Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
ದೊಡ್ಮನೆ ರಸ್ತೆ-ಕಲ್ಸಂಕ ತೋಡಿನ ದುರವಸ್ಥೆಯಿಂದಾಗಿ ಬಾವಿಗಳ ನೀರೂ ಕಲುಷಿತ
Team Udayavani, Jan 7, 2025, 1:15 PM IST
ಮೂಡುಬಿದಿರೆ: ಬೆಳೆಯುತ್ತಿರುವ ಮೂಡುಬಿದಿರೆ ನಗರದಲ್ಲಿ ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. ಅದರಲ್ಲೂ ಜ್ಯೋತಿ ನಗರದ ಕಡೆಯಿಂದ ಹಲವು ವಸತಿ ಸಂಕೀರ್ಣ, ಉದ್ಯಮಗಳಿಂದ ಹರಿದು ಬರುವ ಮಲಿನ ನೀರು ದೊಡ್ಮನೆ ರಸ್ತೆ ಪರಿಸರದ ಬಹುತೇಕ ಜಲಮೂಲ, ಬಾವಿ ನೀರನ್ನು ಕಲುಷಿತಗೊಳಿಸಿದೆ.
ದೊಡ್ಮನೆ ರಸ್ತೆ ಪಕ್ಕದ ತೋಡಿನಲ್ಲಿ ಸಂಪೂರ್ಣ ಹೂಳು ತುಂಬಿದೆ. ಈ ನಡುವೆ ಖಾಸಗಿ ಜಮೀನಿನವರು ಕಾಂಪೌಂಡ್ ಗೋಡೆಯನ್ನು ಓರೆಯಾಗಿ ವಿಸ್ತರಿಸಿ ಕಟ್ಟಿದ್ದರಿಂದ ತೋಡಿನಲ್ಲಿ ಕೊಳಚೆ ನೀರು ಹರಿಯಲು ಅಡಚಣೆಯಾಗಿದೆ. ಇದನ್ನು ಗಮನಿಸಿದವರೊಬ್ಬರು ಯಾರದೋ ಒತ್ತಡಕ್ಕೆ ಮಣಿದು ಮೂರು ಬೆಳೆ ಬೆಳೆಯುವ ಖಾಸಗಿ ಗದ್ದೆಯ ಕಟ್ಟಹುಣಿಯನ್ನು ಅನಧಿಕೃತವಾಗಿ ಕಡಿದು ಹಾಕಿದ ಪರಿಣಾಮವಾಗಿ ಕೊಳಚೆ ನೀರು ಗದ್ದೆಯತ್ತ ಹರಿಯತೊಡಗಿತು.
ಇದರಿಂದಾಗಿ, ಮೊದಲಿಗೆ ಕಟ್ಟಹುಣಿಯ ಪಕ್ಕ, ಗದ್ದೆಯ ಪ್ರವೇಶದಲ್ಲೇ ಇದ್ದ ಕೆರೆ ಹೂಳು ತುಂಬಿ ನಾಶವಾಯಿತು. ಈ ಪ್ರಕ್ರಿಯೆ ನಡೆಯತೊಡಗಿ ಕೆಲವು ವರ್ಷಗಳಾಗುತ್ತಿದ್ದಂತೆ ಪಕ್ಕದ ತೋಟದಲ್ಲಿರುವ ಬೃಹತ್ ಬಾವಿ ನೀರು ಕಲುಷಿತವಾಗತೊಡಗಿತು. ಈಗಂತೂ ಅದು ಕೆರೆಯ ನೀರು ಹಳದಿ-ಕೆಂಪು ಬಣ್ಣಕ್ಕೆ ತಿರುಗಿ ನೋಡಿದವರಿಗೆ ದಿಗಿಲು ಹುಟ್ಟಿಸುತ್ತಿದೆ.
ಕಲ್ಸಂಕದವರೆಗೆ ತೋಡು ದುರಸ್ತಿ
ಸಾರ್ವಜನಿಕರ ಒತ್ತಡಕ್ಕೆ ಮಣಿದ ಪುರಸಭೆ ಕೊನೆಗೂ ದೊಡ್ಮನೆ ರಸ್ತೆ ವಲಯದಿಂದ ಕಲ್ಸಂಕದವರೆಗೆ ತೋಡು ತೋಡಲು ಮುಂದಾಗಿದೆ. ಮೂರು ಗದ್ದೆಯವರೂ ಸಹಕಾರ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ಈಗಾಗಲೇ ಕೊಳಚೆಯ ಜಲಾಶಯದಂತಾಗಿರುವ ಮೂರು ಹೊಲಗಳ ಗತಿ ಏನು ಎಂಬುದು ಪ್ರಶ್ನಾರ್ಥಕವಾಗಿ ಬಿಟ್ಟಿದೆ ಅಥವಾ ಮುಂದಿನ ದಿನಗಳಳಲ್ಲಿ ಕಲ್ಸಂಕದ ಪಕ್ಕದ ಗದ್ದೆಗಳಲ್ಲಿ ಮಣ್ಣು ತುಂಬಿ ಕಟ್ಟಡಗಳು ಎದ್ದ ಹಾಗೆ ದೊಡ್ಮನೆ ಪಕ್ಕದ ಗದ್ದೆಗಳಲ್ಲೂ ಕ್ಟಟಡಗಳು ಮೇಲೇಳಲು ಅವಕಾಶಕಲ್ಪಿಸಿಕೊಡುವಂತಾದೀತು ಎನ್ನುವುದು ಜನರ ಮಾತು.
ಸೊಳ್ಳೆ ಉತ್ಪಾದನ ತಾಣವಾದ ಗದ್ದೆ
ಕೊಳಚೆ ನೀರಿನ ಸರಾಗ ಹರಿಯುವಿಕೆಯಾಗದೆ ಸೊಳ್ಳೆ ಉತ್ಪಾದನೆಯ, ರೋಗರುಜಿನಗಳ ಮೂಲತಾಣವಾಗಿದೆ. ಅದರಲ್ಲೂ ಗದ್ದೆಗಳ ತುಂಬ ಕೊಳಚೆ ನೀರು ಮತು ತ್ಯಾಜ್ಯ ತುಂಬಿದೆ. ಈ ಬಗ್ಗೆ ಸ್ಥಳೀಯರು ಪುರಸಭೆಯ ಗಮನ ಸೆಳೆದು ಸೆಳೆದು ಸುಸ್ತಾಗಿದ್ದಾರೆ. ಈಗ ಪುರಸಭೆ ತೋಡು ವಿಸ್ತರಣೆಗೆ ಮುಂದಾಗಿದೆ. ಆದರೆ, ಮಳೆಗಾಲದಲ್ಲಿ ನೀರು ಹರಿಯುವುದಕ್ಕೇ ಸೀಮಿತವಾಗಬೇಕಾದ ತೋಡಿನಲ್ಲಿ ಮನೆಗಳ, ಬಚ್ಚಲುಗಳ ತ್ಯಾಜ್ಯ ನೀರಿನ ಹರಿಯುವಿಕೆಗೆ ಅವಕಾಶ ಮಾಡಿಕೊಡುವುದು ಯಾಕೆ? ಸಮಗ್ರ ಒಳಚರಂಡಿ ಯೋಜನೆ ಇನ್ನೂ ಯಾಕೆ ಜಾರಿಯಾಗಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.