ಸೊಳ್ಳೆಗಳಿಂದ ಹರಡುವ ರೋಗಗಳು

Team Udayavani, Apr 12, 2020, 10:56 AM IST

ಸೊಳ್ಳೆಗಳಿಂದ ಹರಡುವ ರೋಗಗಳು

ಜಾಗತಿಕವಾಗಿ ಒಂದು ವರ್ಷದಲ್ಲಿ 30ರಿಂದ 50 ಕೋಟಿಗಳಷ್ಟು ಹೊಸ ಮಲೇರಿಯಾ ಪ್ರಕರಣಗಳು ವರದಿಯಾಗುತ್ತಿದ್ದು, ಈ ಪೈಕಿ ಮರಣ ಪ್ರಮಾಣವು 10.1ರಿಂದ 20.7 ಲಕ್ಷಗಳಷ್ಟು ಇದೆ. ಇದೇ ರೀತಿ ಡೆಂಗ್ಯೂ ಕಾಯಿಲೆಯು 100ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜಗತ್ತಿನ ಒಟ್ಟು ಜನಸಂಖ್ಯೆಯ ಐದನೇ ಎರಡರಷ್ಟು ಮಂದಿ ಅಪಾಯದಲ್ಲಿದ್ದಾರೆ. ಪ್ರತಿವರ್ಷ 30 ಲಕ್ಷಕ್ಕಿಂತವೂ ಹೆಚ್ಚು ಡೆಂಗ್ಯೂ ಪ್ರಕರಣಗಳು 120 ದೇಶಗಳಿಂದ ವರದಿಯಾಗುತ್ತವೆ. ಆದರೆ ನಿಜವಾಗಿ ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿರುವು ಸಾಧ್ಯ. ಏಕೆಂದರೆ, ಅನೇಕ ಪ್ರಕರಣಗಳು ವರದಿಯಾಗುವುದಿಲ್ಲ ಮತ್ತು ಇನ್ನು ಕೆಲವು ಲಕ್ಷಣ ರಹಿತ ಪ್ರಕರಣಗಳಾಗಿರುತ್ತವೆ. ಈಡಿಸ್‌ ಈಜಿಪ್ಟಿ ಸೊಳ್ಳೆಗಳಿಂದ ಡೆಂಗ್ಯೂ ಪ್ರಸಾರವಾಗುತ್ತದೆ. 2010-2015ರ ಬಳಿಕ ಜಾಗತಿಕವಾಗಿ ಮಲೇರಿಯಾ ಕಾಯಿಲೆಯು ಕಾಣಿಸಿಕೊಳ್ಳುವ ಪ್ರಮಾಣವು ಶೇ.37ರಷ್ಟು ಇಳಿಕೆಯಾಗಿದ್ದು, ಮರಣ ಪ್ರಮಾಣವು ಶೇ.60ರಷ್ಟು ಇಳಿದಿದೆ.

ದಕ್ಷಿಣ ಏಶ್ಯದ ದೇಶಗಳಲ್ಲಿಯೇ ಅತಿ ಹೆಚ್ಚು ಮಲೇರಿಯಾ ಬಾಧೆಯು ಭಾರತದಲ್ಲಿ ಇದ್ದರೂ ಜಾಗತಿಕ ಮಟ್ಟದಲ್ಲಿ ಈ ರೋಗಬಾಧೆಗೆ ಭಾರತದ ಕೊಡುಗೆ ಶೇ.6 ಮಾತ್ರ. ಇದೇವೇಳೆ ದಕ್ಷಿಣ ಏಶ್ಯದಲ್ಲಿ ಒಟ್ಟಾರೆ ಪ್ರಕರಣಗಳಲ್ಲಿ ಶೇ.89ರಷ್ಟು ಭಾರತದಲ್ಲಿ ಕಂಡುಬರುತ್ತವೆ. ಹೀಗಿದ್ದರೂ ಭಾರತವು ಮಲೇರಿಯಾ ನಿಯಂತ್ರಣದಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದು, 2030ರೊಳಗೆ ಮಲೇರಿಯಾವನ್ನು ನಿರ್ಮೂಲನಗೊಳಿಸುವತ್ತ ದಾಪುಗಾಲು ಹಾಕುತ್ತಿದೆ. ಆದರೆ ಡೆಂಗ್ಯೂ ಕಾಯಿಲೆಯು ಈಗಲೂ ಭಾರತದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಸೋಂಕು ರೋಗವಾಗಿಯೇ ಉಳಿದಿದೆ. ಭಾರತವು ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮವನ್ನು 1953ರಲ್ಲಿ ಆರಂಭಿಸಿತು. ಇದರ ಯಶಸ್ಸಿನಿಂದ ಪ್ರೇರಿತವಾಗಿ 1958ರಲ್ಲಿ ರಾಷ್ಟ್ರೀಯ ಮಲೇರಿಯಾ ನಿರ್ಮೂಲನ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಈ ಕಾರ್ಯಕ್ರಮಗಳು ಜಾರಿಯಲ್ಲಿದ್ದರೂ ಕೂಡ ಮಲೇರಿಯಾ ಪ್ರಕರಣದಲ್ಲಿ ಏರಿಕೆ ಕಂಡುಬಂದ ಪರಿಣಾಮವಾಗಿ ಮಲೇರಿಯಾ ನಿರ್ಮೂಲನ ಕಾರ್ಯಕ್ರಮವನ್ನು ಮಲೇರಿಯಾ ನಿಯಂತ್ರಣ ಕಾರ್ಯಕ್ರಮವಾಗಿ ಪರಿವರ್ತಿಸಬೇಕಾಯಿತು ಮತ್ತು ದೇಶದಲ್ಲಿ ಮಲೇರಿಯಾ ಹೆಚ್ಚು ಕಂಡುಬರುವ ಪ್ರದೇಶಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಗಮನ ಕೇಂದ್ರೀಕರಿಸಬೇಕಾಯಿತು ಮತ್ತು ಈ ಕಾರ್ಯಕ್ರಮದಲ್ಲಿ ದೇಶದ ಹೆಚ್ಚು ಮಲೇರಿಯಾ ಪೀಡಿತ ಪ್ರದೇಶಗಳಿಗೆ ಪ್ರಾಮುಖ್ಯ ನೀಡಬೇಕಾಯಿತು. ಮಲೇರಿಯಾ ನಿಯಂತ್ರಣ ಕಾರ್ಯಕ್ರಮವು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಭಾಗವಾಗಿದೆ.

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮವು ಮಲೇರಿಯಾದ ಜತೆಗೆ ಇತರ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕೂ ಗಮನ ಹರಿಸುತ್ತದೆ. ಇದಾದ ಬಳಿಕ 2015ರಿಂದ ಈಚೆಗೆ ಮಲೇರಿಯಾ ಪ್ರಕರಣಗಳಲ್ಲಿ ಶೇ. 60ರಿಂದ ಶೇ.65ರಷ್ಟು ಗಮನಾರ್ಹ ಇಳಿಕೆ ಕಂಡುಬಂದಿದೆ.

ಸಾರ್ವಜನಿಕರು ಏನನ್ನು ತಿಳಿದುಕೊಳ್ಳಬೇಕು?
ರೋಗ, ವಾಹಕಗಳು ಮತ್ತು ಪರಿಸರ ತ್ರಿಕೋನ
ರೋಗ ವಾಹಕ ಆಶ್ರಿತ ರೋಗಗಳನ್ನು ರೋಗ, ವಾಹಕಗಳು ಮತ್ತು ಪರಿಸರಗಳ ತ್ರಿಕೋನೀಯ ಅಂತರ್‌ ಸಂಬಂಧವನ್ನು ಆಳವಾಗಿ ಅರಿತುಕೊಳ್ಳುವುದರಿಂದ ಹೆಚ್ಚು ಚೆನ್ನಾಗಿ ನಿಯಂತ್ರಿಸಬಹುದು ಮತ್ತು ಪ್ರತಿಬಂಧಿಸಬಹುದಾಗಿದೆ. ರೋಗವಾಹಕ ಆಶ್ರಿತ ರೋಗಗಳನ್ನು ನಿಯಂತ್ರಿಸಲು ಮತ್ತು ತಡೆಯಲು ಯಾವುದೇ ಕ್ರಮವನ್ನು ಅನುಷ್ಠಾನಗೊಳಿಸಲು ಸಮುದಾಯದ ಗ್ರಹಿಕೆ, ಸಾಂಸ್ಕೃತಿಕ ಅಭ್ಯಾಸಗಳು, ಭೌಗೋಳಿಕ ಸ್ಥಿತಿಗತಿ, ಪರಿಸರ ಮತ್ತು ಹವಾಮಾನ ಬದಲಾವಣೆಗಳನ್ನು ಅರಿತುಕೊಳ್ಳುವುದು ಬಹಳ ಆವಶ್ಯಕವಾಗಿರುತ್ತದೆ. ಈಗಾಗಲೇ ಅನುಷ್ಠಾನದಲ್ಲಿರುವ ನಿಗಾ ಮತ್ತು ಸರ್ವೇಕ್ಷಣಾ ಕ್ರಮಗಳ ಹೊರತಾಗಿಯೂ ಅಯೋಜಿತ ನಗರೀಕರಣ, ಕೊಳೆಗೇರಿಗಳು ಮತ್ತು ಸಮುದಾಯಗಳ ಕಳಪೆ ನೈರ್ಮಲ್ಯ ಕ್ರಮಗಳಿಂದಾಗಿ ರೋಗವಾಹಕ ಆಶ್ರಿತ ರೋಗಗಳ ಉಪಸ್ಥಿತಿಯು ಹೆಚ್ಚಿದೆ.

ಸೊಳ್ಳೆ ಆಶ್ರಿತ ಕಾಯಿಲೆಗಳ ಪುನರ್‌ ಸೋಂಕು
ಜೀರ್ಣಾಂಗವ್ಯೂಹದ ಕಾಯಿಲೆಗಳನ್ನು ಮತ್ತು ಡೆಂಗ್ಯೂವನ್ನು ಉಂಟು ಮಾಡುವ ರೋಗಕಾರಕಗಳನ್ನು ಪ್ರಸಾರ ಮಾಡುವ ವಾಹಕಗಳಾದ ಸೊಳ್ಳೆಗಳ ಮೇಲೆ ವಾತಾವರಣವು ಭಾರೀ ಪರಿಣಾಮವನ್ನು ಉಂಟು ಮಾಡುತ್ತದೆ. ಕರಾವಳಿಯ ಹವಾಮಾನವು ಸೊಳ್ಳೆಗಳ ಜೀವಿತಾವಧಿ ಮತ್ತು ಸಂತಾನ ವೃದ್ಧಿಗೆ ಪೂರಕವಾಗಿದ್ದು, ಇದರಿಂದ ಈ ಕಾಯಿಲೆಗಳ ಪುನರ್‌ ಸೋಂಕು ಮತ್ತು ಸೋಂಕು ಹೆಚ್ಚಳವಾಗುತ್ತದೆ. ಅಲ್ಲದೆ, ಸೊಳ್ಳೆಗಳಲ್ಲಿ ಆಶ್ರಿತ ರೋಗಗಳ ಸುಪ್ತಾವಸ್ಥೆ ದೀರ್ಘ‌ವಾಗಿರುವುದರಲ್ಲಿಯೂ ಹವಾಮಾನದ ಪಾತ್ರ ಸಾಕಷ್ಟಿದೆ. ಹವಾಮಾನವು ಪದೇಪದೇ ಬದಲಾಗುತ್ತಿದ್ದರೆ ಕಾಯಿಲೆಗಳು ಮತ್ತು ಅವುಗಳ ವಾಹಕಗಳ ಗುಣಸ್ವಭಾವಗಳನ್ನು ಅಧ್ಯಯನ ಮಾಡಿ ಖಚಿತವಾಗಿ ಕಂಡುಕೊಳ್ಳುವುದು ಅಸಾಧ್ಯವಾಗುತ್ತದೆ. ಹವಾಮಾನ ಬದಲಾವಣೆಗಳು ಸ್ಥಿರ ಸ್ವಭಾವ ಹೊಂದಿದ್ದಾಗ ಮಾತ್ರ ವಿಜ್ಞಾನಿಗಳು ಕಾಯಿಲೆಯ ವಾರ್ಷಿಕ ಚಕ್ರವನ್ನು ಕಂಡುಕೊಳ್ಳುವುದು ಸಾಧ್ಯ. ಆದರೆ ಸದ್ಯ ಹವಾಮಾನವು ಅನೂಹ್ಯವಾಗಿ ಬದಲಾವಣೆಗೆ ಒಳಗಾಗುತ್ತಿರುವುದು ಕಾಯಿಲೆಯ ವಾರ್ಷಿಕ ಚಕ್ರವನ್ನು ನಿಖರವಾಗಿ ಗೊತ್ತುಪಡಿಸುವುದಕ್ಕೆ ತಜ್ಞರಿಗೆ ಸವಾಲಾಗಿದೆ.

ಮಲೇರಿಯಾವನ್ನು ನಿಯಂತ್ರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತವು ಅಳವಡಿಸಿಕೊಂಡು ಪ್ರಮುಖ ಕಾರ್ಯಕ್ರಮಗಳು ಎಂದರೆ ಸೊಳ್ಳೆ ಪರದೆಗಳ ಬಳಕೆ, ಮನೆಯೊಳಗೆ ಕೀಟನಾಶಕ ಸಿಂಪಡನೆ ಮತ್ತು ಜೈವಿಕ ನಿಯಂತ್ರಣ ವಿಧಾನ. 2006ನೇ ಇಸವಿಯ ಬಳಿಕ ಇತರ ನಿಯಂತ್ರಣ ವಿಧಾನಗಳ ಜತೆಗೆ ಕೀಟನಾಶಕಗಳನ್ನು ಹಾಯಿಸಿದ ಸೊಳ್ಳೆ ಪರದೆ (ಐಟಿಬಿಎನ್‌ಗಳು)ಗಳನ್ನೂ ಪರಿಚಯಿಸಲಾಯಿತು. ನಗರ ಪ್ರದೇಶಗಳಲ್ಲಿ ಸರಕಾರವು ಲಾರ್ವಾ ನಾಶಕಗಳ ಸಿಂಪಡನೆಯನ್ನು ಇನ್ನೊಂದು ಕಾರ್ಯಕ್ರಮವಾಗಿ ಜಾರಿಗೆ ತಂದಿತು. ರಾಜ್ಯದ ಒಟ್ಟು ಮಲೇರಿಯಾ ಪ್ರಕರಣಗಳ ಸಂಖ್ಯೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಂಗಳೂರು ನಗರ ಮತ್ತು ಉಡುಪಿ ಪಟ್ಟಣಗಳು ಗಮನಾರ್ಹ ಕೊಡುಗೆ ನೀಡುತ್ತಿವೆ. ಮಲೇರಿಯಾ ನಿಯಂತ್ರಣ ಕಾರ್ಯಕ್ರಮದ ಒಟ್ಟು ಗಮನ ಇರುವುದು ದಕ್ಷಿಣ ಜಿಲ್ಲೆಯ ಮೇಲೆ.

ಮಲೇರಿಯಾ ನಿಯಂತ್ರಣ: ಸವಾಲುಗಳು
ವಿಶ್ವ ಆರೋಗ್ಯ ಸಂಸ್ಥೆಯು ಹೇಳುವಂತೆ ಭೂಮಧ್ಯ ರೇಖೆಯ ಆಸುಪಾಸಿನ ದೇಶಗಳನ್ನು ಕಾಡುತ್ತಿರುವ ಪ್ರಮುಖ ಸಾಂಕ್ರಾಮಿಕ ರೋಗಗಳಲ್ಲಿ ಮಲೇರಿಯಾ ಒಂದಾಗಿದೆ. ಮಲೇರಿಯಾ ಜ್ವರವು ಬೆಳವಣಿಗೆಯ ಕೊರತೆ, ಕ್ಷಿಪ್ರವಾಗಿ ಉಂಟಾಗುವ ರಕ್ತಹೀನತೆ, ಗರ್ಭಿಣಿ ಮಹಿಳೆಯರಲ್ಲಿ ಅವಧಿಪೂರ್ವ ಪ್ರಸವದಂತಹ ಸಮಸ್ಯೆಗಳಿಗೆ ಕಾರಣವಾಗಬಲ್ಲುದು. ಎಚ್‌ಐವಿ ಹೊಂದಿರುವ ರೋಗಿಯು ಮಲೇರಿಯಾಕ್ಕೆ ತುತ್ತಾದರೆ ಆತನಲ್ಲಿ ಎಚ್‌ಐವಿ ಬೇಗನೆ ಪ್ರಗತಿ ಹೊಂದಬಹುದು. ಮಲೇರಿಯಾ ಪುನರ್‌ ಸೋಂಕು ಇನ್ನೊಂದು ಸಂಕೀರ್ಣ ಸಮಸ್ಯೆಯಾಗಿದೆ. ಇದು ಮಲೇರಿಯಾ ಪರೋಪಜೀವಿಗಳ ವಿರುದ್ಧ ಉಪಯೋಗಿಸುವ ಔಷಧಗಳಿಗೆ ಅವುಗಳ ಪ್ರತಿರೋಧ ಶಕ್ತಿ, ತಂತ್ರಜ್ಞಾನ ಬಳಕೆಯಲ್ಲಿ ವೈಫ‌ಲ್ಯ, ಸೊಳ್ಳೆ ನಿಯಂತ್ರಣಕ್ಕಾಗಿ ಬಳಸುವ ಕೀಟನಾಶಕಗಳ ವಿರುದ್ಧ ಅವುಗಳ ಬೆಳೆಸಿಕೊಳ್ಳುವ ಪ್ರತಿರೋಧ, ಜಾಗತಿಕ ತಾಪಮಾನ ಏರಿಕೆ, ನಗರೀಕರಣ ಮತ್ತು ವಲಸೆಯಂತಹ ಅಂಶಗಳನ್ನು ಅವಲಂಬಿಸಿದೆ. ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಕಚೇರಿಯು ಮಲೇರಿಯಾ ಪ್ರಕರಣಗಳನ್ನು ಆದಷ್ಟು ಕ್ಷಿಪ್ರವಾಗಿ ಪತ್ತೆ ಹಚ್ಚುವುದು, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡುವುದು, ಸೊಳ್ಳೆ ಮತ್ತು ಇತರ ರೋಗ ವಾಹಕಗಳ ನಿಯಂತ್ರಣಕ್ಕೆ ಕಾರ್ಯಕ್ರಮಗಳನ್ನು ರೂಪಿಸುವುದು, ಒಳಾಂಗಣ ಕೀಟನಾಶಕಗಳ ಸಿಂಪಡಣೆ, ಕೀಟನಾಶಕ ಹಾಯಿಸಿದ ಸೊಳ್ಳೆಪರದೆಗಳ ಬಳಕೆಯನ್ನು ಪ್ರೋತ್ಸಾಹಿಸುವುದು, ಗಪ್ಪಿ ಮೀನುಗಳನ್ನು ಸಾಕುವುದು, ಆರೋಗ್ಯ ಶಿಕ್ಷಣ ಒದಗಿಸುವುದು ಇತ್ಯಾದಿಗಳಲ್ಲಿ ತೊಡಗಿಕೊಳ್ಳುತ್ತದೆ. ಮಲೇರಿಯಾ ಪರೋಪಜೀವಿಗಳ ವಿರುದ್ಧ ಉಪಯೋಗಿಸುವ ಔಷಧಗಳಿಗೆ ಅವುಗಳು ಪ್ರತಿರೋಧವನ್ನು ಬೆಳೆಸಿಕೊಳ್ಳುವುದು ಮತ್ತು ಸೊಳ್ಳೆಗಳು ತಮ್ಮ ವಿರುದ್ಧ ಬಳಸುವ ಕೀಟನಾಶಕಗಳಿಗೆ ಪ್ರತಿರೋಧವನ್ನು ಬೆಳೆಸಿಕೊಳ್ಳುವುದು ಮಲೇರಿಯಾ ನಿಯಂತ್ರಣಕ್ಕಿರುವ ಅತಿದೊಡ್ಡ ಸವಾಲಾಗಿದೆ.

ಡೆಂಗ್ಯೂ ನಿಯಂತ್ರಣ: ಸವಾಲುಗಳು
ಭಾರತದಲ್ಲಿ ಡೆಂಗ್ಯೂ ಕಾಯಿಲೆಯು 14 ರಾಜ್ಯಗಳಲ್ಲಿ ಅಧಿಸೂಚಿತ ಕಾಯಿಲೆಯಾಗಿದ್ದು, ಇನ್ನು 29 ರಾಜ್ಯಗಳಲ್ಲಿ ಸಾಂಕ್ರಾಮಿಕ ಕಾಯಿಲೆಯಾಗಿ ಘೋಷಿತವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2017-18ರ ವರದಿಯ ಪ್ರಕಾರ ಅತಿಹೆಚ್ಚು ಡೆಂಗ್ಯೂ ಪ್ರಕರಣಗಳು ಕೇರಳ ಮತ್ತು ತಮಿಳುನಾಡುಗಳಲ್ಲಿ ಕಂಡುಬಂದಿವೆ. ಎಲ್ಲ ಡೆಂಗ್ಯೂ ಪ್ರಕರಣಗಳು ವರದಿಯಾಗದೆ ಇರುವ ಕಾರಣ ಸರಕಾರಿ ದಾಖಲೆಗಳಲ್ಲಿ ಇರುವ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಿಂದ ಅದರ ನೈಜ ಸ್ವರೂಪ ತಿಳಿದುಬರುತ್ತಿಲ್ಲ. ಪ್ರಯೋಗಾಲಯ ಆಧಾರಿತ ಪರೋಕ್ಷ ಸಮೀಕ್ಷೆಯನ್ನು ಆಧರಿಸಿರುವುದರಿಂದ ಡೆಂಗ್ಯೂ ಪ್ರಕರಣಗಳ ರಾಷ್ಟ್ರೀಯ ಅಂಕಿಅಂಶಗಳೂ ಪರಿಪೂರ್ಣವಾಗಿಲ್ಲ. ಡೆಂಗ್ಯೂ ಪ್ರಸಾರ ಮಾಡುವ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕಚ್ಚುತ್ತವೆಯಾದ್ದರಿಂದ ಅವುಗಳಿಂದ ಸೊಳ್ಳೆ ಪರದೆಯನ್ನು ಉಪಯೋಗಿಸಿ ರಕ್ಷಣೆ ಪಡೆಯುವುದು ಕಷ್ಟಸಾಧ್ಯ. ಪೂರ್ತಿ ದೇಹವನ್ನು ಮುಚ್ಚುವ ಉಡುಪನ್ನು ಧರಿಸುವುದರಿಂದಲೂ ಸ್ವಲ್ಪ ಪ್ರಮಾಣದ ರಕ್ಷಣೆಯನ್ನು ಮಾತ್ರ ಪಡೆಯುವುದು ಸಾಧ್ಯ.

ಸುಸ್ಥಿರತೆ
ಸೊಳ್ಳೆಗಳ ಮೂಲಕ ಹರಡುವ ಕಾಯಿಲೆಗಳನ್ನು ನಿಯಂತ್ರಿಸುವ ಕಾರ್ಯಕ್ರಮಗಳು ಮತ್ತು ಕ್ರಮಗಳು ಯಶಸ್ವಿಯಾಗಬೇಕಾದರೆ ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸಮುದಾಯಗಳು ಈ ಕಾರ್ಯಕ್ರಮಗಳ ಉತ್ತರದಾಯಿತ್ವ ವಹಿಸಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮಗಳು ಮತ್ತು ಕಾರ್ಯವ್ಯೂಹಗಳನ್ನು ಪರಿಣಾಮಕಾರಿಯಾಗಿ ರೂಪುಗೊಳಿಸಿ ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಜನರ ಸಾಂಸ್ಕೃತಿಕ ಆಚಾರ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಸಹಾಯಕವಾಗಿದೆ. ಸೊಳ್ಳೆಗಳಲ್ಲಿ ಪೈರೆಥಾÅಯ್ಡ ಮತ್ತು ಡಿಡಿಟಿಗಳ ವಿರುದ್ಧ ಪ್ರತಿರೋಧವು ವ್ಯಾಪಕವಾಗಿ ಬೆಳೆಯುತ್ತಿದ್ದು, ಈ ಬಗೆಗಿನ ಅಧ್ಯಯನ ಮತ್ತು ಜ್ಞಾನವು ಮಲೇರಿಯಾ ನಿಯಂತ್ರಣ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸುವಲ್ಲಿ ಸಹಾಯಕವಾಗಬಹುದು ಎಂಬುದಾಗಿ ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಬಹುತೇಕ ಮಲೇರಿಯಾ ನಿಯಂತ್ರಣ ಕಾರ್ಯತಂತ್ರಗಳು ಕೀಟನಾಶಕಗಳನ್ನು ಉಪಯೋಗಿಸಿ ಸೊಳ್ಳೆ ಸಂತಾನಾಭಿವೃದ್ಧಿಯನ್ನು ತಡೆಯುವುದು ಮತ್ತು ನಾಶದತ್ತ ಗಮನ ಕೇಂದ್ರೀಕರಿಸಿವೆ. ಪ್ರತಿರೋಧ ಸ್ವಭಾವದ ವಂಶವಾಹಿಗಳ ಬೆಳವಣಿಗೆ ಮತ್ತು ಪ್ರಸಾರವು ಕಾಯಿಲೆಯ ಹರಡುವಿಕೆಯನ್ನು ತಡೆಯುವ ಕಾರ್ಯತಂತ್ರಗಳ ವೈಫ‌ಲ್ಯಕ್ಕೆ ಕಾರಣವಾಗಬಹುದು. ಈ ಪ್ರತಿರೋಧವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದರಿಂದ ಹೊಸ ಪರೀಕ್ಷೆಗಳನ್ನು ಅಭಿವೃದ್ಧಿಪಡಿಸುವುದಕ್ಕೆ ಮತ್ತು ಪ್ರತಿರೋಧ ಶಕ್ತಿಯುಳ್ಳ ವಂಶವಾಹಿಗಳು ಸೊಳ್ಳೆಗಳಲ್ಲಿ ಪ್ರಸಾರವಾಗುವುದನ್ನು ತಡೆಯುವುದಕ್ಕೆ ಸಹಾಯವಾಗುತ್ತದೆ.

ಶಿಫಾರಸುಗಳು
ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೊಳ್ಳೆಗಳಿಂದ ಪ್ರಸಾರವಾಗುವ ಸಾಂಕ್ರಾಮಿಕ ರೋಗಗಳನ್ನು ತಡೆಯಲು ನಾವು ನಮ್ಮ ದೈನಂದಿನ ಜೀವನ ವಿಧಾನದಲ್ಲಿ ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಮಂಗಳೂರು ತನ್ನ ಭೌಗೋಳಿಕ ಸ್ಥಿತಿಗತಿಗಳಿಂದಾಗಿ ಸೊಳ್ಳೆಗಳಿಂದ ಹರಡುವ ವಿವಿಧ ಕಾಯಿಲೆಗಳಿಗೆ ಅತ್ಯಂತ ಅಪಾಯಕಾರಿ ಪ್ರದೇಶವಾಗಿದೆ. ರಾಜ್ಯ ಆರೋಗ್ಯ ಇಲಾಖೆಯು ಗಮನಾರ್ಹ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸರಕಾರ ಆಯೋಜಿಸಿರುವ ನಿಯಂತ್ರಣ ಕಾರ್ಯತಂತ್ರದಡಿ ಸಮುದಾಯ ಶಿಕ್ಷಣವು ಅತ್ಯಂತ ಪ್ರಧಾನವಾದ ಪ್ರತಿಬಂಧಕ ಕ್ರಮವಾಗಿದೆ. ಕಾಯಿಲೆಗಳಿಂದ ಸ್ವಯಂ ರಕ್ಷಿಸಿಕೊಳ್ಳುವುದು ಮತ್ತು ಸೊಳ್ಳೆಗಳಿಂದ ಹರಡುವ ಕಾಯಿಲೆಗಳನ್ನು ತಡೆಯುವ ಕಾರ್ಯವಿಧಾನಗಳ ಬಗ್ಗೆ ಜನರಲ್ಲಿ ಪ್ರಾಥಮಿಕ ಜ್ಞಾನ ಇರುವುದು ಅತ್ಯಂತ ಅಗತ್ಯ.

ಯಾವುದೇ ವಿಧವಾದ ಜ್ವರ ಕಂಡುಬಂದರೂ ಸ್ವಯಂ ಚಿಕಿತ್ಸೆ ನಡೆಸುವುದು ಸಲ್ಲದು. ಸನಿಹದಲ್ಲಿರುವ ಆರೋಗ್ಯ ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ಲಸಿಕೆಗಳ ಬಗ್ಗೆ ತಿಳಿದುಕೊಳ್ಳಿ. ರೋಗಪತ್ತೆಯು ಬೇಗನೆ ಸಾಧ್ಯವಾದರೆ ಅನಾರೋಗ್ಯದಿಂದ ದೀರ್ಘ‌ಕಾಲ ಬಳಲುವುದು ತಪ್ಪುತ್ತದೆ. ಕೀಟನಾಶಕ ಸಿಂಪಡನೆಯು ಅತ್ಯಗತ್ಯವಾದ್ದರಿಂದ ಅದನ್ನು ನಡೆಸಲು ಆರೋಗ್ಯ ಇಲಾಖೆಗೆ ಅವಕಾಶ ಮಾಡಿಕೊಡಿ. ಮನೆ ಮತ್ತು ಸುತ್ತಮುತ್ತ ನೀರು ನಿಂತರೆ ಅಲ್ಲಿ ಸೊಳ್ಳೆಗಳ ಸಂತಾನಾಭಿವೃದ್ಧಿಯಾಗುತ್ತದೆ. ಹೀಗಾಗಿ ಮನೆಯೊಳಗೆ ಮತ್ತು ಹೊರಗೆ ಕಳಪೆ ನೈರ್ಮಲ್ಯ ಕ್ರಮಗಳು ಅನೇಕ ಸಾಂಕ್ರಾಮಿಕ ಕಾಯಿಲೆಗಳ ವೃದ್ಧಿ ಮತ್ತು ಪ್ರಸರಣಕ್ಕೆ ಹೆಬ್ಟಾಗಿಲು ತೆರೆಯುತ್ತವೆ. ಸೊಳ್ಳೆಗಳ ವಿರುದ್ಧ ವೈಯಕ್ತಿಕ ರಕ್ಷಣಾ ಕ್ರಮಗಳು ಮತ್ತು ಪ್ರತಿರೋಧ ಕ್ರಮಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಅರಿವನ್ನು ಹೆಚ್ಚಿಸುವ ವಿಚಾರದಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯವಾಗಿದೆ. ಆರೋಗ್ಯ ಯೋಜನಾಧಿಕಾರಿಗಳು ಮತ್ತು ಸಮುದಾಯದ ಜನರು ಜತೆಯಾಗಿ ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬಹುದಾಗಿದೆ. ಮಂಗಳೂರು ಅಥವಾ ಉಡುಪಿ ಸಹಿತ ಯಾವುದೇ ನಗರ ಮತ್ತು ಪ್ರದೇಶಗಳಲ್ಲಿ ಮಲೇರಿಯಾ ಅಥವಾ ಡೆಂಗ್ಯೂನಂತಹ ಸಾಂಕ್ರಾಮಿಕಗಳ ಹಾವಳಿ ಮತ್ತೆ ಉಂಟಾಗದಂತೆ ಇಂತಹ ಕ್ರಮಗಳು ಬಹಳ ಪರಿಣಾಮಕಾರಿಯೆನಿಸುತ್ತವೆ.

ಮಲೇರಿಯಾ ಮತ್ತು ಡೆಂಗ್ಯೂ: ವೈಯಕ್ತಿಕ ರಕ್ಷಣಾ ಕ್ರಮಗಳು
– ಮಲೇರಿಯಾ ಸೋಂಕುಕಾರಕ ಪರೋಪಜೀವಿಗಳನ್ನು ಪ್ರಸಾರ ಮಾಡುವ ಅನಾಫಿಲಿಸ್‌ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಕೀಟನಾಶಕ ಹಾಯಿಸಿದ ಸೊಳ್ಳೆ ಪರದೆ (ಐಟಿಎನ್‌ಗಳು)ಗಳನ್ನು ಉಪಯೋಗಿಸುವುದು. ಡೆಂಗ್ಯೂ ರೋಗವನ್ನು ಹರಡುವ ಈಡಿಸ್‌ ಈಜಿಪ್ಟಿ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಮನೆಯೊಳಗೆ ಮತ್ತು ಆಸುಪಾಸಿನಲ್ಲಿ ಪರಿಣಾಮಕಾರಿ ಕೀಟನಾಶಕಗಳನ್ನು ಸಿಂಪಡಿಸಬೇಕು.

– ಒಳಾಂಗಣದಲ್ಲಿ ಕೀಟನಾಶಕ (ಇನ್‌ಡೋರ್‌ ರೆಸಿಡ್ಯುಯಲ್‌ ಸ್ಪ್ರೆàಯಿಂಗ್‌ – ಐಆರ್‌ಎಸ್‌) ಗಳನ್ನು ಸಿಂಪಡಿಸುವುದರಿಂದ ಹೆಣ್ಣು ಸೊಳ್ಳೆಗಳ ಸಂತಾನಾಭಿವೃದ್ಧಿಗೆ ತಡೆ ಉಂಟಾಗುತ್ತದೆ. ಇದರಿಂದ ಡೆಂಗ್ಯೂ ವೈರಸ್‌ ಪ್ರಸಾರವು ಪ್ರತಿಬಂಧಿಸಲ್ಪಡುತ್ತದೆ.

– ಸೊಳ್ಳೆಗಳು ಆಹಾರ ಪಡೆದ ಬಳಿಕ ಗೋಡೆಗಳು ಮತ್ತು ಛಾವಣಿಗಳಲ್ಲಿ ವಿರಮಿಸುತ್ತವೆ. ಹೀಗಾಗಿ ಕೀಟನಾಶಕಗಳ ಸಿಂಪಡನೆಯ ಮೂಲಕ ಅವುಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದಾಗಿದೆ. ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸುವುದಕ್ಕಾಗಿ ಮನೆಯೊಳಗೆ ಕೀಟನಾಶಕಗಳನ್ನು ಸಿಂಪಡಿಸುವುದರ ಜತೆಗೆ ಮನೆಯ ಆಸುಪಾಸಿನಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಅಲ್ಲೂ ಕೀಟನಾಶಕ ಸಿಂಪಡಿಸಬೇಕು. ಇದರಿಂದಲೂ ಸೊಳ್ಳೆಗಳ ಸಂತಾನಾಭಿವೃದ್ಧಿ ಮತ್ತು ಸಂಖ್ಯೆಯನ್ನು ನಿಯಂತ್ರಿಸಬಹುದು.

– ಬೆಳಗ್ಗಿನಿಂದ ಸಂಜೆಯ ವರೆಗೂ ಸೊಳ್ಳೆಗಳ ಕಡಿತಕ್ಕೆ ಗುರಿಯಾಗುವುದನ್ನು ತಪ್ಪಿಸಿ. ವಿಶೇಷವಾಗಿ ಮುಂಜಾನೆ ಮತ್ತು ಮುಸ್ಸಂಜೆಯ ಹೊತ್ತು ಸೊಳ್ಳೆಗಳು ಸಾಕಷ್ಟು ಕ್ರಿಯಾಶೀಲವಾಗಿರುತ್ತವೆ. ದೇಹ ಮುಚ್ಚುವ ಉದ್ದನೆಯ ತೋಳಿನ ಉಡುಪುಗಳು ಮತ್ತು ಪ್ಯಾಂಟುಗಳನ್ನು ಧರಿಸಿ.

– ಕಿಟಕಿಗಳ ಮೂಲಕ ಸೊಳ್ಳೆಗಳು ಬಾರದಂತೆ ಪರದೆಗಳನ್ನು ಅಳವಡಿಸುವುದು ಕಡಿಮೆ ಖರ್ಚಿನ ಮತ್ತು ಸರಳವಾದ ಸೊಳ್ಳೆ ನಿಯಂತ್ರಣ ವಿಧಾನವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ವಿಕರ್ಷಕಗಳನ್ನು ಮನೆಯೊಳಗೆ ಉಪಯೋಗಿಸ ಬಹುದಾಗಿದೆ.

– ಮನೆಯೊಳಗೂ ಹೊರಗೂ ನೀರು ನಿಲ್ಲುವ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರು ಸಂಗ್ರಾಹಕ ಟ್ಯಾಂಕಿ ಇತ್ಯಾದಿಗಳಲ್ಲಿ ದೀರ್ಘ‌ಕಾಲ ನೀರು ಸಂಗ್ರಹಿಸಿ ಇಡಬಾರದು. ಇದು ಬಹಳ ಉಪಯುಕ್ತವಾದ ಸರಳ ನಿಯಂತ್ರಣ ವಿಧಾನವಾಗಿದೆ. ಕೊಳಚೆ ಮತ್ತು ಹಳೆಯ ಟಯರುಗಳು, ಕುಡಿದು ಎಸೆದ ಸೀಯಾಳದ ಬುರುಡೆ ಇತ್ಯಾದಿ ನೀರು ನಿಂತು ಸೊಳ್ಳೆ ಸಂತಾನಾಭಿವೃದ್ಧಿ ಆಗುವಂತಹ ಸ್ಥಳಗಳನ್ನು ನಾಶ ಮಾಡುವುದು, ಕೊಳಚೆ ನೀರು ಹರಿಯುವ ಕೊಳವೆಗಳನ್ನು ಮತ್ತು ಚರಂಡಿಗಳನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸಿ ಪ್ರೌಢ ಸೊಳ್ಳೆ ಉತ್ಪಾದನೆ ಆಗದಂತೆ ತಡೆಯಲು ಸಹಕಾರಿಯಾಗುತ್ತದೆ.

– ಡೆಂಗ್ಯೂ ಹರಡುವ ಈಡಿಸ್‌ ಈಜಿಪ್ಟಿ ಸೊಳ್ಳೆಯು ಶುದ್ಧ ನೀರಿನಲ್ಲಿಯೇ ಸಂತಾನೋತ್ಪತ್ತಿ ನಡೆಸುತ್ತದೆ. ಹೀಗಾಗಿ ಡ್ರಮ್‌, ಬಕೆಟ್‌, ಹೂಕುಂಡ ಇತ್ಯಾದಿಗಳನ್ನು ಶುಚಿಯಾಗಿ ಇರಿಸಿಕೊಳ್ಳಬೇಕು ಮತ್ತು ನೀರಿನ ಸಂಗ್ರಾಹಕಗಳು ತೆರೆದಿರದಂತೆ ನೋಡಿಕೊಳ್ಳಬೇಕು.

– ಡಾ| ದೀಪಾ ಎನ್‌. ದೇವಾಡಿಗ
ಅಸೊಸಿಯೇಟ್‌ ಪ್ರೊಫೆಸರ್‌, ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ, ಎಂಸಿಎಚ್‌ಪಿ, ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.