ಸರಕಾರ-ಖಾಸಗಿ ಸಹಭಾಗಿತ್ವದಿಂದ ಕ್ರೀಡಾರಂಗ ಬೆಳಗಲು ಸಾಧ್ಯ


Team Udayavani, Aug 28, 2021, 6:40 AM IST

ಸರಕಾರ-ಖಾಸಗಿ ಸಹಭಾಗಿತ್ವದಿಂದ ಕ್ರೀಡಾರಂಗ ಬೆಳಗಲು ಸಾಧ್ಯ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶದ ಕ್ರೀಡಾರಂಗದತ್ತ ಒಮ್ಮೆ ದೃಷ್ಟಿ ಹಾಯಿಸಿದಾಗ ನಮಗೆ ನಿರಾಶೆಯಾಗುವುದು ಸಹಜ. ಹಾಗೆಂದು ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಬೃಹತ್‌ ಜನಸಂಖ್ಯೆ, ಯುವಜನತೆಯನ್ನು ಒಳಗೊಂಡ ದೇಶ ಕ್ರೀಡೆಯಲ್ಲಿ ಹಿನ್ನಡೆ ಕಾಣಲು ಇಡೀ ವ್ಯವಸ್ಥೆಯಲ್ಲಿನ ಲೋಪಗಳೇ ಕಾರಣ. ಸೂಕ್ತ ಮಾರ್ಗದರ್ಶನ, ತರಬೇತಿ, ಪ್ರೋತ್ಸಾಹ, ಹಣಕಾಸು ನೆರವು ನೀಡಿದ್ದೇ ಆದಲ್ಲಿ ದೇಶ ಕ್ರೀಡಾ ಕ್ಷೇತ್ರದಲ್ಲಿ ಮಿಂಚಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ ಮತ್ತು ಖಾಸಗಿ ಸಹಭಾಗಿತ್ವ ಅತೀಮುಖ್ಯ.

ಕ್ರೀಡಾರಂಗದ ಶಕ್ತಿ ಇರುವುದೇ ಯುವ ಜನರ ಅಂತಃಶಕ್ತಿಯಲ್ಲಿ. ಇಡೀ ವಿಶ್ವದಲ್ಲಿ 30 ವರ್ಷದೊಳಗಿನ ಯುವಜನರು ಭಾರತದಲ್ಲಿ ಇರುವಷ್ಟು ಬೇರೆಲ್ಲೂ ಇಲ್ಲ. ಈ ದೃಷ್ಟಿಯಲ್ಲಿ ಕ್ರೀಡಾರಂಗದಲ್ಲಿ ನಾವು ವಿಶ್ವದಲ್ಲೇ ಮುಂಚೂಣಿ ಯಲ್ಲಿರಬೇಕಾಗಿತ್ತು. ಸ್ವಾತಂತ್ರ್ಯದ ಬಳಿಕವಾದರೂ ನಾವು ವಿಶ್ವದ ಕ್ರೀಡಾರಂಗದಲ್ಲಿ ಮಿಂಚಬೇಕಿತ್ತು. ಹಾಗಾಗಿಲ್ಲ ಎಂಬುದು ನೋವಿನ ವಿಚಾರ. ಈ ಬಗ್ಗೆ ಇನ್ನಾದರೂ ನಾವು ಗಂಭೀರವಾಗಿ ಯೋಚಿಸಿ ಹೆಜ್ಜೆ ಇರಿಸಬೇಕಾಗಿದೆ.
ಭಾರತದ ಭೌಗೋಳಿಕ ವಾತಾವರಣ ಎಲ್ಲ ಬಗೆಯ ದೈಹಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದಂತಿದೆ. ಉತ್ತಮ ತರಬೇತಿ ಕೊಡಬಲ್ಲವರೂ ನಮ್ಮಲ್ಲಿದ್ದಾರೆ. ಆದರೆ ನಮ್ಮ ಯುವಜನರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಒಂದಿಷ್ಟು ಯೋಚಿಸಬೇಕಿದೆ.
ಬಡವರೇ ಹೆಚ್ಚಿರುವ ಭಾರತದಲ್ಲಿ ಬಹುತೇಕ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಆ ಕಾರಣ ದೈಹಿಕ ದಾಡ್ಯìತೆ ವಿಚಾರವಿರಲಿ, ಸಾಮಾನ್ಯ ಆರೋಗ್ಯ ಸ್ಥಿತಿ ಕಾಪಾಡಿ ಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಅಪೌಷ್ಟಿಕತೆಯಿಂದ ಸಾಮಾನ್ಯ ಸ್ಥಿತಿಗೆ ಬಂದ ಬಳಿಕ ಕ್ರೀಡಾರಂಗದ ಚಟುವಟಿಕೆಗಳಿಗೆ ಮೈಒಡ್ಡುವ ದಾಡ್ಯìತೆ ನಾವು ರೂಢಿಸಬೇಕಾಗಿದೆ.

ಗ್ರಾಮೀಣ ಮೂಲ: ನಗರದ ವಾತಾವರಣಕ್ಕಿಂತ ಯಾವುದೇ ಕಲುಷಿತ ವಾತಾವರಣ ಇರದ ಗುಡ್ಡಗಾಡು, ಕಾಡುಮೇಡುಗಳಲ್ಲಿ ಹುಟ್ಟಿ ಬೆಳೆದವರಲ್ಲೇ ನಾವು ಸಹಜ ಕ್ರೀಡಾಳುಗಳನ್ನು ಕಾಣಬಲ್ಲೆವು. ಹಳ್ಳಿಗರ ದೈಹಿಕ ಕ್ಷಮತೆ ಹೆಚ್ಚು ಸಬಲ. ಈ ದಿಸೆಯಲ್ಲಿ ಹಳ್ಳಿಗಾಡಿನ ಕ್ರೀಡಾಳುಗಳನ್ನು ಆಧುನಿಕ ಕ್ರೀಡೆಗಳಿಗೆ ಒಗ್ಗುವಂತೆ ಬೆಳೆಸಬೇಕಾಗಿದೆ. ಈಗಲೂ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಇಂತಹ ಕ್ರೀಡಾ ಪ್ರತಿಭೆಗಳೇ ಮಿಂಚುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಗೆದ್ದಾಗ ಸಂಭ್ರಮ, ಹಣದ ಹೊನಲು: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗಳಿಸಿದವರಿಗೆ ಕೋಟಿಗಟ್ಟಲೆ ಮೊತ್ತದ ಬಹುಮಾನಗಳ ರೂಪದಲ್ಲಿ ಹಣದ ಹೊಳೆಯೇ ಅವರತ್ತ ಹರಿದುಬಂದಿತು. ಇದು ಸ್ವಾಗತಾರ್ಹವೇ. ಆದರೆ ನಮ್ಮಲ್ಲಿರುವ ಇಂಥ ಕ್ರೀಡಾಳುಗಳನ್ನು ಚಿಕ್ಕಂದಿನಲ್ಲೇ ಹುಡುಕಿ, ಸಾಧ್ಯವಿರುವ ಎಲ್ಲ ಬೆಂಬಲ, ತರಬೇತಿ ನೀಡುವ ವ್ಯವಸ್ಥೆ ನಮ್ಮಲ್ಲಿದೆಯೇ? ಈಗಿನ ದಿನಮಾನದಲ್ಲಿ ಇಂಥ ಪ್ರತಿಭಾವಂತ ಕ್ರೀಡಾಳುಗಳಿಗೆ ಮಾಸಿಕ ಕನಿಷ್ಠ 25,000 ರೂ. ಗಳಷ್ಟನ್ನಾದರೂ ಸರಕಾರ ಒದಗಿಸಬೇಡವೇ?

ಬಜೆಟ್‌: 2021-22 ರಲ್ಲಿ ಕ್ರೀಡೆಗಾಗಿ ಕೇಂದ್ರ ಸರಕಾರ ಇಟ್ಟ ಬಜೆಟ್‌ 2,596 ಕೋ. ರೂ.. ಇದು ಹಿಂದಿನ ಸಾಲಿಗಿಂತ 230 ಕೋ. ರೂ. ಕಡಿಮೆ! ಇದಕ್ಕೆ ಕಾರಣ ಕೊರೊನಾ ಆಗಿರಬಹುದು. ಆದರೆ ಅಷ್ಟಾದರೂ ಕೂಡ ಈ ದೇಶಕ್ಕೆ ಏನೇನೂ ಸಾಲದು. ರಾಜ್ಯ ಸರಕಾರ ಕ್ರೀಡೆಗೆ ಮೀಸಲಿರಿಸಿದ ರೂ. 250 ಕೋ. ರೂ. ಕೂಡ ಅಷ್ಟೇ ನಿರಾಶಾದಾಯಕ.

ನಿರ್ದಿಷ್ಟ ಕ್ರೀಡೆಯತ್ತ ಗಮನ ಅಗತ್ಯ: ಭಾರತೀ ಯರು ಬಹುವಿಧ ಕುಶಲಿಗರು. ಕ್ರೀಡೆಯೂ ಇದಕ್ಕೆ ಹೊರತಲ್ಲ. ಓರ್ವ ಕ್ರೀಡಾಳು ಓಟ, ಗುಂಡು ಎಸೆತ, ಈಟಿ ಎಸೆತ, ಉದ್ದ ಜಿಗಿತ, ಎತ್ತರ ಜಿಗಿತ, ಕುಸ್ತಿ ಹೀಗೆ ಭಾರತೀಯರು ಎಲ್ಲ ಕ್ರೀಡೆಗಳಿಗೆ ಸಿದ್ಧ. ಇದೇ ದೊಡ್ಡ ದೋಷ. ಒಬ್ಬ ವ್ಯಕ್ತಿಯ ನಿಜವಾದ ಕ್ಷೇತ್ರ ಯಾವುದು ಎಂಬುದನ್ನು ಗುರುತಿಸದೆ ಎಲ್ಲದರಲ್ಲೂ ಭಾಗವಹಿಸುವ ಹುಮ್ಮಸ್ಸು. ಇದರಿಂದಾಗಿ ಕ್ರೀಡಾಳು ವಿನ ದೈಹಿಕ ಸಾಮರ್ಥ್ಯ ಹತ್ತಾರು ಕ್ರೀಡೆಗಳಲ್ಲಿ ಹಂಚಿ ಹೋಗಿ ಯಾವುದರಲ್ಲೂ ಪರಿಪೂರ್ಣತೆಯತ್ತ ಸಾಗಲು ಸಾಧ್ಯವಾಗುತ್ತಿಲ್ಲ.

ಭಾರತದ ಒಟ್ಟಾರೆ ಕ್ರೀಡಾರಂಗದ ಸ್ಥಿತಿಗತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ನಾವು ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಿದ್ಧ. ಆದರೆ ನಮ್ಮಿಂದ ಎಷ್ಟು ಸಾಧನೆಯಾದೀತು ಎಂಬ ಹಿಡಿತವಿಲ್ಲ. ಹಾಗಾಗಿ ನಿರ್ದಿಷ್ಟ ಆಟ, ಕ್ರೀಡೆಗಳನ್ನೇ ಆರಿಸಿ ಪದಕ ಗಳಿಕೆಗೆ ಪ್ರಯತ್ನಿಸಬೇಕಾಗಿದೆ. ಮುಂದಿನ 25 ವರ್ಷಗಳಲ್ಲಿ ನಮಗೆ ಆರು ಒಲಿಂಪಿಕ್ಸ್‌ ಕೂಟಗಳಲ್ಲಿ ಭಾಗವಹಿಸಲು ಅವಕಾಶಗಳಿವೆ. ನಾವು ನಿರ್ದಿಷ್ಟವಾಗಿ ಕೆಲವೇ ಕೆಲವು ಕ್ರೀಡೆಗಳನ್ನು, ಗುಂಪು ಆಟಗಳನ್ನು ಆಯ್ಕೆ ಮಾಡಿಕೊಂಡು ಅದರಲ್ಲೇ ಪಾರಮ್ಯ ಸಾಧಿಸಲು ಪ್ರಯತ್ನಿಸಬೇಕಾಗಿದೆ.

ಕ್ರೀಡೆ ಮತ್ತು ರಾಜಕೀಯ: ಕ್ರೀಡೆಗಳಿಗೆ ಸಂಬಂಧಿಸಿದ ಅದೆಷ್ಟೋ ಸಂಘಟನೆಗಳಿವೆ. ಒಂದೇ ಕ್ರೀಡೆಯೊಳಗಡೆಯೇ ಹಲವು ಸಂಘಟನೆಗಳಿವೆ. ಈ ಅಸೋಸಿಯೇಶನ್‌ಗಳ ಅಧ್ಯಕ್ಷಗಿರಿಗೆ ಒಂದಷ್ಟು ಲಾಬಿ, ರಾಜಕೀಯ, ಒತ್ತಡ, ಕೋರ್ಟ್‌ ಕಟ್ಟೆ ಏರಿದ ಸಂಘಟನೆಗಳ ಭಿನ್ನಾಭಿಪ್ರಾಯಗಳು ಒಂದೆಡೆಯಾದರೆ ಇನ್ನೊಂದೆಡೆ ಆಯ್ಕೆಯಾದ ಅಧ್ಯಕ್ಷರ ಭರ್ಜರಿ ಪದಗ್ರಹಣ ಸಮಾರಂಭ ನಡೆಯುತ್ತದೆ. ಅಂದು ಹೇಳಿಕೆ ಕೊಟ್ಟು ಹೋದ ಮಹನೀಯರು ಮತ್ತೆ ಯಾವುದೇ ಕೂಟದಲ್ಲಿ ಕಾಣಸಿಗುವುದಿಲ್ಲ. ಸಿಕ್ಕಿದರೂ ಅಪರೂಪ. ಇಂತಹ ಶೋಕಿ, ಅಧಿಕಾರ ಲಾಲಸೆ ನಮ್ಮ ದೇಶದಲ್ಲಿ ಇರುವವರೆಗೆ ಅಸೋಸಿಯೇಶನ್‌ಗಳ ಮೂಲಕ ಕ್ರೀಡೋದ್ಧಾರ ಸಾಧ್ಯವಿಲ್ಲ. ಅರ್ಹರನ್ನು ಆರಿಸುವ ಮೂಲಕ ಮುಂದಿನ ವರ್ಷಗಳಲ್ಲಿ ಆದರೂ ಕ್ರೀಡಾ ಚಟುವಟಿಕೆಗಳು ಫಲಿತಾಂಶಪೂರಿತವಾಗಿ ನಡೆದಾವು. ಹೀಗೆಲ್ಲ ಅಧ್ಯಕ್ಷರಾಗುವ ಬದಲು ಯಾವುದಾದರೂ ರಾಜಕೀಯ ಪಕ್ಷದ ನಾಯಕರಾಗಿಯೋ, ಒಳ ಬಾಗಿಲಿನಿಂದ ಸದನ ಪ್ರವೇಶಿಸಿಸುವ ರಾಜಕಾರಣಿಗಳಾಗುವುದೋ ಲೇಸು. ಇನ್ನು ಕ್ರೀಡಾರಂಗದಲ್ಲಿರುವ ಶೋಷಣೆಯ ಹಲವು ಮುಖಗಳನ್ನು ನಿವಾರಿಸುವುದೂ ಅಗತ್ಯವಾಗಿದೆ.

ಸರಕಾರಕ್ಕೆ ಕ್ರೀಡಾ ಯೋಜನೆಗಳನ್ನು ರೂಪಿಸಿ ಸಲ್ಲಿಸುವ ತಜ್ಞರು ನಮ್ಮಲ್ಲಿದ್ದಾರೆ. ನಿಜಕ್ಕೂ ಅನುಸರಣ ಯೋಗ್ಯ ಸಲಹೆ, ಮಾರ್ಗದರ್ಶನ ನೀಡುತ್ತಾರೆ. ಆದರೆ ಈ ಯೋಜನೆ, ಯೋಚನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ನಮ್ಮ ಆಡಳಿತ ವ್ಯವಸ್ಥೆಗೆ ಸಾಧ್ಯವಾಗುತ್ತಿಲ್ಲ. ಇದನ್ನು ನಿವಾರಿಸುವ ಪ್ರಯತ್ನವನ್ನು ಮುಂದಿನ ವರ್ಷಗಳಲ್ಲಾದರೂ ಮಾಡಬೇಕಾಗಿದೆ.

ಖಾಸಗಿ ಪ್ರಯತ್ನಕ್ಕೆ ಬೆಂಬಲವಿಲ್ಲ: ಸರಕಾರ, ಇಲಾಖೆ, ಅಸೋಸಿಯೇಶನ್‌ಗಳು, ವಿಶ್ವವಿದ್ಯಾನಿಲ ಯಗಳು ಮಾಡದ, ಮಾಡಿ ತೋರಿಸದ ಕ್ರೀಡಾ ಸಾಧನೆ ಇವತ್ತು ಖಾಸಗಿ ವಲಯಗಳಿಂದ ಸಾಧ್ಯವಾಗುತ್ತಿದೆ. ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ರೀಡಾಳುಗಳಿಗೆ ಉಚಿತ ಶಿಕ್ಷಣ, ಆಹಾರ ಸಹಿತ ಕ್ರೀಡಾ ತರಬೇತಿ ನೀಡಿ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ಕ್ರೀಡಾಳುಗಳು ಪದಕಗಳನ್ನು ಗಳಿಸಿದರೂ ಯಾವುದೇ ಸರಕಾರ, ಸಂಘಟನೆ, ವಿವಿ ಮೂಲಕ ಆರ್ಥಿಕ ಬೆಂಬಲವೂ ಇಲ್ಲ, ದಾಖಲೆಯ ಪ್ರಕಟನೆಯೂ ಇಲ್ಲ, ಕನಿಷ್ಠ ಶ್ಲಾಘನೆಯ ಒಂದು ಮಾತೂ ಇಲ್ಲ. ಅದಕ್ಕೂ ಮಿಗಿಲಾಗಿ ಖಾಸಗಿ ವಲಯದವರನ್ನು “ವೈರಿ’ಗಳಂತೆ ನೋಡುವ ನಮ್ಮ ವ್ಯವಸ್ಥೆ ಜುಗುಪ್ಸೆ ಹುಟ್ಟಿಸುವಂತಿದೆ. ಹಾಗಾಗಿಯೇ ಖಾಸಗಿ ವಲಯದ ಹಲವು ಶಿಕ್ಷಣ ಸಂಸ್ಥೆಗಳು ಮತ್ತದರ ಪ್ರವರ್ತಕರು ಕ್ರೀಡಾ ಕ್ಷೇತ್ರದ ಬಗೆಗಿನ ತಮ್ಮ ಆಸಕ್ತಿಯನ್ನು ಕಳೆದುಕೊಂಡ ಹಲವು ಉದಾಹರಣೆಗಳು ದೇಶದಲ್ಲಿವೆ.
ಆರೋಗ್ಯ, ಶಿಕ್ಷಣ ಇವತ್ತು ಖಾಸಗಿಯವರಿಂದಾಗಿ ಮುನ್ನಡೆಗೆ ಬಂದಿವೆ. ಕ್ರೀಡೆ ಎಂಬುದು ಲಾಭ ನಷ್ಟದ ವಿಷಯ ಆಲ್ಲ. ಆಸಕ್ತಿ ಇರುವ ಖಾಸಗಿಯವರನ್ನು ಪ್ರೋತ್ಸಾಹಿಸಿದಲ್ಲಿ ಮಾತ್ರ ಭಾರತ ಕ್ರೀಡಾರಂಗದಲ್ಲಿ ಬೆಳಗೀತು.

-   ಡಾ| ಎಂ. ಮೋಹನ ಆಳ್ವ
ಅಧ್ಯಕ್ಷರು, ಆಳ್ವಾಸ್‌ ಎಜುಕೇಶನ್‌ ಫೌಂಡೇಶನ್‌ ರಿ., ಮೂಡುಬಿದಿರೆ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

Mangaluru: Ambedkar – Constitution should not be a tool for anyone: BL Santosh

Mangaluru: ಅಂಬೇಡ್ಕರ್‌ – ಸಂವಿಧಾನ ಯಾರಿಗೂ ಟೂಲ್‌ ಆಗಬಾರದು: ಕೈ ವಿರುದ್ದ ಸಂತೋಷ್‌ ಟೀಕೆ

7(1

Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

Mangaluru: ಕರಾವಳಿ ಉತ್ಸವದಲ್ಲಿ ಹೆಲಿಕಾಪ್ಟರ್ ಮೂಲಕ ನಗರದ ದರ್ಶನಕ್ಕೆ ಅವಕಾಶ

3

Mangaluru: ಸಹಬಾಳ್ವೆ ಬೆಸೆಯುತ್ತಿದೆ ‘ಕುಸ್ವಾರ್‌’

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.