![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 29, 2022, 8:25 AM IST
ಮುಂಬೈ ಇಂಡಿಯನ್ಸ್ 2013ರಿಂದ ಮೊದಲ್ಗೊಂಡು ಐಪಿಎಲ್ ಋತುವಿನ ತನ್ನ ಆರಂಭಿಕ ಪಂದ್ಯಗಳಲ್ಲಿ ಸತತ 10 ಸೋಲನುಭವಿಸಿತು. 2012ರಲ್ಲಿ ಕೊನೆಯ ಗೆಲುವು ಸಾಧಿಸಿತ್ತು. ಚೆನ್ನೈಯಲ್ಲಿ ನಡೆದ ಅಂದಿನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬಂದಿತ್ತು. ಚೆನ್ನೈ 19.5 ಓವರ್‌ಗಳಲ್ಲಿ 112ಕ್ಕೆ ಕುಸಿದರೆ, ಮುಂಬೈ 16.5 ಓವರ್‌ಗಳಲ್ಲಿ 2 ವಿಕೆಟಿಗೆ 115 ರನ್ ಬಾರಿಸಿ ಗೆದ್ದು ಬಂದಿತ್ತು. ಮುಂಬೈ ತಂಡದ ಅಂದಿನ ನಾಯಕ ಹರ್ಭಜನ್ ಸಿಂಗ್. ಸ್ಯಾರಸ್ಯವೆಂದರೆ, ಕೂಟದ ಮೊದಲ ಪಂದ್ಯವನ್ನು ಸೋಲಲಾರಂಭಿಸಿದ ಬಳಿಕವೇ ಮುಂಬೈ ಐಪಿಎಲ್ ಪ್ರಶಸ್ತಿ ಗೆಲ್ಲತೊಡಗಿದ್ದು! ಅದು 2013ರಲ್ಲಿ ಮೊದಲ ಸಲ ಚಾಂಪಿಯನ್ ಆಗಿತ್ತು.
ಮುಂಬೈ-ಡೆಲ್ಲಿ
– ಇಶಾನ್ ಕಿಶನ್ ಸತತ 3ನೇ ಅರ್ಧ ಶತಕ ಬಾರಿಸಿದರು (ಅಜೇಯ 50, 84 ಮತ್ತು ಅಜೇಯ 81).
– ಇಶಾನ್ ಕಿಶನ್ ಡೆಲ್ಲಿ ವಿರುದ್ಧ ಅತ್ಯಧಿಕ 386 ರನ್ ಬಾರಿಸಿದರು. ಹೈದರಾಬಾದ್ ವಿರುದ್ಧ 247 ರನ್ ಗಳಿಸಿದ ದಾಖಲೆಯನ್ನು ಹಿಂದಿಕ್ಕಿದರು.
– 2020ರಿಂದ ಮೊದಲ್ಗೊಂಡು ಇಶಾನ್ ಕಿಶನ್ ಮುಂಬೈ ಪರ ಸರ್ವಾಧಿಕ 838 ರನ್ ಬಾರಿಸಿದರು.
– ರೋಹಿತ್ ಶರ್ಮ ಪಂದ್ಯದ ಮೊದಲ ಓವರ್‌ನಲ್ಲಿ 10 ಸಿಕ್ಸರ್ ಬಾರಿಸಿದರು. ಭಾರತೀಯ ಸಾಧಕರಲ್ಲಿ ಅವರಿಗೆ 2ನೇ ಸ್ಥಾನ. ವೀರೇಂದ್ರ ಸೆಹವಾಗ್ 12 ಸಿಕ್ಸರ್ ಬಾರಿಸಿದ್ದು ದಾಖಲೆ.
– ಡೆಲ್ಲಿ ಕ್ಯಾಪಿಟಲ್ಸ್ ಕೇವಲ ಇಬ್ಬರು ವಿದೇಶಿ ಕ್ರಿಕೆಟಿಗರನ್ನಷ್ಟೇ ಕಣಕ್ಕಿಳಿಸಿತು. ಇವರೆಂದರೆ ರೋವ¾ನ್ ಪೊವೆಲ್ ಮತ್ತು ಟಿಮ್ ಸೀಫರ್ಟ್. ಐಪಿಎಲ್ ಚರಿತ್ರೆಯಲ್ಲಿ ತಂಡವೊಂದು ಇಬ್ಬರೇ ವಿದೇಶಿ ಕ್ರಿಕೆಟಿಗರನ್ನು ಆಡಿಸಿದ ಕೇವಲ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು 2011ರ ಚೆನ್ನೈ ಎದುರಿನ ಪಂದ್ಯದಲ್ಲಿ ಕೆಕೆಆರ್ ಜಾಕ್ ಕ್ಯಾಲಿಸ್ ಮತ್ತು ಇಯಾನ್ ಮಾರ್ಗನ್ ಅವರನ್ನಷ್ಟೇ ಆಡಿಸಿತ್ತು.
– ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಆಡಲಾದ 12 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ 8ನೇ ಸಲ 175 ಪ್ಲಸ್ ರನ್ ಗಳಿಸಿತು.
– ಪೃಥ್ವಿ ಶಾ ಮುಂಬೈ ವಿರುದ್ಧ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. 9 ಇನ್ನಿಂಗ್ಸ್‌ಗಳಿಂದ ಗಳಿಸಿದ ಒಟ್ಟು ರನ್ ಕೇವಲ 104. ಸರ್ವಾಧಿಕ ಗಳಿಕೆ 38 ರನ್. ಸರಾಸರಿ 11.55.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
Kasaragod: ಹಲ್ಲೆ ಪ್ರಕರಣ; ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.