ಮತ್ತೆ ಕಿಂಗ್‌ನಂತೆ ಆಡಿದ “ಸೂಪರ್ ಚೆನ್ನೈ’
ಧೋನಿ ಮರಳಿ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಚೆನ್ನೈ ಭರ್ಜರಿ ಆಟ, ಹೈದರಾಬಾದ್‌ಗೆ ಸೋಲು
Team Udayavani, May 1, 2022, 11:16 PM IST
ಪುಣೆ: ಮಹೇಂದ್ರ ಸಿಂಗ್ ಧೋನಿ ಮತ್ತೆ ನಾಯಕತ್ವ ವಹಿಸಿಕೊಂಡ ಬೆನ್ನಲ್ಲೇ ಅದ್ಭುತವಾಗಿ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರು ರೋಚಕ ಗೆಲುವು ಸಾಧಿಸಿದೆ. ಬ್ಯಾಟಿಂಗ್‌ನಲ್ಲಿ ಬೃಹತ್ ಮೊತ್ತ ಗಳಿಸಿದ ಚೆನ್ನೈ, ಬೌಲಿಂಗ್‌ನಲ್ಲೂ ನಿಯಂತ್ರಣ ಸಾಧಿಸಿತು. ಆದರೆ ಆ ತಂಡದ ಆರಂಭಿಕ ಗಾಯಕ್ವಾಡ್ 99 ರನ್ನಿಗೆ ಔಟಾದುದು ಮಾತ್ರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 2 ವಿಕೆಟಿಗೆ 202 ರನ್ ಪೇರಿಸಿತು. ಇದನ್ನು ಬೆನ್ನತ್ತಿದ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿತು. ಹೈದರಾಬಾದ್ ಪರ ನಾಯಕ ಕೇನ್ ವಿಲಿಯಮ್ಸನ್ (47) ಮತ್ತು ನಿಕೋಲಸ್ ಪೂರನ್ (ಅಜೇಯ 64) ಅದ್ಭುತವಾಗಿ ಆಡಿದರು. ಉಳಿದವರು ಈ ಮಟ್ಟಕ್ಕೆ ಏರದ್ದರಿಂದ ಅದು ಸೋಲಬೇಕಾಯಿತು. ಚೆನ್ನೈ ಪರ ಮುಕೇಶ್ ಚೌಧರಿ 46 ರನ್ ನೀಡಿ 4 ವಿಕೆಟ್ ಕಿತ್ತರು.
ಸಿಡಿದ ಗಾಯಕ್ವಾಡ್, ಕಾನ್ವೆ: ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ಹೈದರಾಬಾದ್ ತನ್ನ ಯೋಜನೆಯಲ್ಲಿ ಘೋರ ವೈಫಲ್ಯ ಅನುಭವಿಸಿತು. ಇದರ ಸಂಪೂರ್ಣ ಲಾಭವೆತ್ತಿದ ಚೆನ್ನೈ ಬ್ಯಾಟಿಗರು ಮೆರೆದಾಡಿದರು.
ಆರಂಭಿಕರಾದ ಋತುರಾಜ್ ಗಾಯಕ್ವಾಡ್-ಡೆವೋನ್ ಕಾನ್ವೆ ಆರಂಭದಿಂದಲೇ ಹೈದರಾಬಾದ್ ಬೌಲರ್‌ಗಳಿಗೆ ಬಿಸಿ ಮುಟ್ಟಿಸುತ್ತ ಹೋದರು. ಹತ್ತರ ಸರಾಸರಿಯಲ್ಲಿ ರನ್ ಪೇರಿಸಿ ಓಟ ಬೆಳೆಸಿದರು. 17.5 ಓವರ್ ತನಕ ಆರಂಭಿಕ ಜತೆಯಾಟ ವಿಸ್ತರಿಸಿ 182 ರನ್ ರಾಶಿ ಹಾಕಿದರು. ಇದು ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ದಾಖಲಾದ ಚೆನ್ನೈ ತಂಡದ ಅತೀ ದೊಡ್ಡ ಜತೆಯಾಟ.
ಶತಕ ವಂಚಿತ ಗಾಯಕ್ವಾಡ್: ಈ ಋತುವಿನ ಆರಂಭದಿಂದಲೂ ತೀವ್ರ ರನ್ ಬರಗಾಲದಲ್ಲಿದ್ದ ಋತುರಾಜ್ ಗಾಯಕ್ವಾಡ್ ಇಲ್ಲಿ ಪ್ರಚಂಡ ಬ್ಯಾಟಿಂಗ್‌ಗೆ ಮುಂದಾದರು. ಶತಕದ ನಿರೀಕ್ಷೆಯನ್ನು ತೆರೆದಿರಿಸಿದರು. ಆದರೆ ಗಾಯಕ್ವಾಡ್‌ಗೆ ಅದೃಷ್ಟ ಕೈಕೊಟ್ಟಿತು. ಶತಕಕ್ಕಾಗಿ ಬಾರಿಸಿದ ಚೆಂಡು ನೇರವಾಗಿ ಭುವನೇಶ್ವರ್ ಕೈಸೇರಿತು! 57 ಎಸೆತ ನಿಭಾಯಿಸಿದ ಋತುರಾಜ್ 6 ಭರ್ಜರಿ ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿ ರಂಜಿಸಿದರು. ನ್ಯೂಜಿಲೆಂಡಿನ ಡೆವೋನ್ ಕಾನ್ವೆ 55 ಎಸೆತಗಳಿಂದ ಅಜೇಯ 85 ರನ್ ಕೊಡುಗೆ ಸಲ್ಲಿಸಿದರು. ಸಿಡಿಸಿದ್ದು 8 ಬೌಂಡರಿ ಹಾಗೂ 4 ಸಿಕ್ಸರ್.
ಬ್ರಾವೊ, ದುಬೆ ಹೊರಕ್ಕೆ: ಚೆನ್ನೈ ಎರಡು ಪರಿವರ್ತನೆ ಮಾಡಿಕೊಂಡಿತು. ಡ್ವೇನ್ ಬ್ರಾವೊ ಮತ್ತು ಶಿವಂ ದುಬೆ ಬದಲು ಕಾನ್ವೆ ಮತ್ತು ಸಿಮ್ರನ್‌ಜಿàತ್ ಸಿಂಗ್ ಅವರನ್ನು ಆಡಿಸಿತು. ಹೈದರಾಬಾದ್ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ.
ಸಂಕ್ಷಿಪ್ತ ಸ್ಕೋರ್: ಚೆನ್ನೈ 20 ಓವರ್, 202/2 (ಋತುರಾಜ್ ಗಾಯಕ್ವಾಡ್ 99, ಡೆವೋನ್ ಕಾನ್ವೆ 85, ನಟರಾಜನ್ 42ಕ್ಕೆ 2). ಹೈದರಾಬಾದ್ 20 ಓವರ್, 189/6 (ನಿಕೋಲಸ್ ಪೂರನ್ 64, ವಿಲಿಯಮ್ಸನ್ 47, ಮುಕೇಶ್ ಚೌಧರಿ 46ಕ್ಕೆ 4).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.