ಹೆದ್ದಾರಿ ಸಂಪರ್ಕ ರಸ್ತೆಗಳ ಅಭಿವೃದ್ದಿ, ಸಿಗ್ನಲ್ ಲೈಟ್ ಅಳವಡಿಕೆಗೆ ಕ್ರಮ : ಮಂಜುನಾಥ್
Team Udayavani, Jan 30, 2022, 7:52 PM IST
ಹುಣಸೂರು : ರಾಷ್ಟ್ರೀಯ ಹೆದ್ದಾರಿಯ ಹುಣಸೂರು ಬೈಪಾಸ್‌ನ ದೇವರಾಜ ಅರಸು ಪುತ್ಥಳಿಯಿಂದ ಕಲ್ಕುಣಿಕೆ ವೃತ್ತದವರೆಗೆ ಸುಗಮ ಸಂಚಾರಕ್ಕೆ ಅವಕಾಶವಾಗುವಂತೆ ಅಭಿವೃದ್ದಿಕೈಗೊಳ್ಳಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರ್ ರಮೇಂದ್ರರಿಗೆ ಸೂಚಿಸಿದರು.
ಭಾನುವಾರ 22 ಕೋಟಿರೂ ವೆಚ್ಚದ ತಾಲೂಕಿನ ಚಿಕ್ಕಾಡಿಗನಹಳ್ಳಿಯಿಂದ ನಗರಕ್ಕೆ ಸಮೀಪದ ಹಾಳಗೆರೆವರೆಗಿನ ಹೆದ್ದಾರಿ ಡಾಂಬರೀಕರಣ ಕಾಮಗಾರಿ ಪ್ರಗತಿಯನ್ನು ಮುಖ್ಯ ಇಂಜಿನಿಯರ್‌ರೊಂದಿಗೆ ಪರಿಶೀಲಿಸಿ ದೇವರಾಜ ಅರಸರ ಪುತ್ಥಳಿ ಬಳಿಯ ಜಂಕ್ಷನ್‌ನಲ್ಲಿ ರಸ್ತೆಯನ್ನು ಎಪಿಎಂಸಿ ಬಳಿಯಿಂದ ಅಗಲೀಕರಣಗೊಳಿಸುವ ಜೊತೆಗೆ ಡಿವೈಡರ್ ಅಳವಡಿಸಿ, ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಅಲ್ಲದೆ ಹೆದಾರಿಯ ಎಲ್ಲ ಸಂಪರ್ಕ ರಸ್ತೆಗಳನ್ನು ಅಭಿವೃದ್ದಿಗೊಳಿಸುವಂತೆ ಸಲಹೆ ನೀಡಿದರು.
ಹೆದ್ದಾರಿಯಿಂದ ಡಿ.ಡಿ.ಅರಸು ಸರಕಾರಿ ಪದವಿ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ದಿಗೊಳಿಸುವುದು. ರಸ್ತೆ ಇಕ್ಕೆಲಗಳಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಪಕ್ಕದಲ್ಲೇ ದೊಡ್ಡ ಹೊಂಡಗಳಾಗುತ್ತಿದ್ದು, ಸಾಕಷ್ಟು ಅವಘಡಗಳಿಗೆ ಕಾರಣವಾಗಿದೆ ಎಂಬ ಶಾಸಕರ ಮಾಹಿತಿಗೆ ಹೆದ್ದಾರಿಯ ಅರಸು ಪುತ್ಥಳಿಯಿಂದ ಕೋರ್ಟ್ವರೆಗೆ ಒಂದು ಬದಿಯಲ್ಲಿ ಚರಂಡಿ ನಿರ್ಮಿಸಿ ನೀರನ್ನು ದೊಡ್ಡಮೋರಿಗೆ ಸಂಪರ್ಕ ಕಲ್ಪಿಸಲು ಕ್ರಮವಹಿಸಲಾಗುವುದು ಹಾಗೂ ಕಲ್ಕುಣಿಕೆ ವೃತ್ತದವರೆಗಿನ ಸಂಪರ್ಕ ರಸ್ತೆಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ ಎಂದು ಮುಖ್ಯ ಇಂಜಿನಿಯರ್ ರಮೇಂದ್ರ ಭರವಸೆ ಇತ್ತರು.
ಎರಡು ವೃತ್ತಗಳಿಗೆ ಸಿಗ್ನಲ್ ಲೈಟ್ ಅಳವಡಿಕೆ:
ನಗರದಲ್ಲಿ ಪ್ರಥಮ ಬಾರಿಗೆ ಬೈಪಾಸ್‌ನ ಕೋರ್ಟ್ ಸರ್ಕಲ್ ಹಾಗೂ ಕಲ್ಕುಣಿಕೆ ವೃತ್ತಕ್ಕೆ ನಗರಸಭೆವತಿಯಿಂದ ಸಿಗ್ನಲ್ ಲೈಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದರಿಂದ ಹೆದ್ದಾರಿಯಲ್ಲಿ ಹೆಚ್ಚು ವಾಹನ ಸಂಚಾರವಿರುವುದರಿಂದ ಅವಘಡ ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಶಾಸಕರು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಡಾ.ಅಶೋಕ್, ಪೌರಾಯುಕ್ತ ರಮೇಶ್, ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಇಂಜಿನಿಯರ್ ಯೋಗಾನಂದ್, ಎಇಇ ಪುಟ್ಟರಾಜು, ಸಹಾಯಕ ಇಂಜಿನಿಯರ್ ಹೇಮಲತಾ, ಪ್ರಥಮ ದರ್ಜೆ ಗುತ್ತಿಗೆದಾರರಾದ ರೇವಣ್ಣ,ಗೋವಿಂದೇಗೌಡ, ಅಶೋಕ್, ಬಾಪುಜಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.