ನಾಗರಹೊಳೆ ಪಕ್ಷಿ ಸಮೀಕ್ಷೆಯಲ್ಲಿ 290 ಕ್ಕೂ ಹೆಚ್ಚು ಪಕ್ಷಿ ಪ್ರಬೇಧಗಳ ಪತ್ತೆ
ಬೆಳೆ-ಜೀವಹಾನಿಯ ನಡುವೆಯೂ ಜನರ ಸಹಕಾರ ಅನನ್ಯ: ಎಪಿಸಿಸಿಎಫ್ ಮನೋಜ್ ಕುಮಾರ್
Team Udayavani, Feb 13, 2023, 10:15 PM IST
ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವು 300 ಕ್ಕೂ ಹೆಚ್ಚು ಪ್ರಬೇಧಗಳಿಗೆ ಸೇರಿದ ಪಕ್ಷಿಗಳಿಗೆ ಆಶ್ರಯ ನೀಡಿರುವ ಹಸಿರು ಉದ್ಯಾನವಾಗಿದೆ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ರಾಜ್ಯ ಜಂಗಲ್ ಇನ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹೇಳಿದರು.
ನಾಗರಹೊಳೆ ಉದ್ಯಾನದಲ್ಲಿ ಕಳೆದ 3ದಿನದಿಂದ ನಡೆದಿದ್ದ ಪಕ್ಷಿ ಸಮೀಕ್ಷೆ ಅಭಿಯಾನ ಮುಕ್ತಾಯಗೊಂಡಿದ್ದು, ವೀರನಹೊಸಹಳ್ಳಿ ವಲಯದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಾಗರಹೊಳೆ ಅರಣ್ಯದಲ್ಲಿ ಪಕ್ಷಿ ಸಮೀಕ್ಷೆ ನಡೆಸಲು ದೇಶದ ೮ ರಾಜ್ಯಗಳಿಂದ ಪಕ್ಷಿ ಪ್ರಿಯರು ಆಗಮಿಸಿದ್ದು, ಇವರಲ್ಲಿ ಅನೇಕರಿಗೆ ಬೇರೆಲ್ಲೂ ಸಿಗದ ಅಪರೂಪದ ಪಕ್ಷಿಗಳು ಗೋಚರಿಸಿದ್ದು, ಉದ್ಯಾನವನ ಸರ್ವ ರೀತಿಯ ವನ್ಯಪ್ರಾಣಿ ಪಕ್ಷಿಗಳ ವಂಶಾಭಿವೃದ್ಧಿಗೆ ಪೂರಕವಾಗಿದೆ ಎಂದರು.
ಕೊಡುಗೆ
ನಾಗರಹೊಳೆ ಅಭಯಾರಣ್ಯದ ಅಭಿವೃದ್ಧಿಗೆ ಅರಣ್ಯದಂಚಿನ ಗ್ರಾಮಸ್ಥರ ಕೊಡುಗೆ ಅಪಾರವಾಗಿದ್ದು, ವನ್ಯಪ್ರಾಣಿಗಳ ಹಾವಳಿಗೆ ಬದುಕು ನಲುಗಿದ್ದರೂ ಅಭಯಾರಣ್ಯದ ಅಭಿವೃದ್ಧಿಗೆ ಪೂರಕ ಸಹಕಾರದಿಂದಾಗಿ ಇಂದು ನಾಗರಹೊಳೆ ಈ ಮಟ್ಟಕ್ಕೆ ಅಭಿವೃದ್ಧಿಯಾಗಿದೆ. ವನ್ಯಮೃಗಳ ದಾಳಿಗೆ ಬೆಳೆ ಮತ್ತು ಜೀವಹಾನಿ ಆದರೂ ಸ್ಥಳಿಯರು ಅರಣ್ಯ ಇಲಾಖೆಯೊಂದಿಗೆ ಸಕಾರಾತ್ಮಕ ಸ್ಪಂದನೆ ಇಲಾಖೆಗೆ ನೈತಿಕ ಸ್ಥೈರ್ಯ ಎನ್ನುವುದು ಗಮನಾರ್ಹ ಎಂದರು.
ಹಾರ್ನ್ ಬಿಲ್
ದಾಂಡೇಲಿ ಅರಣ್ಯದಲ್ಲಿ ಗೋಚರಿಸುವ ಹಾರ್ನ್ ಬಿಲ್ (ಕೊಂಬಿನ ಹಕ್ಕಿ) ಅಳಿವಿನಂಚಿನಲ್ಲಿದ್ದು, ಈ ಪಕ್ಷಿ ಸಂರಕ್ಷಣೆಗೆ ಇಲಾಖೆ ಆಧ್ಯತೆ ನೀಡಿದೆ. ಹುಲಿ ಸಂರಕ್ಷಣೆ ಕಾಯ್ದೆ ಅಡಿಯಲ್ಲೇ ಈ ಪಕ್ಷಿಯನ್ನು ಸೇರಿಸಿದ್ದು, ಅಕ್ರಮ ಭೇಟೆ ಮಾಡಿದಲ್ಲಿ ಉಗ್ರ ಶಿಕ್ಷೆಗೆ ಗುರಿಯಾಗಲಿದ್ದಾರೆ ಎಂದರು.
ಹುಲಿ ಯೋಜನೆ ನಿರ್ದೇಶಕ ಮತ್ತು ಪಕ್ಷಿ ಸಮೀಕ್ಷೆ ಅಭಿಯಾನದ ರುವಾರಿ ಹರ್ಷಕುಮಾರ್ ಚಿಕ್ಕನರಗುಂದ ಮಾತನಾಡಿ ಮೂರು ದಿನದ ಪಕ್ಷಿ ಸಮೀಕ್ಷೆ ಅಭಿಯಾನಕ್ಕೆ 700 ಸ್ವಯಂ ಸೇವಕರು ನೊಂದಣಿಯಾಗಿದ್ದು, ಈ ಪೈಕಿ 130 ಜನರನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 118 ಸ್ವಯಂ ಸೇವಕರು ಭಾಗವಹಿಸಿದ್ದರು, ಸ್ವಯಂಸೇವಕರ ಮನವಿಯಂತೆ ಮುಂದಿನ ಸಮೀಕ್ಷೆಯಲ್ಲಿ ಪ್ರತಿಬೀಟ್‌ಗೆ ಇಬ್ಬರು ಸ್ವಯಂಸೇವಕರನ್ನು ನಿಯೋಜಿಸಲು ಪ್ರಯತ್ನಿಸಲಾಗುವುದೆಂದರು.
ಕಳೆದ ಬಾರಿ 260, ಈಬಾರಿ 290 ಪ್ರಬೇಧ ದಾಖಲು
೮೬೪ ಚದರ ಕಿ.ಮಿ. ವ್ಯಾಪ್ತಿಯ ನಾಗರಹೊಳೆಯನ್ನು 8 ವಲಯಗಳನ್ನಾಗಿ ವಿಭಾಗಿಸಿದ್ದು 91 ಬೀಟ್ ಗಳಲ್ಲಿ118 ಸ್ವಯಂ ಸೇವಕರ ತಂಡ ರಚಿಸಿ ಇಲಾಖೆ ಸಿಬಂದಿಯೊಂದಿಗೆ ಸಮೀಕ್ಷೆಗೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಈ ಸಮೀಕ್ಷೆಯಲ್ಲಿ 290 ಪ್ರಬೇಧಕ್ಕೆ ಸೇರಿದ ಪಕ್ಷಿಗಳು ಗುರುತಿಸಿ ಇ–ಬರ್ಡ್ಆಪ್ ನಲ್ಲಿ ದಾಖಲಿಸಲಾಗಿದೆ. ಕಳೆದ ಸಾಲಿನಲ್ಲಿ 260, ಪ್ರಬೇಧಕ್ಕೆ ಸೇರಿದ ಪಕ್ಷಿಗಳು ದಾಖಲಾಗಿದ್ದವು ಎಂದರು.
ಕಾರ್ಯಕ್ರಮದಲ್ಲಿ ಪಕ್ಷಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಎಸಿಎಫ್. ಎಸಿಎಫ್ ದಯಾನಂz, ನ್ಯಾಚುರಲಿಸ್ಟ್ ಗೋಪಿ, ಹಲವು ಸ್ವಯಂಸೇವಕರು ಅಭಿಪ್ರಾಯ ಹಂಚಿಕೊಂಡರು. ಎಲ್ಲ 8 ವಲಯಗಳ ಆರ್‌ಎಫ್‌ಓ ಗಳು ಮತ್ತು ಸಿಬ್ಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.