![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 19, 2020, 5:13 AM IST
ಸಾಂದರ್ಭಿಕ ಚಿತ್ರ..
ಸಾಗರ/ಮಣಿಪಾಲ: ಕಳೆದ ಕೆಲ ದಿನಗಳಿಂದ ಮಂಗನ ಕಾಯಿಲೆ(ಕೆಎಫ್‌ಡಿ)ಯಿಂದ ಬಳಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ನಾಲ್ವರು ಸೇರಿದಂತೆ 6 ಮಂದಿ ಗುಣಮುಖರಾಗಿದ್ದಾರೆ. ಏತನ್ಮಧ್ಯೆ ಕಾರ್ಗಲ್ ಪಿಎಚ್‌ಸಿ ವ್ಯಾಪ್ತಿಯ ವ್ಯಕ್ತಿಯೊಬ್ಬರು ರೋಗಬಾಧಿತರಾಗಿದ್ದಾರೆ.
ತುಮರಿಯ ಚದರವಳ್ಳಿಯ ಧರ್ಮರಾಜ್(38) ಹಾಗೂ ಸಿಗೇಮಕ್ಕಿಯ ಮಹೇಶ್ (32) ಗುರುವಾರ ಹಾಗೂ ಕಾರ್ಗಲ್‌ನ ಕಣ್ಣೂರಿನ ಜಯಕುಮಾರ್(27) ಹಾಗೂ ಅರಳಗೋಡು ಕಸಗುಪ್ಪೆಯ ಚಂದ್ರಕಲಾ(50) ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಸಾಗರದ ಆನಂದಪುರದ ಆದರ್ಶ (9) ಆರೋಗ್ಯ ಕೂಡ ಸುಧಾರಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಕೊರ್ಲಕೈ ಪಿಎಚ್‌ಸಿ ವ್ಯಾಪ್ತಿಯ ಜೋಗಿನ್ಮಠದ ಕಾರ್ತಿಕ (5) ಹಾಗೂ ಚಂದನ್ (6) ಅವರನ್ನು ಗುರುವಾರವೇ ಮನೆಗೆ ಕಳುಹಿಸಿ ಕೊಡಲಾಗಿದೆ. ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಶೇಷಪ್ಪ (58) ಅವರು ಚೇತರಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.