ಆನ್‌ಲೈನ್‌ನತ್ತ ನಗರಸಭೆ : ದೂರು ಕೊಡಲು ಸಾಮಾಜಿಕ ಜಾಲತಾಣ ಖಾತೆ


Team Udayavani, Feb 28, 2022, 2:11 PM IST

NAGARA-SABHE

ಪುತ್ತೂರು : ಇಂಟರ್‌ನೆಟ್‌ ಆಧಾರಿತ ಸೇವೆ ಪ್ರಧಾನವಾಗುತ್ತಿರುವ ಈ ಕಾಲಘಟ್ಟದಲ್ಲಿ ಪುತ್ತೂರು ನಗರಸಭೆಗೆ ಸಂಬಂಧಿಸಿದ ದೂರು ದುಮ್ಮಾನಗಳನ್ನು ದಾಖಲಿಸಲೆಂದು ಜನಹಿತ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದ್ದು ಹಲವು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ದೂರು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯಾದ್ಯಂತ ಸ್ಥಳೀಯ ಆಡಳಿತಗಳು ಈಗಾಗಲೇ ಹೆಚ್ಚಿನ ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡಲು ಮುಂದಡಿ ಇಟ್ಟಿದ್ದು ಅದರ ಭಾಗವಾಗಿ ಪುತ್ತೂರು ನಗರಸಭೆಯು ಹತ್ತಾರು ಸೌಲಭ್ಯಗಳನ್ನು ಆನ್‌ಲೈನ್‌ ಮೂಲಕ ನೀಡಲು ನಿರ್ಧರಿಸಿದೆ.

ದೂರು ಸಲ್ಲಿಸಲು ಹಲವು ಖಾತೆ
ಸಾರ್ವಜನಿಕರಿಗೆ ದೂರುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ಜನಹಿತ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರೊಂದಿಗೆ ಫೇಸುºಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌, ವೆಬ್‌ ಸೈಟ್‌, ಸ್ವತ್ಛತಾ ಆ್ಯಪ್‌, ಜನಹಿತ ಮೊಬೈಲ್‌ ಆ್ಯಪ್‌ ಹಾಗೂ ದೂರವಾಣಿ ಮುಖಾಂತರ ದೂರುಗಳನ್ನು ಸಲ್ಲಿಸಿ ದೂರಿನ ಸ್ಥಿತಿಯನ್ನು ಪರಿಶೀಲಿಸಲು ಅವಕಾಶ ನೀಡಲಾಗಿದೆ. ಹೀಗಾಗಿ ಜನರು ಸಮಸ್ಯೆಗಳನ್ನು ಹೊತ್ತು ನಗರಸಭೆಗೆ ಬರುವ ಬದಲು ಕುಳಿತಲ್ಲಿಯೇ ಆಡಳಿತದ ಗಮನ ಸೆಳೆಯಲು ಅವಕಾಶ ನೀಡಲಾಗಿದೆ.

ಉದ್ದಿಮೆ ಪರವಾನಿಗೆ ಸ್ವಯಂ ನವೀಕರಣ
ನಗರಸಭೆಯ ವ್ಯಾಪ್ತಿಯಲ್ಲಿ ಬರುವ ಉದ್ದಿಮೆಗಳ ಪರವಾನಿಗೆಗಳ ನವೀಕರಣವನ್ನು ಸರಳಗೊಳಿಸಲು ಎಲ್ಲ ಉದ್ದಿಮೆದಾರರಿಗೆ ಪರವಾನಿಗೆಯನ್ನು ಪಡೆಯಲು ಸುಲಭವಾಗುವಂತೆ ವ್ಯಾಪಾರ ತಂತ್ರಾಂಶದಲ್ಲಿ ಪರವಾನಿಗೆಯ ಸ್ವಯಂ ನವೀಕರಣವನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ ಪರವಾನಿಗೆಗೆ ಆನ್‌ಲೈನ್‌ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಆನ್‌ಲೈನ್‌ ಮುಖಾಂತರ ಶುಲ್ಕವನ್ನು ಪಾವತಿಸಿ, ಆನ್‌ಲೈನ್‌ನಲ್ಲಿಯೇ ಪರವಾನಿಗೆ ಪ್ರತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಪರವಾನಿಗೆ ಶುಲ್ಕಕ್ಕೆ ಅರ್ಜಿ ಸಲ್ಲಿಸುವವರು ಮಾತ್ರ ಕಚೇರಿಗೆ ಬಂದು ನೋಂದಣಿ ಮಾಡಿಕೊಂಡರೆ ಸಾಕು. ಒಂದು ವರ್ಷದ ಅನಂತರ ನವೀಕರಣದ ಸಂದರ್ಭದಲ್ಲಿ ಆನ್‌ಲೈನ್‌ ಮೂಲಕ ಸ್ವಯಂ ನವೀಕರಣ ಮಾಡಿಕೊಳ್ಳಲು ಇಲ್ಲಿ ಅವಕಾಶ ಇದೆ.

ಆಸ್ತಿ ತೆರಿಗೆ, ಕಟ್ಟಡ ಪರವಾನಗಿ ಹಾಗೂ ಜನಹಿತ ತಂತ್ರಾಂಶ
ಸಾರ್ವಜನಿಕರಿಗೆ ತೆರಿಗೆ ಮತ್ತು ಇತರ ಶುಲ್ಕಗಳನ್ನು ಪಾವತಿಸಲು ಅನೂಕೂಲವಾಗುವಂತೆ ಇ-ಸ್ವೀಕೃತಿ ಎಂಬ ಶೀರ್ಷಿಕೆಯಡಿಯಲ್ಲಿ ತಂತ್ರಾಂಶವನ್ನು ಗಣಕೀಕರ ಣಗೊ ಳಿಸಲಾಗಿದೆ. ಸಾರ್ವ ಜನಿಕರು ಆನ್‌ಲೈನ್‌ ಮುಖಾಂತರ ತೆರಿಗೆಯನ್ನು ಪಾವತಿಸಲು ತಂತ್ರಾಂಶವನ್ನು ಉಪಯೋಗಿಸಬಹುದಾಗಿದೆ. ರಾಜ್ಯ ಸರಕಾರವು ನಿರ್ಮಾಣ್‌- 2 ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದು ಕಟ್ಟಡ ಪರವಾನಗಿಯನ್ನು ಆನ್‌ಲೈನ್‌ ಮುಖಾಂತರ ಪಡೆಯಬಹುದು.

ಆನ್‌ಲೈನ್‌ನಲ್ಲಿಯೇ ಅನುಮತಿ
ನಗರ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು, ಬ್ಯಾನರ್‌ ಹಾಗೂ ಇತರ ಪ್ರಚಾರವನ್ನು ತಡೆಯಲು ಹಾಗೂ ಆನ್‌ಲೈನ್‌ ಮುಖಾಂತರ ಅರ್ಜಿಗಳನ್ನು ಸಲ್ಲಿಸಿ ಆನ್‌ಲೈನಲ್ಲಿಯೇ ಅನುಮತಿಯನ್ನು ಪಡೆಯಲು ಅವಕಾಶ ನೀಡಲಾಗಿದೆ. ಇದರಿಂದ ನಗರದಲ್ಲಿ ಅನುಮತಿ ರಹಿತವಾಗಿ ಪ್ರಚಾರ ಸಾಮಗ್ರಿ ಅಳವಡಿಕೆ ನಿಯಂತ್ರಣ ಸಾಧ್ಯವಾಗಿ ನಗರಸಭೆಗೆ ಆದಾಯ ದೊರೆಯಲಿದೆ.

ಶೀಘ್ರ ಕೈಪಿಡಿ ಬಿಡುಗಡೆ
ಎಲ್ಲ ಪರವಾನಿಗೆಗಳನ್ನು ಡಿಜಿಟಲ್‌ ಸಹಿ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಸಾರ್ವಜನಿಕರಿಗೆ ತಂತ್ರಾಂಶವನ್ನು ಉಪಯೋಗಿಸಿ ವಿವಿಧ ಸೇವೆಗಳ ಮಾಹಿತಿಯನ್ನು ನಗರಸಭೆ ಕಾರ್ಯಾಲಯದ ವೆಬ್‌ಸೈಟ್‌ ಮುಖಾಂತರ ನೀಡಲಾಗುವುದು ಹಾಗೂ ಸಾರ್ವಜನಿಕರ ಉಪಯೋಗಕ್ಕೆ ಮಾಡಲಾಗಿರುವ ತಂತ್ರಾಂಶಗಳ ಕೈಪಿಡಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುವುದು.
– ಜೀವಂಧರ್‌ ಜೈನ್‌, ನಗರಸಭೆ ಅಧ್ಯಕ್ಷ.

ಟಾಪ್ ನ್ಯೂಸ್

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

courts-s

Belthangady: ಬೈಕ್‌ ಸವಾರ ಸಾವು ಪ್ರಕರಣ; ಸರಕಾರಿ ಬಸ್‌ ಚಾಲಕನಿಗೆ ಶಿಕ್ಷೆ;ದಂಡ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Uppinangady ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Sullia: ಕಾರಿಗೆ ಡೀಸೆಲ್‌ ತುಂಬಿಸಿ ಹಣ ನೀಡದೆ ಪರಾರಿ

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

Uppinangady: ಚಿನ್ನ, ನಗದು ಕಳ್ಳತನ: ದೂರು ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.