Muniyal Institute: ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮಣಿಪಾಲ
Team Udayavani, Jul 24, 2024, 4:24 PM IST
ಈ ಕಾಲೇಜಿನಲ್ಲಿ ಐದೂವರೆ ವರ್ಷಗಳ (ನಾಲ್ಕೂವರೆ ವರ್ಷ + ಒಂದು ವರ್ಷ ಇಂಟರ್ನಶಿಪ್) ಬಿ.ಎನ್.ವೈ.ಎಸ್. (ಬ್ಯಾಚುಲರ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸಸ್) ಎಂಬ ವಿಶಿಷ್ಟವಾದ ವೈದ್ಯಕೀಯ ಕೋರ್ಸನ್ನು ನಡೆಸಲಾಗುತ್ತಿದೆ.
ಭಾರತೀಯ ಚಿಕಿತ್ಸಾ ಪದ್ಧತಿಗಳಲ್ಲೊಂದಾದ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಪದ್ಧತಿಯು ಭಾರತ ಸರ್ಕಾರದ ಆಯುಷ್ ಇಲಾಖೆಯ ಅಧೀನಕ್ಕೊಳಪಟ್ಟಿದೆ. ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನೇಮಿತವಾಗಿದೆ. ದ್ವಿತೀಯ ಪಿ.ಯು.ಸಿ ಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ (ಫಿಸಿಕ್ಸ್, ಕೆಮೆಸ್ಟ್ರೀ ಮತ್ತು ಬಯೋಲಜಿ) ದಲ್ಲಿ ಕನಿಷ್ಠ ಶೇಕಡಾ ೫೦ ಅಂಕ ಗಳಿಸಿರುವ ಯಾವುದೇ ವಿದ್ಯಾರ್ಥಿಯೂ ಉತ್ತಮ ವೈದ್ಯನಾಗಿ ರೂಪುಗೊಂಡು ಸಮಾಜಕ್ಕೆ ಆರೋಗ್ಯ ಸೇವೆ ಸಲ್ಲಿಸುವ ಮಹತ್ತರವಾದ ಕೊಡುಗೆಯನ್ನು ನೀಡಬಹುದಾಗಿದೆ.
ಇದರಲ್ಲೇನು ವಿಶೇಷತೆ ?
ಇದೊಂದು ವಿಶಿಷ್ಟವಾದ ಔಷಧಿ ರಹಿತ ಚಿಕಿತ್ಸಾ ಪದ್ಧತಿಯಾಗಿದೆ. ಇಲ್ಲಿ ವೈದ್ಯರು ಅನೇಕ ಖಾಯಿಲೆಗಳಿಗೆ ಔಷಧಿಯಾಗಿ “ಪಂಚಮಹಾಭೂತ” ಅಂದರೆ ಮಣ್ಣು, ನೀರು, ಗಾಳಿ, ಅಗ್ನಿ, ಆಕಾಶಗಳನ್ನು ಚಿಕಿತ್ಸಾ ವಿಧಾನ/ಸಾಧನಗಳಾಗಿ ಬಳಸುತ್ತಾರೆ. ಇಲ್ಲಿನ ಅಸಾಮಾನ್ಯ ಸಂಗತಿಯೆಂದರೆ ವೈದ್ಯರು ಕೇವಲ ಚಿಕಿತ್ಸೆ ನೀಡುತ್ತಾರೆ, ಆದರೆ ಖಾಯಿಲೆಗಳನ್ನು ಪ್ರಕೃತಿಯೇ ಈ ಕೆಲವು ಚಿಕಿತ್ಸಾ ವಿಧಾನಗಳ ಮೂಲಕ ಗುಣಪಡಿಸುತ್ತದೆ. ಅವುಗಳೆಂದರೆ ಶುದ್ಧೀಕರಿಸಿದ ಮಣ್ಣಿನ ಚಿಕಿತ್ಸೆ, ನೀರಿನ ಚಿಕಿತ್ಸೆ, ವೈಜ್ಞಾನಿಕ ಅಂಗ ಮರ್ದನ (ಮಸಾಜ್) ಅಕ್ಯುಪಂಕ್ಚರ್, ಬಣ್ಣ ಮತ್ತು ಅಯಸ್ಕಾಂತ ಚಿಕಿತ್ಸೆ, ಸೂರ್ಯಸ್ನಾನ, ಆಹಾರ ಪೋಷಣೆ ಮತ್ತು ಪಥ್ಯಾಹಾರ, ಶುದ್ಧೀಕರಣ ಮತ್ತು ಉಪವಾಸ ಚಿಕಿತ್ಸೆ, ಯೋಗ ಚಿಕಿತ್ಸೆ, ಯೊಗ-ಪ್ರಾಣಾಯಾಮ-ಧ್ಯಾನದಲ್ಲಿನ ವಿಶೇಷ ತಂತ್ರಗಳು, ಮನೋ ವೈದ್ಯ ಶಾಸ್ತ್ರದಲ್ಲಿ ಯೋಗ ಸಮಾಲೋಚನೆ, ಜೀವನ ಶೈಲಿಯ ನಿರ್ವಹಣೆ ಇತ್ಯಾದಿ. ಪ್ರಕೃತಿ ಚಿಕಿತ್ಸಾ ವೈದ್ಯರ ಮಾರ್ಗದರ್ಶನದಲ್ಲಿ ಪ್ರಕೃತಿಗೆ ಮರಳಿ ಶರಣಾಗುವುದರಿಂದ ಮತ್ತು ಪ್ರಾಕೃತಿಕ ನಿಯಮಗಳನ್ನು ಪಾಲಿಸುವುದರಿಂದ ಸರಿಸುಮಾರು ಶೇಕಡಾ 70 ರಷ್ಟು ಮನುಕುಲದ ತೀವ್ರ ಮತ್ತು ದೀರ್ಘಕಾಲದ ಖಾಯಿಲೆಗಳನ್ನು ನಿರ್ವಹಣೆ ಮಾಡಬಹುದು, ಹತೋಟಿಗೆ ತರಬಹುದು ಮತ್ತು ಹಲವನ್ನು ಗುಣಪಡಿಸಬಹುದಾಗಿದೆ.
ಈ ಕೋರ್ಸಿನಲ್ಲಿನ ವಿಷಯ ವಿವರಣೆ ಮತ್ತು ಜ್ಞಾನದ ಪರಿಚಯ: ವಿದ್ಯಾರ್ಥಿಯು ಮಾನವ ಶರೀರದ ರಚನೆ, ಕಾರ್ಯ ಮತ್ತು ಅಸಹಜ ಬದಲಾವಣೆಗಳನ್ನು ಅರಿತುಕೊಳ್ಳಲು ಆಧುನಿಕ ವೈದ್ಯಕೀಯ ವಿಜ್ಞಾನದ ಅಂಗರಚನಾ ಶಾಸ್ತ್ರ, ಶರೀರ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಸೂಕ್ಷ್ಮ ಜೀವವಿಜ್ಞಾನ, ರೋಗಶಾಸ್ತ್ರ, ಸಾಮಾಜಿಕ ಮತ್ತು ರೋಗ ತಡೆ ವಿಜ್ಞಾನ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ರೋಗ ಪತ್ತೆ ಹಚ್ಚುವಿಕೆ ವಿಧಾನ ಮುಂತಾದ ವಿಷಯಗಳನ್ನು ಕಲಿಯಬೇಕಾಗುತ್ತದೆ. ಜೊತೆಗೆ ವಿವಿಧ ಖಾಯಿಲೆಗಳನ್ನು ಗುಣಪಡಿಸಲು ಎಲ್ಲಾರೀತಿಯ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಚಿಕಿತ್ಸಾ ವಿಧಾನಗಳನ್ನು ಆಳವಾಗಿ ಅಭ್ಯಸಿಸಬೇಕಾಗುತ್ತದೆ.
ಈ ಕೋರ್ಸಿನ ವ್ಯಾಪ್ತಿ ಮತ್ತು ಪ್ರಯೋಜನ: ಸ್ವಿಜರ್ಲೆಂಡ್ ಸೇರಿ ವಿಶ್ವದಾದ್ಯಂತ ಹಲವು ರಾಷ್ಟ್ರಗಳಲ್ಲಿ ಯೋಗ ಮತ್ತು ಆಯುರ್ವೇದವು ಅಧಿಕೃತ ಚಿಕಿತ್ಸಾ ಕ್ರಮವಾಗಿ ಅಂಗೀಕರಿಸಲ್ಪಟ್ಟಿದೆ. ಈ ಕೋರ್ಸಿನ ಅವಧಿ ಪೂರ್ಣವಾದ ಬಳಿಕ ಈ ಆರೋಗ್ಯ ಕ್ಷೇತ್ರಗಳಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸಾ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಆಯುರ್ವೇದ ಆಸ್ಪತ್ರೆ/ಕಾಲೇಜು, ಯೋಗ ಮತ್ತು ಫಿಟ್‌ನೆಸ್ ಕೇಂದ್ರಗಳು, ಫಿಸಿಯೋಥೆರೆಪಿ ಮತ್ತು ಪುನಃಶ್ಚೇತನ ಕೇಂದ್ರ, ಫಿಟ್‌ನೆಸ್ ತರಬೇತುದಾರರಾಗಿ, ಹಿರಿಯ ನಾಗರೀಕರ (ವೃದ್ಧರ) ಕ್ಲಿನಿಕ್, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಜೀವನ ಶೈಲಿ ನಿರ್ವಹಣಾ ಕ್ಲಿನಿಕ್, ಬೊಜ್ಜು ಕ್ಲಿನಿಕ್, ಆಹಾರ ಪೋಷಣೆ ಮತ್ತು ಪಥ್ಯಾಹಾರ ವಿಭಾಗ, ಅಕ್ಯುಪಂಕ್ಚರ್ ವೈದ್ಯರಾಗಿ, ಯೋಗದ ಆಪ್ತ ಸಮಾಲೋಚಕರಾಗಿ, ಮಾನಸಿಕ ಖಾಯಿಲೆಗಳ ಕ್ಲಿನಿಕ್‌ನಲ್ಲಿ, ನೋವು ನಿರ್ವಹಣಾ ಕ್ಲಿನಿಕ್, ಸ್ಪಾಗಳಲ್ಲಿ-ಕ್ರೂಸ್ (ಹಡಗು) ಗಳಲ್ಲಿ ಆರೋಗ್ಯ ತರಬೇತುದಾರರಾಗಿ, ಸಂಶೋಧಕ ವಿದ್ವಾಂಸರಾಗಿ, ಬೋಧಕರಾಗಿ, ಯೋಗ ಶಿಕ್ಷಕರಾಗಿ ಸೇವೆಸಲ್ಲಿಸಬಹುದು.
ವೈಶಿಷ್ಟ್ಯತೆ: ಮುನಿಯಾಲು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮಣಿಪಾಲ ಹರಿಕಂಡಿಗೆಯ ಹಸಿರಿನಿಂದ ಕಂಗೊಳಿಸುವ ಶ್ರೀಮಂತ ವನರಾಶಿಯ ನಡುವೆ ಸ್ಥಾಪಿತವಾಗಿದ್ದು ಉಡುಪಿ ಜಿಲ್ಲೆಯ ಪ್ರಥಮ ಕಾಲೇಜಾಗಿದೆ. ಪ್ರಕೃತಿ ಮಾತೆಯ ಅತ್ಯದ್ಭುತ ದಿವ್ಯ ಶಕ್ತಿಯ ಅನುಭೂತಿಯನ್ನು ಹೆಚ್ಚಿಸಲು ಇಲ್ಲಿ ಕಾಲೇಜಿನ ಪಕ್ಕದಲ್ಲಿ ಶ್ರೀ ಮಹಾಲಸ ನಾರಾಯಣಿ ದೇವಾಲಯದ ಸಾನಿಧ್ಯವಿದ್ದು ಇಲ್ಲಿ ಕಲಿಯುವ ಪ್ರಕೃತಿ ಚಿಕಿತ್ಸೆಯ ಸಾಧಕರಿಗೆ ಇದು ಅತ್ಯಂತ ಪ್ರಶಸ್ಥ ಸ್ಥಳವಾಗಿದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ದಾಖಲಾತಿಗಾಗಿ ಮತ್ತು ಕಾಲೇಜು ಶುಲ್ಕದಲ್ಲಿ ರಿಯಾಯಿತಿಗಾಗಿ ಈ ದೂರವಾಣಿಯನ್ನು ಸಂಪರ್ಕಿಸಬಹುದು; 8123403232.
ಬಿ.ಎ.ಎಮ್.ಎಸ್. ಮತ್ತು ಎಮ್.ಡಿ./ಎಮ್.ಎಸ್ ಆಯುರ್ವೇದ ಕೋರ್ಸುಗಳನ್ನು ಸೇರಲು ಇಚ್ಚಿಸುವ ಅರ್ಹ ಆಸಕ್ತ ವಿದ್ಯಾರ್ಥಿಗಳು ಮೇಲಿನ ದೂರವಾಣಿಯನ್ನು ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.