Muddebihal: ಕೃಷ್ಣಾ ನದಿ ಪಾಲಾದ ಯುವತಿ: ಶವ ಪತ್ತೆ
Team Udayavani, Sep 16, 2024, 5:14 PM IST
ಮುದ್ದೇಬಿಹಾಳ: ಕೃಷ್ಣಾ ನದಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ ಬಾಳವ್ವ ಕಮರಿ (19) ಘಟನೆಯ ಸಂಬಂಧಿಸಿದಂತೆ ಇಂಗಳಗಿ ಟಕ್ಕಳಕಿ ಗ್ರಾಮ ವ್ಯಾಪ್ತಿಯ ನದಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಘಟನಾ ಸ್ಥಳದಿಂದ ಸುಮಾರು 15 ಕಿ.ಮೀ ಅಂತರದಲ್ಲಿರುವ ಇಂಗಳಗಿ ಟಕ್ಕಳಕಿ ಗ್ರಾಮ ವ್ಯಾಪ್ತಿಯ ನದಿಯಲ್ಲಿ ಮುಳ್ಳುಕಂಟಿಗೆ ಸಿಕ್ಕಿಹಾಕಿಕೊಂಡಿದ್ದ ಶವವನ್ನು ಮುದ್ದೇಬಿಹಾಳ ಅಗ್ನಿಶಾಮಕ ದಳದ ಸಿಬಂದಿ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಚಟ್ಟಿಹಾಳದಿಂದ ಆಗಮಿಸಿದ್ದ ಮೃತಳ ಬಂಧುಗಳೂ ಸೇರಿ ಹಲವರು ನದಿ ದಂಡೆಯಲ್ಲೇ ಬೀಡು ಬಿಟ್ಟು ಶವಕ್ಕಾಗಿ ನಿರಂತರ ಪ್ರಯತ್ನ ನಡೆಸಿದ್ದರು.
ಶವವನ್ನು ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಹಸ್ತಾಂತರಿಸುವುದಾಗಿ ಮುದ್ದೇಬಿಹಾಳ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.