Mudhol;ಮುಂದುವರಿದ ಕಾರ್ಯಾಚರಣೆ; ಕಳ್ಳಭಟ್ಟಿ ಕೇಂದ್ರದ ಮೇಲೆ ದಾಳಿ ಮಾಡಿದ ಅರಣ್ಯ ಇಲಾಖೆ
Team Udayavani, Aug 19, 2024, 5:06 PM IST
ಮುಧೋಳ: ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿನ ಕಳ್ಳಭಟ್ಟಿ ಕೇಂದ್ರಗಳ ಮೇಲಿನ ದಾಳಿಯನ್ನು ಮುಂದುವರಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಕಳ್ಳಭಟ್ಟಿ ತಯಾರಿಕೆಯ ಪರಿಕರಗಳನ್ನು ನಾಶಪಡಿಸಿದ್ದಾರೆ.
ಆ.16ರಂದು ಉದಯವಾಣಿಯಲ್ಲಿ ಪ್ರಕಟಗೊಂಡಿದ್ದ ಚೀಂಕಾರ ರಕ್ಷಿತಾರಣ್ಯಕ್ಕೆ ಕಳ್ಳಕಾಕರ ಕಾಕದೃಷ್ಟಿಯೆಂಬ ತಲೆಬರಹದ ವಿಸ್ತೃತ ವರದಿಯಿಂದ ಎಚ್ಚೆತ್ತು ದಾಳಿ ನಡೆಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ ವರದಿ ಪ್ರಕಟಗೊಂಡ ದಿನದಂದೇ ಮೂರುಕಡೆಗಳಲ್ಲಿ ದಾಳಿ ನಡೆಸಿ ಅಪಾರ ಪ್ರಮಣದ ಕಳ್ಳಭಟ್ಟಿ ಪರಿಕರಗಳನ್ನು ನಾಶಪಡಿಸಿತ್ತು. ದಾಳಿಯ ಮುಂದುವರಿದ ಭಾಗವಾಗಿ ಸೋಮವಾರ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಕಳ್ಳಭಟ್ಟಿ ಕೇಂದ್ರಗಳನ್ನು ನಾಶಪಡಿಸಿದ್ದಾರೆ.
ಡಿಎಫ್ಓ ಸಿ.ಜೆ.ಮಿರ್ಜಿ, ಎಸಿಎಫ್ ಹಾಗೂ ವಲಯ ಅರಣ್ಯಾಧಿಕಾರಿ ಎಚ್.ಬಿ. ಡೋಣಿ ಮಾರ್ಗದರ್ಶನದಲ್ಲಿ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ರಮೇಶ ಮೆಟಗುಡ್ಡ, ಗಸ್ತು ಅರಣ್ಯಪಾಲಕರಾದ ಶಿವರಾಜ ಸಜ್ಜನ, ಚಂದ್ರಶೇಖರ ಉಪ್ಪಾರ, ಆನಂದ ಸಾಗರ, ಗುರಪ್ಪ ಬಾಗೇವಾಡಿ ಹಾಗೂ ವಾಚರ್ ಗಳಾದ ಹನಮಂತ ತಳವಾರ, ಈರಪ್ಪ ಕೋಲೂರ, ತಿಪ್ಪಣ್ಣ ವಾಬನ್ನವರ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.