ಕೃಷಿಯಲ್ಲಿ ತಂತ್ರಜ್ಞಾನ ಬಳಸಿ ಆರ್ಥಿಕ ಪ್ರಗತಿ ಸಾಧಿಸಿ: ಶಾಸಕ ಕೆ. ಮಹದೇವ್
Team Udayavani, Mar 20, 2022, 8:26 PM IST
ಪಿರಿಯಾಪಟ್ಟಣ: ರೈತರು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು ಎಂದು ಶಾಸಕ ಕೆ. ಮಹದೇವ್ ತಿಳಿಸಿದರು.
ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ಕೃಷಿ ಇಲಾಖೆಯಲ್ಲಿ ರೈತರಿಗೆ ವಿವಿಧ ಯೋಜನೆಯಡಿ ಕೃಷಿಯಂತ್ರೋಪಕರಣಗಳನ್ನು ವಿತರಿಸಿ ಮಾತನಾಡಿದರು.
ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ಕೃಷಿಯಲ್ಲಿ ಆಧುನಿಕತೆಯ ಯಂತ್ರಗಳ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ನಿಗಮಗಳ ಮುಖಾಂತರ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳು ಹಾಗೂ ಕೃಷಿ ಪರಿಕರಗಳನ್ನು ವಿತರಿಸುತ್ತಿದ್ದು, ರೈತರು ಸಂಬಂಧಿಸಿದ ಇಲಾಖೆಗಳ ಮುಖಾಂತರ ಮಾಹಿತಿ ಪಡೆದು ಅರ್ಜಿ ಸಲ್ಲಿಸಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳು ತಮ್ಮ ಸೌಲಭ್ಯನ್ನು ಮಾರಾಟ ಮಾಡದೆ ಕೃಷಿ ಚಟುವಟಿಕೆಗಳಲ್ಲಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಈ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳು ತಮ್ಮ ಸೌಲಭ್ಯಗಳನ್ನು ಇತತರರಿಗೆ ಮಾರಾಟ ಮಾಡಿಕೊಳ್ಳಬಾರದು. ಒಂದು ವೇಳೆ ಈ ಫಲಾನುಭವಿಗಳು ಮಾರಾಟ ಮಾಡಿಕೊಂಡರೆ ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.
ತಾಲೂಕು ಕೃಷಿ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ ಮಳೆಗಾಲ ಆರಂಭವಾಗುತ್ತಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಕೃಷಿ ಉಪಕರಣಗಳನ್ನು ಇಲಾಖಾ ವತಿಯಿಂದ ನೀಡಲಾಗುತ್ತಿದೆ. ಈ ಯಂತ್ರೋಪಕರಣಗಳನ್ನು ಬೆರೆಯವರಿಗೆ ಮಾರಾಟ ಮಾಡುವುದಾಗಲಿ ಅವುಗಳನ್ನು ಹಾಳು ಮಾಡುವುದಾಗಲಿ ಮಾಡದೆ ಸದ್ಬಳಕೆಮಾಡಿಕೊಳ್ಳಬೇಕು ಆ ಮೂಲಕ ಪ್ರಗತಿ ಸಾಧಿಸಬೇಕು. ಇಲಾಖಾ ವತಿಯಿಂದ ರೈತರನ್ನು ಕೃಷಿಯಲ್ಲಿ ಉತ್ತೇಜಿಸಲು ಬಿತ್ತನೆ ಬೀಜ, ಮಣ್ಣು ಪರೀಕ್ಷೆ ಅಭಿಯಾನ, ಸೂಕ್ಷ್ಮ ನೀರಾವರಿ ಯೋಜನೆ, ಕೃಷಿ ಸಂಸ್ಕರಣ ಯೋಜನೆಯಡಿ ರಾಗಿ ಹಾಗೂ ಬತ್ತದ ಸುದ್ದಿಕರಣ, ಹಿಟ್ಟಿನ ಗಿರಣಿ, ಒಕ್ಕಣೆ ಯಂತ್ರ ನೀಡಲಾಗುತ್ತಿದೆ. ಇದರೊಂದಿಗೆ ಸಸ್ಯ ಸಂರಕ್ಷಣೆ ಯೋಜನೆ, ಸಾವಯವ ಕೃಷಿ ಯೋಜನೆ, ಪ್ರಾತ್ಯಕ್ಷಿಕೆ ಕುರಿತ ಕಾರ್ಯಕ್ರಮಗಳನ್ನು ರೈತರಿಗಾಗಿ ರೂಪಿಸಲಾಗಿದೆ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ : ಪ್ರಿಯಕರನ ಮದುವೆ ಸುದ್ದಿ ಕೇಳಿ ಪ್ರಿಯತಮೆ ಆತ್ಮಹತ್ಯೆ, ಮದುವೆ ಮಂಟಪದಿಂದ ಪ್ರಿಯಕರ ಪರಾರಿ
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಚಂದ್ರಮೌಳಿ, ತಾಪಂ ಇಓ ಕೃಷ್ಣಕುಮಾರ್ ಪಿಡಿಒ ದೇವರಾಜೇಗೌಡ, ಗ್ರಾಪಂ ಅಧ್ಯಕ್ಷೆ ಛಾಯಮಣಿ ಮಹದೇವ್, ಮಾಜಿ ಅಧ್ಯಕ್ಷೆ ಮೀನಾಕ್ಷಮ್ಮ, ಉಪಾಧ್ಯಕ್ಷ ಮಂಜುನಾಥ್, ಸದಸ್ಯರಾದ ಅನಿಲ್ ಕುಮಾರ್, ಕಾಮರಾಜು, ಹೆಚ್.ಸಿ.ಮಹದೇವ್, ಸೀಗೂರು ವಿಜಯಕುಮಾರ್, ಸುಧಾ ಮಹದೇವ್, ಯಶೋಧಮ್ಮ,, ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಪ್ರಸಾದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್ ಬಾಬು, ತೋಟಗಾರಿಕೆ ಇಲಾಖೆ ಸಹಾಯಕ ಪ್ರಸಾದ್, ಸಿಡಿಪಿಒ ಕುಮಾರ್, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಎಇಇಗಳಾದ ಮಂಜುನಾಥ್, ಜಯಂತ್, ಪ್ರಭು, ಶರತ್, ಕಂದಾಯ ನಿರೀಕ್ಷಕ ಶ್ರೀಧರ್, ಗ್ರಾಮ ಲೆಕ್ಕಾದಿಕಾರಿ ಮನುಕುಮಾರ್, ಮುಖಂಡರಾದ ಅಣ್ಣಯ್ಯಶೆಟ್ಟಿ, ಜಯಶಂಕರ್, ವಿನೋದ್, ಹೆಚ್.ಇ.ಶಂಕರ್, ಜಗಪಾಲ್, ಆಯಿತನಹಳ್ಳಿ ಮಹದೇವ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.