Mumbai: ಮುಂಬೈ ಸ್ಫೋಟದ ಆರೋಪಿ ರಾಣಾ ಗಡೀಪಾರು ಖಾತ್ರಿ
Team Udayavani, Aug 19, 2023, 6:25 AM IST
ವಾಷಿಂಗ್ಟನ್: 2008ರ ಮುಂಬೈ ಸ್ಫೋಟದ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಿಯನ್ ಉದ್ಯಮಿ ತಹಾವ್ವುರ್ ರಾಣಾ ಗಡೀಪಾರು ಖಾತ್ರಿಯಾಗಿದೆ. ರಾಣಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಅಮೆರಿಕದ ಕ್ಯಾಲಿಫೋರ್ನಿಯ ನ್ಯಾಯಾಲಯ ತಳ್ಳಿಹಾಕಿದೆ.
ಈ ಮೂಲಕ ಭಾರತಕ್ಕೆ ರಾಣಾ ಗಡೀಪಾರಿಗೆ ಅಮೆರಿಕ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಆದೇಶ ಹೊರಡಿಸಲು ದಾರಿ ಸುಗುಮವಾಗಿದೆ. 26/11 ಮುಂಬೈ ದಾಳಿಯ ಸಂಚುಕೋರರ ಪೈಕಿ ಒಬ್ಬನಾಗಿರುವ ರಾಣಾ(62) ನನ್ನು ಕಟಕಟೆ ಎದುರು ನಿಲ್ಲಿಸುವ ಭಾರತದ ಪ್ರಯತ್ನಕ್ಕೆ ಈ ಮೂಲಕ ದೊಡ್ಡ ಗೆಲುವು ಲಭಿಸಿದೆ. ಈ ವರ್ಷದ ಮೇನಲ್ಲಿ ರಾಣಾ ಗಡಿಪಾರಿಗೆ ಅಮೆರಿಕ ನ್ಯಾಯಲಯ ಅನುಮೋದನೆ ನೀಡಿತ್ತು. ಇದನ್ನು ಪ್ರಶ್ನಿಸಿ ರಾಣಾ ಜೂನ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ಆ.10ರಂದು ನ್ಯಾಯಾಲಯವು ವಜಾಗೊಳಿಸಿದೆ. ಇದೀಗ ಈ ಆದೇಶವನ್ನು ಪ್ರಶ್ನಿಸಿ, ಆತ ಮೇಲ್ಮನವಿ ಸಲ್ಲಿಸಿದ್ದಾನೆ. ಪಸ್ತುತ ರಾಣಾ ಲಾಸ್ ಏಂಜಲೀಸ್‌ನ ಮೆಟ್ರೋಪಾಲಿಟನ್ ಕಾರಾಗೃಹದಲ್ಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.