ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ!
Team Udayavani, May 4, 2020, 6:55 AM IST
ಹೊಸದಿಲ್ಲಿ: ಕೌಟುಂಬಿಕ ಕಲಹ, ವೈಯಕ್ತಿಕ ಕಾರಣ ಹಾಗೂ ಖಿನ್ನತೆಯಿಂದ ತಾನು ಮೂರು ಸಲ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂಬುದಾಗಿ ಸ್ಪೀಡ್‌ಸ್ಟರ್ ಮೊಹಮ್ಮದ್ ಶಮಿ ಹೇಳಿದ್ದಾರೆ. ಇದು ಎರಡು ವರ್ಷಗಳ ಹಿಂದಿನ ಸಂಗತಿಯಾಗಿದ್ದು, ಆಗ ಕುಟುಂಬವಿಡೀ ತನ್ನ ಮೇಲೆ ಭಾರೀ ಕಣ್ಗಾವಲು ಇರಿಸಿತ್ತು, ಎಂದಿದ್ದಾರೆ.
ಭಾರತದ ಪ್ರಧಾನ ವೇಗಿಯಾಗಿರುವ ಮೊಹಮ್ಮದ್ ಶಮಿ ಅವರ ವೈವಾಹಿಕ ಬದುಕು ಆಗಾಗ ಅನಪೇಕ್ಷಿತ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಜತೆಗೆ ಸಾಕಷ್ಟು ವೈಯಕ್ತಿಕ ಸಮಸ್ಯೆಗಳೂ ಎದುರಾಗಿದ್ದವು. ಕ್ರಿಕೆಟ್‌ನಿಂದಲೂ ದೂರವಾಗಬೇಕಾಯಿತು. ತಾನು ಮಾನಸಿಕವಾಗಿ ನೊಂದಿದ್ದೆ, ಖಿನ್ನತೆಗೆ ಒಳಗಾದೆ. ಹೀಗಾಗಿ ಮೂರು ಸಲ ಸಾಯಲು ಮುಂದಾಗಿದ್ದೆ ಎಂದು ರೋಹಿತ್ ಶರ್ಮ ಜತೆಗಿನ ಇನ್‌ಸ್ಟಾಗ್ರಾಮ್ ಚಾಟ್ ವೇಳೆ ಮೊಹಮ್ಮದ್ ಶಮಿ ಹೇಳಿಕೊಂಡಿದ್ದಾರೆ.
“ಮಾನಸಿಕ ಒತ್ತಡದಿಂದ ಹೊರಬಂದು ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಕೊಡು ಎಂದು ಹೆತ್ತವರು ಸಲಹೆ ನೀಡುತ್ತಿದ್ದರು. ನನ್ನ ಸೋದರನೂ ಬೆಂಬಲಕ್ಕೆ ನಿಂತ. ಆದರೆ ನನಗೆ ಏನೂ ತೋಚುತ್ತಿರಲಿಲ್ಲ. 2-3 ಮಂದಿ ಗೆಳೆಯರು ನನ್ನನ್ನು ಕಾಯುತ್ತಲೇ ಇದ್ದರು. ಅಪಾರ್ಟ್‌ಮೆಂಟ್‌ನ 24ನೇ ಮಹಡಿಯಲ್ಲಿ ನಮ್ಮ ವಾಸ. ಇಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಾನು ಎಂಬ ಆತಂಕ ಅವರದಾಗಿತ್ತು…’ ಎಂದು ಶಮಿ ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.