Ayodhya: ಶ್ರೀರಾಮಚಂದ್ರನಿಂದಲೇ ಮೋದಿ ಆಯ್ಕೆ : ಆಡ್ವಾಣಿ

ಮಂದಿರ ನಿರ್ಮಾಣ ವಿಧಿ ನಿರ್ಧಾರ: ಲೇಖನದಲ್ಲಿ ಮನದಾಳದ ಮಾತು

Team Udayavani, Jan 13, 2024, 12:56 AM IST

adwani

ಹೊಸದಿಲ್ಲಿ: “ಅಯೋಧ್ಯೆ ಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಬೇಕು ಎನ್ನುವುದನ್ನು ವಿಧಿಯೇ ನಿರ್ಧರಿಸಿದೆ. ಇದಕ್ಕಾಗಿ ಭಗವಂತನೇ ಪ್ರಧಾನಿ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದ್ದಾನೆ…’

ಹೀಗೆಂದು ಹೇಳಿರುವುದು ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ದಿನ ಸಮೀಪಿಸುತ್ತಿರು ವಂತೆಯೇ “ರಾಷ್ಟ್ರಧರ್ಮ’ ನಿಯತ ಕಾಲಿಕದ ವಿಶೇಷ ಆವೃತ್ತಿಗೆ ಬರೆದಿರುವ ಲೇಖನದಲ್ಲಿ ಆಡ್ವಾಣಿ ಅವರು, ರಾಮ ಮಂದಿರಕ್ಕಾಗಿ ತಾವು 33 ವರ್ಷಗಳ ಹಿಂದೆ ಕೈಗೊಂಡ ರಥಯಾತ್ರೆ, ಮಂದಿರ ನಿರ್ಮಾಣ ಸಹಿತ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

“ರಾಮಮಂದಿರ್‌ ನಿರ್ಮಾಣ್‌, ಏಕ್‌ ದಿವ್ಯ ಸ್ವಪ್ನ ಕೀ ಪೂರ್ತಿ’ ಎಂಬ ಶೀರ್ಷಿಕೆಯಲ್ಲಿ ಆಡ್ವಾಣಿ ಅವರ ಲೇಖನ ಪ್ರಕಟಗೊಳ್ಳಲಿದ್ದು, ಅದರ ಕೆಲವು ತುಣುಕುಗಳು ಶುಕ್ರವಾರ ಬಹಿರಂಗಗೊಂಡಿವೆ.
ಅಯೋಧ್ಯೆ ಚಳವಳಿಯು ನನ್ನ ರಾಜಕೀಯ ಪಯಣದ ಅತ್ಯಂತ ನಿರ್ಣಾಯಕ ಮತ್ತು ಪರಿವರ್ತ ನೀಯ ಘಟನೆಯಾಗಿದೆ. ಇದರಿಂದ ಭಾರತದ ಮರು ಆವಿಷ್ಕಾರದ ಜತೆ ಜತೆಗೇ ನನ್ನನ್ನು ನಾನು ಮತ್ತೂಮ್ಮೆ ಅರ್ಥ ಮಾಡಿಕೊಳ್ಳಲು ಸಾಧ್ಯವಾ ಯಿತು ಎಂದು ಆಡ್ವಾಣಿ ಲೇಖನದಲ್ಲಿ ಹೇಳಿಕೊಂಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ತಲೆ ಎತ್ತಿರುವಂಥ ಈ ಹೊತ್ತಿನಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರ ಅನುಪಸ್ಥಿತಿ ನನಗೆ ಕಾಡುತ್ತಿದೆ ಎಂದೂ ಅವರು ಲೇಖನದಲ್ಲಿ ಬೇಸರ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

ಭಕ್ತನ ಆಯ್ಕೆ ಅಂದೇ ಆಗಿತ್ತು
ರಥಯಾತ್ರೆ ನಡೆದು 33 ವರ್ಷಗಳು ಪೂರ್ಣಗೊಂಡಿವೆ. 1990ರ ಸೆ. 25ರಂದು ನಾವು ರಥಯಾತ್ರೆ ಆರಂಭಿಸಿದಾಗ, ಶ್ರೀರಾಮನ ಮೇಲಿನ ನಂಬಿಕೆಯಿಂದ ನಾವು ಆರಂಭಿಸಿದ ಈ ರಥಯಾತ್ರೆಯು ದೇಶಾದ್ಯಂತ ದೊಡ್ಡ ಚಳವಳಿಯಾಗಿ ರೂಪುಗೊಳ್ಳಲಿದೆ ಎಂದು ನಾವು ಊಹಿಸಿಯೇ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಂದಿನ ಚಳವಳಿಯುದ್ದಕ್ಕೂ ನಮಗೆ ಸಾಥ್‌ ನೀಡಿದ್ದರು. ಆಗ ಅವರು ಅಷ್ಟೊಂದು ಜನಪ್ರಿಯರಾಗಿರಲಿಲ್ಲ. ಆದರೆ ಆ ಕ್ಷಣದಲ್ಲೇ ಭಗವಾನ್‌ ಶ್ರೀರಾಮನು ತನ್ನ ಮಂದಿರವನ್ನು ಮರುನಿರ್ಮಾಣ ಮಾಡಲು ತನ್ನ ಭಕ್ತನನ್ನು ಆಯ್ಕೆ ಮಾಡಿ ಆಗಿತ್ತು. ಆ ಸಮಯದಲ್ಲಿ ನನ್ನ ಮನಸ್ಸಿನಲ್ಲೂ ಒಂದಲ್ಲ ಒಂದು ದಿನ ಅಯೋಧ್ಯೆಯಲ್ಲಿ ಖಂಡಿತ ಭವ್ಯ ರಾಮಮಂದಿರ ತಲೆ ಎತ್ತಬೇಕೆಂದು ಭಗವಂತ ನಿರ್ಧರಿಸಿದ್ದಾನೆ ಎಂಬ ಯೋಚನೆ ಮೂಡಿತ್ತು. ವಿಳಂಬವಾದರೂ ಆ ಕ್ಷಣ ಈಗ ಸಾಕಾರಗೊಳ್ಳುತ್ತಿರುವುದು ಹರ್ಷದ ಸಂಗತಿ ಎಂದು ಆಡ್ವಾಣಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

ಎಷ್ಟೋ ಜನರ ಆಸೆ ಸಾಕಾರ
ರಥಯಾತ್ರೆಯ ಸಮಯದಲ್ಲಿ ನಡೆದ ಅನೇಕ ಘಟನೆಗಳು ನನ್ನ ಬದುಕಿನ ಮೇಲೆ ಪ್ರಭಾವ ಬೀರಿದವು. ರಥವನ್ನು ನೋಡುತ್ತಲೇ ದೂರ ದೂರದ ಗ್ರಾಮಗಳಿಂದ ಪರಿಚಯವೇ ಇಲ್ಲದ ವ್ಯಕ್ತಿಗಳು ನನ್ನ ಬಳಿ ಬಂದು ಹರ್ಷೋದ್ಗಾರ ಮಾಡುತ್ತಿದ್ದರು, ಭಾವುಕರಾಗುತ್ತಿದ್ದರು. ಪ್ರಣಾಮ ಮಾಡಿ, ಶ್ರೀ ರಾಮನ ಜಪ ಮಾಡಿ, ಹಿಂದಿರುಗುತ್ತಿದ್ದರು. ಕೋಟ್ಯಂತರ ಜನರು ರಾಮ ಮಂದಿರದ ಕನಸು ಕಾಣುತ್ತಿದ್ದಾರೆ ಎನ್ನುವುದಕ್ಕೆ ಈ ಘಟನೆಗಳೇ ಸಾಕ್ಷಿಯಾದವು. ಈಗ ಇದೇ 22ರಂದು ಮಂದಿರದ ಉದ್ಘಾಟನೆಯ ಮೂಲಕ ಈ ಹಳ್ಳಿಗಳ ಜನರ ಬಯಕೆಯು ಈಡೇರುತ್ತಿದೆ ಎಂದೂ ಆಡ್ವಾಣಿ ಬರೆದುಕೊಂಡಿದ್ದಾರೆ.

ಟಾಪ್ ನ್ಯೂಸ್

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

Sabarimala ತಲುಪಿದ ತಂಗ ಅಂಗಿ; ಇಂದು ಮಂಡಲ ಸಂಪನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.