Moral Story: ಸೋಮಾರಿ ಅರಿತ ಸಮಯದ ಬೆಲೆ

ನಾವು ಹೇಗೆ ಉಪಯೋಗಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

Team Udayavani, Nov 30, 2024, 2:55 PM IST

Moral Story: ಸೋಮಾರಿ ಅರಿತ ಸಮಯದ ಬೆಲೆ

ಒಂದೂರಿನಲ್ಲಿ ಒಬ್ಬ ವೃದ್ಧನಿರುತ್ತಾನೆ ಆತನಿಗೆ ಒಬ್ಬನೇ ಒಬ್ಬ ಮಗ. ಆತ ತುಂಬಾ ಸೋಮಾರಿಯಾಗಿರುತ್ತಾನೆ. ಯಾವುದೇ ಕೆಲಸ ಕಾರ್ಯವನ್ನು ಮಾಡವುದಕ್ಕೆ ಮುಂದಾಗದೇ, ಬೇಜವಾಬ್ದಾರಿತನದಿಂದ ದಿನ ಕಳೆಯುತ್ತಿರುತ್ತಾನೆ. ಯವ್ವನ ಜಾರಿ ಜವಾಬ್ದಾರಿಯ ವಯಸ್ಸು ದಾಟಿದರೂ,ದಿನನಿತ್ಯ ಊರು-ಊರು ಸುತ್ತಿ ಸಮಯ ಕಳೆಯುವುದನ್ನು ಬಿಟ್ಟರೇ, ಮುಂದಿನ ಜೀವನದ ಬಗ್ಗೆ ಕಿಂಚಿತ್‌ ಆಲೋಚನೆ ಆತನಿಗೆ ಇರುವುದಿಲ್ಲ. ಆ ವೃದ್ಧನಿಗೆ ಆತನ ಮಗನದ್ದೇ ವ್ಯಥೆಯಾಗಿರುತ್ತದೆ. ಸುಮ್ಮನೆ ಕಾಲ ಹರಣ ಮಾಡಿ ನಾನು ಸಂಪಾದಿಸಿದ್ದನ್ನು ಖರ್ಚು ಮಾಡುವುದನ್ನು ಹೊರತು ಪಡಿಸಿದರೇ ಮುಂದೆ ಏನು ಮಾಡಿಯಾನು, ಮುಂದಿನ ಆತ ಜೀವನ ಏನು, ಎತ್ತ ಎಂಬ ಚಿಂತೆಯಲ್ಲಿರುತ್ತಾನೆ.

ಒಂದು ದಿನ ಆತ ಮಗನನ್ನು ಕರೆದು ಮನೆಯಲ್ಲಿರುವ ಗೋಡೆ ಗಡಿಯಾರನ್ನು ಆತನ ಕೈಗೆ ಇಡುತ್ತಾ ಇದನ್ನು ಹೊರಗಡೆ ಜನನಿಬಿಡ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಇದರ ಬೆಲೆ ಎಷ್ಟು ಎಂದು ಕೇಳಿ ಬರಬೇಕೆಂದು ತಾಕೀತು ಮಾಡುತ್ತಾನೆ. ಒಲ್ಲದ ಮನಸ್ಸಿನಿಂದ ಆತ ಹೇಗೋ ಮಾರುಕಟ್ಟೆಗೆ ಅದನ್ನು ತೆಗೆದುಕೊಂಡು ತೆರಳುತ್ತಾನೆ. ಅಲ್ಲಿ ಎಲ್ಲರೂ ಒಂದೊಂದು ದರವನ್ನು ಫಿಕ್ಸ್‌ ಮಾಡಿ ಹೇಳುತ್ತಾರೆ. ಯಾರೊಬ್ಬರೂ ಕೂಡಾ ಅದರ ಮೂಲ ಬೆಲೆಯೆನ್ನು ಹೇಳಲು ಅಸಫಲರಾಗುತ್ತಾರೆ. ಮನೆಗೆ ಹಿಂದುರಿಗಿ ಆತ ತನ್ನ ತಂದೆಯಲ್ಲಿ ವಿಷಯ ಪ್ರಸ್ತಾವ ಮಾಡುತ್ತಾನೆ.

ಗಡಿಯಾರವನ್ನು ಅಲ್ಮೆರಾದ ಒಳಗಡೆ ಇಡಲು ಸೂಚಿಸುತ್ತಾರೆ. ಮರುದಿನ ಪುನಃ ಮಗನನ್ನು ಕರೆದ ಆ ವೃದ್ಧ,ಆತನಿಗೆ ಇನ್ನೊಂದು ಕೆಲಸವನ್ನು ನೀಡುತ್ತಾರೆ. ಅದೇ ಗಡಿಯಾರವನ್ನು ಮತ್ತೊಮ್ಮೆ ನೀಡುತ್ತಾ, ಹೋಗು ಇಂದು ಈ ಗಡಿಯಾರದ ಒಳಗೆ ನಡೆಯುತ್ತಿರುವ ಸಮಯದ ಬೆಲೆಯನ್ನು ಕೇಳಿಕೊಂಡು ಬಾ. ಇದನ್ನು ಕೇಳಿದ ಆತ ತಂದೆ ಯಾಕೆ ಈ ತರಹ ನನಗೆ ತೊಂದರೆ ನೀಡುತ್ತಿದ್ದಾರೆ ಎಂದು ದುಃಖಿತನಾಗಿ ತೆರಳುತ್ತಾನೆ. ತಂದೆ ಹೇಳಿದಂತೆ ಆತ ಜನರುಗಳ ಮುಂದೆ ಈ ಗಡಿಯಾರದ ಒಳಗೆ ನಡೆಯುತ್ತಿರುವ ಸಮಯದ ಬೆಲೆ ಹೇಳಿ ಎಂದು ಕೇಳುತ್ತಾ ಸಾಗುತ್ತಾನೆ.

ಈತನ ಈ ಪ್ರಶ್ನೆಯನ್ನು ಕೇಳಿ ಜನರು ಈತ ಮಾನಸಿಕ ಅಸ್ವಸ್ಥನಾಗಿರಬಹುದೆಂದೂ ಅಂದು ಕೊಳ್ಳುತ್ತಾರೆ. ನಿನ್ನೆ ದಿನ ಗಡಿಯಾರದ ಬೆಲೆ ಕೇಳುತ್ತಿದ್ದವನು, ಇಂದು ಗಡಿಯಾರದಳೊಗಿನ ಸಮಯದ ಬೆಲೆ ಬಗ್ಗೆ ಕೇಳುತ್ತಿದ್ದನ್ನಲ್ಲ ಎಂದು ಕೆಲವರು ಬೈದು ಕಳುಹಿಸಿದ್ದು ಉಂಟು. ಯುವಕ ತುಂಬಾ ಗೊಂದಲಕ್ಕೆ ಒಳಗಾಗುತ್ತಾನೆ.

ಯಾಕೆ ಜನ ಹೀಗೆ ನಡೆದುಕೊಳ್ಳುತ್ತಿದ್ದಾರೆ ?ಯಾಕೆ ನನಗೆ ಹೀಗೆ ಆಗುತ್ತಿದೆ? ಎಂದು ಎದುರಿಗೆ ಕಣ್ಣಿಗೆ ಕಾಣುವ ವೃದ್ಧರೊಬ್ಬರ ಅಂಗಡಿಗೆಯತ್ತ ಸಾಗುತ್ತಾನೆ. ಆತ ಯುವಕನ ಮನಸ್ಥಿತಿ ಕಂಡು ಅರ್ಥೈಸಿಕೊಳ್ಳುತ್ತಾನೆ. ಹಾಗೆ ಕೊಂಚ ಕ್ಷಣ ಆಲೋಚಿಸಿ, ನೋಡು ಹುಡುಗ ಸಮಯದ ಬೆಲೆ ಕೇಳುತ್ತಿದ್ದೆಯಲ್ಲ ಇದಕ್ಕೆ ಯಾವುದೇ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ ನೀನು ಕೋಟಿ ರೂಪಾಯಿಕೊಟ್ಟರೂ, ಒಂದು ಸೆಕೆಂಡ್‌ ಕೂಡಾ ವಾಪಸ್ಸು ತರಲು ಸಾಧ್ಯವಿಲ್ಲ. ಅದಕ್ಕಾಗಿ ಸಮಯದ ಉಪಯೋಗವನ್ನು ಸರಿಯಾಗಿ ಮಾಡು. ಸಮಯವೆಂಬುದು ಒಂದು ಒಳ್ಳೆಯ ಮತ್ತು ಕೆಟ್ಟ ವಿಚಾರವನ್ನು ಒಳಗೊಂಡಿದೆ.

ಕೆಟ್ಟ ವಿಷಯ ಏನೆಂದರೆ ಅದನ್ನು ನಾವು ಕಳೆದುಕೊಂಡು ಬಿಡುವುದು ಹಾಗೆ ಒಳ್ಳೆ ವಿಷಯ ಯಾವುದೆಂದರೆ ಆ ಸಮಯದಲ್ಲಿ ನಾವು ಒಳ್ಳೆ ಕಾರ್ಯದಲ್ಲಿ ವ್ಯಯಿಸುತ್ತೇವೆಲ್ಲ ಅದು. ಎಲ್ಲರ ಹತ್ತಿರವೂ ಕೂಡ ದಿನಕ್ಕೆ 24ಗಂಟೆ ಸಮಯವಿರುತ್ತದೆ. ಶ್ರೀಮಂತರ ಬಳಿಯೂ ಹೌದು ಬಡವನ ಬಳಿಯಲ್ಲೂ ಇರುತ್ತದೆ. ನಮ್ಮಲ್ಲಿ ಹೊಂದಿರುವ ಈ ಅನರ್ಘ್ಯ ರತ್ನವನ್ನು ನಾವು ಹೇಗೆ ಉಪಯೋಗಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಆ ವಯೋವೃದ್ಧರ ಮಾತು ಕೇಳಿ ಆ ಯುವಕನ ಮನಸ್ಸು ಅರಳುತ್ತದೆ. ಯಾವುದೋ ಬದಲಾವಣೆ ಗಾಳಿ ಆತನ ಮನಸ್ಸಿನೊಳಗೆ ಇಳಿಯುತ್ತದೆ. ಆತ ತಡ ಮಾಡದೇ ತನ್ನ ಮನೆಗೆ ತೆರಳಿ ತಂದೆಯಲ್ಲಿ ಎಲ್ಲ ವಿಚಾರವನ್ನು ಮನದಟ್ಟು ಮಾಡುತ್ತಾನೆ. ಆ ದಿನದಿಂದ ಆ ಯುವಕನ ಜೀವನ ಬದಲಾಗುತ್ತದೆ. ಒಂದೊಳ್ಳೆ ವ್ಯಕ್ತಿಯಾಗಿ ಜೀವನ ಸಾಗಿಸುತ್ತಾನೆ.

ಈ ಕಥೆಯ ತಾತ್ಪರ್ಯ ಇಷ್ಟೇ. ಸಮಯ ಎಲ್ಲರಿಗೂ ಉಚಿತವಾಗಿರುತ್ತದೆ. ಅದು ಬೆಲೆ ರಹಿತವಾದದ್ದು. ಅದನ್ನು ಖರೀದಿಸಲಾಗದು. ಆದರೆ ಅದನ್ನು ನಾವು ಸೂಕ್ತವಾಗಿ ಬಳಕೆ ಮಾಡಬಹುದು. ನಾವು ಅದನ್ನು ಇಟ್ಟುಕೊಳ್ಳಲೂ ಸಾಧ್ಯವಿಲ್ಲ, ವ್ಯಯಿಸಬಹುದು. ಒಮ್ಮೆ ನಷ್ಟ ಪಡಿಸಿದರೇ ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ನಾವುಗಳು ಸಮಯದ ಉಪಯೋಗ ಬಹಳ ಮುಖ್ಯ.

*ಶಿವಕುಮಾರ್‌ ಹೊಸಂಗಡಿ ,ದುಬೈ

ಟಾಪ್ ನ್ಯೂಸ್

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

1-nazi

Provocative speech: ಬಿಜೆಪಿ ವಕ್ತಾರೆ ನಾಜಿಯಾ ಖಾನ್ ವಿರುದ್ಧ ದೂರು ದಾಖಲು

ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

Karnataka: ಸರಕಾರದ ದುಡ್ಡಿನಲ್ಲಿ ಕಾಂಗ್ರೆಸ್‌ ಸಮಾವೇಶ: ಪ್ರಹ್ಲಾದ್‌ ಜೋಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

Jimmy Carter Life Journey: ಜಿಮ್ಮಿ ಕಾರ್ಟರ್‌- ಮಾನವೀಯತೆ, ಶಾಂತಿಯ ಶಿಲ್ಪಿ

ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆಗಳು

ವೈಕುಂಠ ಏಕಾದಶಿ: ಅಮೆರಿಕ ದೇವಸ್ಥಾನದಲ್ಲಿ ಆಚರಣೆ

15ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ: ಶ್ರೀ ವಿಶ್ವಕರ್ಮ ಸೇವಾ ಬಳಗ ಬಹ್ರೈನ್‌

15ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ: ಶ್ರೀ ವಿಶ್ವಕರ್ಮ ಸೇವಾ ಬಳಗ ಬಹ್ರೈನ್‌

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

CM  Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

CM Siddaramaiah: ಯತ್ನಾಳ್‌ ಇತಿಹಾಸ ತಿಳಿದಿಲ್ಲ, ಓದಿಯೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

Byrathi Suresh: ಪವರ್‌ ಪಾಲಿಟಿಕ್ಸ್‌, ಶೇರಿಂಗ್‌, ಕೇರಿಂಗ್‌ ಯಾವುದೂ ಇಲ್ಲ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

ದೇವೇಗೌಡರಿಗೆ ತಮ್ಮ ಕುಟುಂಬ ಬೆಳೆಸುವ ಛಲ: ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.