5 ಕಿ.ಮೀ. ಉದ್ದದ ರಸ್ತೆಯಲ್ಲಿ 8ಕ್ಕೂ ಅಧಿಕ “ಯೂ’ ಟರ್ನ್ ಗಳು
ಉಡುಪಿ-ಮಣಿಪಾಲ: ಅವೈಜ್ಞಾನಿಕ "ಯೂ' ಟರ್ನ್ ಳಿಂದ ಅಪಘಾತ
Team Udayavani, May 20, 2020, 1:15 PM IST
ಅವೈಜ್ಞಾನಿಕ ಯೂ ಟರ್ನ್ ಳಿಂದಾಗಿ ವಿರುದ್ದ ದಿಕ್ಕಿನಲ್ಲಿ ಸಂಚರಿಸುತ್ತಿರುವ ವಾಹನಗಳು.
ಉಡುಪಿ: ಉಡುಪಿ-ಮಣಿಪಾಲದ 5 ಕಿ.ಮೀ.ಹೆದ್ದಾರಿಯಲ್ಲಿರುವ 8ಕ್ಕೂ ಅಧಿಕ ಅವೈಜ್ಞಾನಿಕ ಯೂ ಟರ್ನ್ ಗಳು ಅಪಘಾತಕ್ಕೆ ಕಾರಣವಾಗುತ್ತಿವೆ. ಜತೆಗೆ ಟ್ರಾಫಿಕ್ ದಟ್ಟಣೆಯೂ ಉಂಟಾಗುತ್ತಿದೆ. ಹೆದ್ದಾರಿ ಇಲಾಖೆಯ ಮಾರ್ಗಸೂಚಿಯಂತೆ 2 ಕಿ.ಮೀ.ಗೆ ಒಂದರಂತೆ ಯೂ ಟರ್ನ್ ಗಳಿರಬೇಕು. ಆದರೆ ಇಲ್ಲಿ ಮಾತ್ರ ಅವೆಲ್ಲ ನಿಯಮವನ್ನು ಗಾಳಿಗೆ ತೂರಲಾಗಿದೆ. ಉಡುಪಿಯಿಂದ ಮಣಿಪಾಲಕ್ಕೆ ಸಂಚರಿಸುವಾಗ ಹತ್ತು ಯೂ ಟರ್ನ್ ಗಳನ್ನು ನಿರ್ಮಿಸಲಾಗಿದೆ. ಆದರೆ ಜಿಲ್ಲೆ ಸಹಿತ ರಾಜ್ಯದ ಹೊರಭಾಗದಿಂದ ಬರುವ ಪ್ರಯಾಣಿಕರಿಗೆ ಇದರ ಅರಿವಾಗದೆ ಅಪಘಾತ ಸಂಭವಿಸುತ್ತಿದೆ.
ಅತೀ ವೇಗದ ಸಂಚಾರ
ಜಿಲ್ಲೆಯಲ್ಲಿ ಲಾಕ್ಡೌನ್ ಕಾರಣದಿಂದ ಕೆಲದಿನಗಳ ಹಿಂದೆ ಬಿಗು ತಪಾಸಣೆ ಇದ್ದ ಕಾರಣ ಬೆರಳೆಣಿಕೆಯ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ವೇಗದ ಪ್ರಮಾಣವೂ ಹೆಚ್ಚಿತ್ತು. ಈಗ ಲಾಕ್ಡೌನ್ ಸಡಿಲಿಕೆ ಮಾಡಿರುವುದರಿಂದ ವಾಹನಗಳ ಓಡಾಟ ಹೆಚ್ಚಾಗಿದೆ ಆದರೆ ವೇಗದ ಮಿತಿ ಮಾತ್ರ ಕಡಿಮೆಯಾಗಿಲ್ಲ. ಈ ಕಾರಣಕ್ಕಾಗಿ ದಿನಂಪ್ರತಿ ಸಣ್ಣಪುಟ್ಟ ಅಪಘಾತಗಳು ಉಡುಪಿ-ಮಣಿಪಾಲ ಮಾರ್ಗದಲ್ಲಿ ನಡೆಯುತ್ತಿವೆ.
ಬೇಕಿದೆ ವೈಜ್ಞಾನಿಕ ಯೂ ಟರ್ನ್ ಗಳು
ಹೆಚ್ಚುತ್ತಿರುವ ಅಪಘಾತಗಳು ಹಾಗೂ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಬೀಳಬೇಕೆಂದರೆ ಅನಧಿಕೃತ ಯೂ ಟರ್ನ್ಗಳನ್ನು ಮುಚ್ಚಬೇಕಿದೆ. 2 ಕಿಮೀಗೆ ಒಂದರಂತೆ ಅಗತ್ಯವಾಗಿ ಯೂ ಟರ್ನ್ ನಿರ್ಮಿಸುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಹೆದ್ದಾರಿ ಇಲಾಖೆಯವರು ಕಾನೂನು ಪ್ರಕಾರ ಯೂ ಟರ್ನ್ಗಳನ್ನು ನಿರ್ಮಿಸಿದರೂ ವಾಹನ ಸವಾರರು ವಿರುದ್ದ ದಿಕ್ಕಿನಲ್ಲಿ ಸಂಚರಿಸುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಯವರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಎಲ್ಲ ಸಮಸ್ಯೆಗಳೂ ನಿವಾರಣೆಯಾಗಲು ಸಾಧ್ಯವಿದೆ.
ಮಾರ್ಗಸೂಚಿಯಂತೆ ನಿರ್ಮಾಣ
ಹೆದ್ದಾರಿ ಇಲಾಖೆಯ ಮಾರ್ಗಸೂಚಿಯಂತೆ 2 ಕಿ. ಮೀ.ಗೆ ಒಂದರಂತೆ ಯೂ ಟರ್ನ್ ನಿರ್ಮಿಸುವ ನಿಯಮವಿದೆ. ಇವಿಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಇರುವ ರಸ್ತೆ ಸುರಕ್ಷಾ ಸಮಿತಿ ಸ್ಥಳ ಪರಿಶೀಲಿಸಿ ನಿರ್ಧರಿಸಿದಂತೆ ಯುಟರ್ನ್ ಗಳನ್ನು ನಿರ್ಮಿಸಲಾಗಿದೆ. ರಸ್ತೆ ಸುರಕ್ಷಾ ಸಮಿತಿಯ ನಿರ್ದೇಶನಗಳನ್ನು ಪಾಲಿಸಿ ನಿರ್ಮಿಸಲಾಗಿದೆ.
-ಮಂಜುನಾಥ ನಾಯಕ್, ಎಂಜಿನಿಯರ್
ಯೂ ಟರ್ನ್ ಗಳು
– ಕಲ್ಸಂಕ.
– ಕುಂಜಿಬೆಟ್ಟು .
– ಎಂಜಿಎಂ.
– ಇಂದ್ರಾಳಿ.
– ಇಂದ್ರಾಳಿ ಪೆಟ್ರೋಲ್ ಪಂಪ್.
– ಸಿಂಡಿಕೇಟ್ ಸರ್ಕಲ್.
– ಮಣಿಪಾಲ ಪೊಲೀಸ್ ಠಾಣೆ ಬಳಿ.
– ಮಣಿಪಾಲ ಜಂಕ್ಷನ್.
– ಬಬ್ಬುಸ್ವಾಮಿ ದೇವಸ್ಥಾನದ ಬಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.