಗಳು, ಸೌಂಡ್ ಬಾರ್, ಸ್ಮಾರ್ಟ್ ವಾಚ್ , ಚಾರ್ಜಿಂಗ್ ಕೇಬಲ್ ಗಳನ್ನು ಹೊರತರುತ್ತಿದೆ. ಇದು ಭಾರತದಲ್ಲೇ ತನ್ನ ಉತ್ಪನ್ನಗಳನ್ನು ತಯಾರಿಸುತ್ತಿದೆ. ಆರಂಭಿಕ ಬಜೆಟ್ ದರದಲ್ಲಿ ಇದರ ಉತ್ಪನ್ನಗಳು ಗ್ರಾಹಕರಿಗೆ ದೊರಕುತ್ತಿವೆ. ಈ ಕಂಪೆನಿ ಇತ್ತೀಚಿಗೆ ಹೊರ ತಂದಿರುವ ಗೇಮಿಂಗ್ ಇಯರ್ ಬಡ್ ಕಮ್ಯಾಂಡೋ ಎಕ್ಸ್ 9.

ವಿನ್ಯಾಸ:

Mivi ಕಮಾಂಡೋ X9 TWS ನಯವಾದ ವಿನ್ಯಾಸವನ್ನು ಹೊಂದಿದ್ದು, ಕಿವಿಗೆ ಆರಾಮವಾಗಿ ಹೊಂದಿಕೊಳ್ಳುತ್ತದೆ. ಇದು ಒಳಕಿವಿಗೆ ಹೊಂದಿಸಿಕೊಳ್ಳುವ ಇಯರ್ ಬಡ್. ಮೂರು ಅಳತೆಯ ಟಿಪ್ ಗಳನ್ನು ನೀಡಲಾಗಿದೆ. ಗ್ರಾಹಕರು ತಮ್ಮ ಕಿವಿಯ ಅಳತೆಗೆ ಹೊಂದುವ ಟಿಪ್ ಗಳನ್ನು ಬಳಸಬಹುದು. ಇಯರ್‌ಬಡ್‌ಗಳು ಬೆವರು ಮತ್ತು ನೀರು-ನಿರೋಧಕವಾಗಿದೆ.  ಇಯರ್ ಬಡ್ ನ ಕಡ್ಡಿ ಒಂದು ರೀತಿ ಡೈಮಂಡ್ ಆಕಾರ ಹೊಂದಿದೆ. ಅದರ ಮೇಲೆ ಬಣ್ಣಗಳನ್ನು ಬದಲಿಸುವ ಎಲ್ ಇಡಿ ಲೈಟ್ ಇದೆ.

ಧ್ವನಿ ಗುಣಮಟ್ಟ:

Mivi ಕಮಾಂಡೋ X9 TWS ಇಯರ್‌ಬಡ್‌ಗಳು ಅವುಗಳ ಬೆಲೆಗೆ ಹೋಲಿಸಿದಾಗ ಉತ್ತಮ ಆಡಿಯೊ ಕ್ವಾಲಿಟಿ ಹೊಂದಿವೆ. ಬಡ್ ಗಳು 13 ಮಿ.ಮೀ. ಡ್ರೈವರ್ಸ್ ಹೊಂದಿವೆ.

ಸ್ಪಷ್ಟವಾದ ವೋಕಲ್,  ಬಾಸ್ ಮತ್ತು ಟ್ರೆಬಲ್ ನ ಸಮತೋಲನ ಹೊಂದಿದೆ.  ಬಳಕೆದಾರರ ಫೋನ್ ನಲ್ಲಿ ಉತ್ತಮ ಆಡಿಯೋ ಚಿಪ್, ಸರಿ ಹೊಂದಿಸಲಾದ ಈಕ್ವಲೈಸರ್ ಇದ್ದರೆ ಇದರಲ್ಲಿ ಉತ್ತಮ ಆಡಿಯೋ  ಅನುಭವ ದೊರಕುತ್ತದೆ.ಇಯರ್‌ಬಡ್‌ಗಳು ಉತ್ತಮ ನಾಯ್ಸ್ ಕ್ಯಾನ್ಸಲೇಷನ್ ಸಹ ನೀಡುತ್ತವೆ, ಇದು ಬಾಹ್ಯ ಶಬ್ದಗಳನ್ನು ಕಡಿಮೆ ಮಾಡಿ ಆಲಿಸುವ ಅನುಭವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಆಡಿಯೊ ಕೊಡೆಕ್‌ಗಳ ವಿಷಯದಲ್ಲಿ, Mivi ಕಮಾಂಡೋ X9 TWS SBC ಮತ್ತು AAC ಕೋಡೆಕ್‌ಗಳನ್ನು ಬೆಂಬಲಿಸುತ್ತದೆ. AAC ಕೊಡೆಕ್ ವಿಶೇಷವಾಗಿ iOS ಬಳಕೆದಾರರಿಗೆ SBC ಗಿಂತ ಉತ್ತಮವಾದ ಆಡಿಯೊ ಗುಣಮಟ್ಟವನ್ನು ತಲುಪಿಸಲು ನೆರವಾಗುತ್ತದೆ. ಎರಡು ಕೊಡೆಕ್‌ಗಳ ನಡುವಿನ ಆಡಿಯೊ ಗುಣಮಟ್ಟದಲ್ಲಿನ ವ್ಯತ್ಯಾಸ ಹೆಚ್ಚೇನಿಲ್ಲ. ಎರಡೂ ಕೊಡೆಕ್‌ಗಳು ಉತ್ತಮ ಧ್ವನಿ ಗುಣಮಟ್ಟವನ್ನು ಒದಗಿಸುತ್ತವೆ.

ಇದು ಗೇಮಿಂಗ್ ಗಾಗಿ ವಿನ್ಯಾಸಗೊಳಿಸಲಾದ  ಇಯರ್ ‍ಬಡ್. ಗೇಮಿಂಗ್ ನಲ್ಲಿ  ಬಳಸಲು 50 ಮಿಲಿಸೆಕೆಂಡ್ ಲೇಟೆನ್ಸಿ ಅಗತ್ಯ.ಆದರೆ ಇದು 35 ಮಿಲಿ ಸೆಕೆಂಡ್ ನಷ್ಟು ಕಡಿಮೆ ಲೇಟೆನ್ಸಿ  ಹೊಂದಿದೆ. ಹೀಗಾಗಿ ಗೇಮ್ ಗಳನ್ನು ಆಡುವಾಗ ಧ್ವನಿ ಆಲಿಸುವಿಕೆಯಲ್ಲಿ ಅಡೆತಡೆ (ಲ್ಯಾಗ್ ) ಉಂಟಾಗುವುದಿಲ್ಲ.

ಹೆಚ್ಚುವರಿಯಾಗಿ, Mivi ಕಮಾಂಡೋ X9 TWS ಸ್ಟಿರಿಯೊ ಕರೆಯನ್ನು ಬೆಂಬಲಿಸುತ್ತದೆ, ಅಂದರೆ  ಫೋನ್ ಕರೆಗಳ ಸಮಯದಲ್ಲಿ ಎರಡೂ ಇಯರ್‌ಬಡ್‌ಗಳನ್ನು ಬಳಸಬಹುದು. ಫೋನ್ ಕರೆಗಳ ಆಡಿಯೊ ಗುಣಮಟ್ಟ ಚೆನ್ನಾಗಿದೆ. ಮತ್ತು ಫೋನ್ ಕರೆಗಳ ಸಮಯದಲ್ಲಿ ವಾತಾವರಣದ ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡಲು  ಪ್ರತಿ ಇಯರ್ ಬಡ್ ನಲ್ಲಿ ಎರಡು ನಾಯ್ಸ್ ಕ್ಯಾನ್ಸಲೇಷನ್ ಮೈಕ್ ಇವೆ.

ಬ್ಯಾಟರಿ:

Mivi ಕಮಾಂಡೋ X9 TWSನ ಚಾರ್ಜಿಂಗ್ ‍ಕೇಸ್ ಗೆ ಟೈಪ್ ಸಿ ಕೇಬಲ್ ಬಳಸಬಹುದಾಗಿದೆ. ಒಂದೇ ಚಾರ್ಜ್‌ನಲ್ಲಿ ಇಯರ್‌ಬಡ್‌ಗಳನ್ನು  ಸುಮಾರು 5-6 ಗಂಟೆಗಳವರೆಗೆ ಬಳಸಬಹುದು. ಚಾರ್ಜಿಂಗ್ ಕೇಸ್ ಹೆಚ್ಚುವರಿ ಸುಮಾರು 25 ಗಂಟೆಗಳ ಬ್ಯಾಟರಿ ನೀಡುತ್ತದೆ. ಇಯರ್‌ಬಡ್‌ಗಳು ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತವೆ.  ಕೇವಲ 10 ನಿಮಿಷಗಳ ಚಾರ್ಜಿಂಗ್‌ನೊಂದಿಗೆ 45 ನಿಮಿಷ ಬಳಸಬಹುದು.

Mivi ಕಮಾಂಡೋ X9 TWS ಇಯರ್‌ಬಡ್‌ಗಳು ಇತ್ತೀಚಿಗೆ ಬ್ಲೂಟೂತ್ 5.3 ಆವೃತ್ತಿ ಹೊಂದಿವೆ. ಹೀಗಾಗಿ ಇಯರ್‌ಬಡ್‌ಗಳು ಸ್ಮಾರ್ಟ್‌ಫೋನ್‌ಗೆ ತ್ವರಿತವಾಗಿ ಮತ್ತು ಸುಲಭವಾಗಿ ಸಂಪರ್ಕಗೊಳ್ಳುತ್ತವೆ . ಇಯರ್‌ಬಡ್‌ಗಳು iOS ಮತ್ತು Android ಸಾಧನಗಳನ್ನು ಸಹ ಬೆಂಬಲಿಸುತ್ತವೆ.

ಮಿವಿ ಕಮ್ಯಾಂಡೋ ಎಕ್ಸ್ 9 ಇಯರ್ ಬಡ್ ಗಳ ದರ 1999 ರೂ. ಇದೆ. ಈ ದರ ಪಟ್ಟಿಯಲ್ಲಿ ಇದೊಂದು ನೀಡುವ ಹಣಕ್ಕೆ ತಕ್ಕಂಥ ಇಯರ್ ಬಡ್ ಎನ್ನಬಹುದು.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

isrel netanyahu

Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…ಡ್ರೋನ್‌ ಏರ್‌ಟ್ಯಾಕ್ಸಿ

Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

New Maruti Dzire:ದಿ ಡ್ಯಾಜ್ಲಿಂಗ್‌-ನ್ಯೂ ಸ್ವಿಫ್ಟ್ ಡಿಸೈರ್‌ ಕಾರು ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

ಹೊಸ ಸೇರ್ಪಡೆ

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Belagavi: Let there be a full discussion of issues in the plenary session: Dr. Prabhakar Kore

Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್‌ ಕೋರೆ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.