ಅಹಿಂದ ಸರಕಾರದ ಬಲ ಕುಗ್ಗಿಸಿದ ಹಿಂದ ಶಾಸಕರು ಈಗ ಬಿಜೆಪಿ ಹಿಂದೆ
Team Udayavani, Jul 25, 2019, 5:02 AM IST
ಬೆಂಗಳೂರು: “ಕೋಮುವಾದಿ’ ಎಂಬ ಟ್ಯಾಗ್ ನೀಡಿ ಬಿಜೆಪಿಯನ್ನು ಅಧಿಕಾರ ದಿಂದ ದೂರವಿಡಲು ಜಾತ್ಯತೀತ, ಅಹಿಂದ ವರ್ಗದ ಹಿತ ರಕ್ಷಕರೆಂದು ಗುರುತಿಸಿಕೊಳ್ಳುವ ಕಾಂಗ್ರೆಸ್, ಜೆಡಿಎಸ್ ಒಟ್ಟಾಗಿ ರಚಿಸಿದ ಮೈತ್ರಿ ಸರಕಾರಕ್ಕೆ “ಹಿಂದ’ ಶಾಸಕರೇ ಕೈಕೊಟ್ಟು ಪತನಕ್ಕೆ ಕಾರಣವಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸಿಯೇ ತೀರಬೇಕೆಂದು ಹಠಕ್ಕೆ ಬಿದ್ದಂತಿದ್ದ ಬಿಜೆಪಿ ವರಿಷ್ಠರು, “ಹಿಂದ’ ಶಾಸಕರನ್ನೇ ಬಳಸಿ ಕೊಂಡು ಮೈತ್ರಿ ಸರಕಾರಕ್ಕೆ ಖೆಡ್ಡಾ ತೋಡುವ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿದಂತಿದೆ. ಆ ಮೂಲಕ ಮೈತ್ರಿ ಪಕ್ಷಗಳ ಮತಬುಟ್ಟಿಗೆ ನೇರವಾಗಿ ಕೈ ಹಾಕಿ ಸೆಳೆಯುವ ಪ್ರಯತ್ನದಲ್ಲಿ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ.
ಆಡಳಿತ ಪಕ್ಷದ ಶಾಸಕರನ್ನು ಸೆಳೆದು ಸಂಖ್ಯಾಬಲ ಕುಗ್ಗಿಸುವ ಬಿಜೆಪಿ ಪ್ರಯತ್ನ ಫಲ ನೀಡಿದ್ದು, ಪಕ್ಷಕ್ಕೆ ಲಾಭವಾಗುವಂತೆ ಕಾಣುತ್ತಿದೆ. ಆದರೆ ಈ ಪ್ರಯತ್ನದ ಲಾಭವನ್ನು ಈ ಹಿಂದೆ ಅಂದರೆ ಲೊಕಸಭಾ ಚುನಾವಣೆಯಲ್ಲೇ ಬಿಜೆಪಿ ಪಡೆದಂತಿದೆ. ಸದ್ಯ ರಾಜೀನಾಮೆ ನೀಡಿರುವ ಶಾಸಕರು ಪ್ರತಿನಿಧಿಸುವ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಗಳಿಸಿರುವುದು ಕಂಡು ಬಂದಿದ್ದು, ಒಂದೇ ಪ್ರಯತ್ನದಲ್ಲಿ ಬಿಜೆಪಿ ಎರಡು ಯಶಸ್ಸು ಸಾಧಿಸಿದಂತಿದೆ.
ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ನೆಲೆ, ಸಂಘಟನ ಬಲವಿದ್ದರೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಳೆ ಮೈಸೂರು ಭಾಗದ ಒಕ್ಕಲಿಗರ ವಿಶ್ವಾಸವನ್ನು ನಿರೀಕ್ಷಿತ ಪ್ರಮಾಣದಲ್ಲಿ ಗಳಿಸಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕೆ ಹಳೆ ಮೈಸೂರು ಪ್ರದೇಶ ಕಾಂಗ್ರೆಸ್, ಜೆಡಿಎಸ್‌ನ ಭದ್ರಕೋಟೆ ಎನಿಸಿದೆ. ಈ ಭಾಗದಲ್ಲಿ ಪ್ರಭಾವಿ ಎನಿಸಿರುವ ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದ ಮತದಾರರನ್ನು ಸೆಳೆಯುವುದು ನಿರ್ಣಾಯಕವೆನಿಸಿತ್ತು. ಈಗ ಈ ಭಾಗದ ಶಾಸಕರನ್ನೇ ಸೆಳೆಯುವ ಬಿಜೆಪಿ ಪ್ರಯತ್ನ ಕೈಗೂಡಿದಂತಿದೆ.
‘ಹಿಂದ’ ಶಾಸಕರು
ಹಿಂದುಳಿದ ವರ್ಗ: ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ , ಬೈರತಿ ಬಸವರಾಜು (ಕುರುಬ), ಮುನಿರತ್ನ (ನಾಯ್ಡು), ಆನಂದ್ ಸಿಂಗ್ (ರಾಜಪುತ್) ಪರಿಶಿಷ್ಟ ಪಂಗಡ: ರಮೇಶ್ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್. ಒಕ್ಕಲಿಗ: ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್. ಪಕ್ಷೇತರ ಶಾಸಕರು: ಆರ್.ಶಂಕರ್ (ಕುರುಬ), ಎಚ್.ನಾಗೇಶ್ (ಪರಿಶಿಷ್ಟ ಜಾತಿ) ಅನಾರೋಗ್ಯದ ಕಾರಣ ಸದನದಿಂದ ದೂರ ಉಳಿದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ (ಮರಾಠ)
ವಿಶ್ವನಾಥ್ ನೆರವು
ಸದ್ಯ ಕಾಂಗ್ರೆಸ್, ಜೆಡಿಎಸ್‌ನಲ್ಲಿ ರಾಜೀನಾಮೆ ನೀಡಿದವರ ಪೈಕಿ ಉತ್ತಮ ವರ್ಚಸ್ಸು ಉಳಿಸಿಕೊಂಡ ವಿರಳರ ಪೈಕಿ ಎಚ್. ವಿಶ್ವನಾಥ್ ಒಬ್ಬರು. ಅವರಂಥವರು ಪಕ್ಷ ಸೇರಿ ದರೆ ಯಾವುದೇ ಅಪಸ್ವರ ಕೂಡ ಕೇಳಿ ಬರುವುದಿಲ್ಲ. ಮುಂಬಯಿಯಲ್ಲಿರುವ ಅತೃಪ್ತ ರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳವಲ್ಲಿ ಅವರ ಪಾತ್ರ ಮಹತ್ವದ್ದು. ಕಾನೂನು ಇತಿಮಿತಿಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡಿ ಭಿನ್ನ ದಾರಿ ಹಿಡಿಯ ದಂತೆ ತಡೆದು ಒಮ್ಮತ ದಿಂದ ಅತೃಪ್ತರೆಲ್ಲ ಒಟ್ಟಿಗೆ ಇರುವಂತೆ ಮನವರಿಕೆ ಮಾಡುವ ಕಾರ್ಯ ವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
-ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KPS ಹೆಚ್ಚುವರಿ ಎಲ್‌ಕೆಜಿ, 1ನೇ ತರಗತಿ ತೆರೆಯಲು ಅವಕಾಶ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.