Maritime Projects: 23,000 ಕೋ.ರೂ.ನ ಕಡಲೋದ್ಯಮ ಯೋಜನೆಗಳಿಗೆ ಮೋದಿ ಚಾಲನೆ
-ಅಮೃತಕಾಲವನ್ನು ಗಮನದಲ್ಲಿಟ್ಟುಕೊಂಡು ಹಲವು ಯೋಜನೆಗಳ ಅನಾವರಣ
Team Udayavani, Oct 17, 2023, 8:56 PM IST
ಮುಂಬೈ: ಪ್ರಧಾನಿ ನರೇಂದ್ರ ಮೋದಿ 23,000 ಕೋಟಿ ರೂ. ಮೌಲ್ಯದ ಸಾಗರ ಸಂಬಂಧಿತ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. 2047ರ ಅಮೃತಕಾಲದ ದೂರದೃಷ್ಟಿಯುಳ್ಳ ದಾಖಲೆ ಅನಾವರಣ ಮಾಡಿದ್ದಾರೆ. ದೀರ್ಘಕಾಲದಲ್ಲಿ ಭಾರತದ ಕಡಲ ಆರ್ಥಿಕತೆಯನ್ನು ರಚಿಸುವುದು ಇದರ ಉದ್ದೇಶವಾಗಿದೆ.
ಬಂದರು ಸೌಲಭ್ಯಗಳನ್ನು ಆಧುನೀಕರಿಸುವುದು, ದೀರ್ಘಕಾಲದ, ಪರಿಣಾಮಕಾರಿ ಪದ್ಧತಿಗಳನ್ನು ಉತ್ತೇಜಿಸುವುದು, ಅಂತಾರಾಷ್ಟ್ರೀಯ ಸಹಯೋಗವನ್ನು ಪ್ರೋತ್ಸಾಹಿಸುವುದು ದಾಖಲೆಯ ಮುಖ್ಯಾಂಶಗಳಾಗಿವೆ. ಪ್ರಸ್ತುತ ನಡೆಯುತ್ತಿರುವ ಜಾಗತಿಕ ಕಡಲಯಾನದ ಭಾರತೀಯ ಶೃಂಗದ 3ನೇ ಆವೃತ್ತಿಯಲ್ಲಿ ಮೋದಿ ಈ ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದರು.
ಪ್ರಸ್ತುತ ಶೃಂಗದಲ್ಲಿ ಕಡಲ ಆರ್ಥಿಕತೆಗೆ ಸಂಬಂಧಿಸಿದಂತೆ ಹಲವು ಸಂಗತಿಗಳನ್ನು ಚರ್ಚಿಸಲಾಗುವುದು. ಬಂದರುಗಳ ಭವಿಷ್ಯ, ಇಂಗಾಲಮುಕ್ತತೆ, ಕರಾವಳಿ ಹಡಗು ಸಂಚಾರ ಮತ್ತು ಒಳನಾಡಿನಲ್ಲಿ ಸಾಗಣೆ, ಹಡಗುಗಳ ನಿರ್ಮಾಣ-ದುರಸ್ತಿ-ಮರುಬಳಕೆ, ಆರ್ಥಿಕತೆ, ಕಡಲ ವಲಯಗಳು, ಪ್ರವಾಸೋದ್ಯಮವನ್ನು ವಿವರವಾಗಿ ಪರಿಶೀಲಿಸಲಾಗುತ್ತದೆ.
ಎಲ್ಲದಕ್ಕಿಂತ ಮುಖ್ಯವಾಗಿ ಪ್ರಧಾನಿ ಮೋದಿ 300 ಒಪ್ಪಂದಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅದರಲ್ಲಿ ಒಟ್ಟು 7.16 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳಾಗಿವೆ. ಇದರಲ್ಲಿ ಜಾಗತಿಕ ಮತ್ತು ಭಾರತೀಯ ಪಾಲುದಾರಿಕೆಯಿರುತ್ತದೆ.
ಐಎಂಇಇಸಿ (ಭಾರತ-ಮಧ್ಯಪೂರ್ವ ಯೂರೋಪ್ ಆರ್ಥಿಕ ಪಥ)ಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಜಿ20 ಸಭೆಯಲ್ಲಿ ಮಹತ್ವದ ಸರ್ವಾನುಮತ ಲಭಿಸಿದೆ. ಇದು ಸಮೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದೆ. ಹಲವು ಶತಮಾನಗಳ ಹಿಂದೆ ರೇಷ್ಮೆ ಮಾರ್ಗ ಎಂದು ಕರೆಸಿಕೊಂಡಿದ್ದರ ರೀತಿಯೇ ಇದೂ ಕೆಲಸ ಮಾಡಲಿದೆ. ಐಎಂಇಇಸಿ ಜಾಗತಿಕ ಕಡಲೋದ್ಯಮವನ್ನೇ ಬದಲಿಸುವ ತಾಕತ್ತು ಹೊಂದಿದೆ.
-ಪ್ರಧಾನಿ ನರೇಂದ್ರ ಮೋದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.