ಮುಸ್ಲಿಂ ಕಲಾವಿದನಿಂದ ಶ್ರೀರಾಮ ಜಪ
Team Udayavani, Aug 6, 2020, 2:28 PM IST
ಗದಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿರುವುದರಿಂದ ದೇಶದೆಲ್ಲೆಡೆ ಸಂಭ್ರಮ ಮನೆ ಮಾಡಿದೆ. ಹೀಗಾಗಿ ಹಿಂದೂಗಳು ವಿವಿಧ ದೇವಸ್ಥಾಗಳಲ್ಲಿ ಹೋಮ, ಹವನ ಹಾಗೂ ಜಪತಪಗಳಲ್ಲಿ ಮುಳುಗಿದ್ದರೆ, ನಗರದ ಮುಸ್ಲಿಂ ಸಮಾಜದ ಹಿರಿಯ ಕಲಾವಿದರೊಬ್ಬರು ಆಂಜನೇಯ ಹಾಗೂ ಮಂಡಲದಲ್ಲಿ ಶ್ರೀರಾಮನ ಪಾದಗಳನ್ನು ಚಿತ್ರಿಸುವ ಮೂಲಕ
ಸೌಹಾರ್ದತೆ ಮೆರೆದಿದ್ದಾರೆ.
ನಗರದ ಅಮರೇಶ್ವರ ಕಾಲೋನಿಯ ಮುನಾಫ್ ಹರ್ಲಾಪುರ ಎಂಬುವರು ಪುಟ್ಟ ಹಾಳೆಯಲ್ಲಿ ಮಂಡಲದ ಮಧ್ಯೆ ಶ್ರೀ ರಾಮನ ಪಾದಗಳ ಚಿತ್ರ ಬಿಡಿಸಿ, ಸುತ್ತಲು ಜೈ ಶ್ರೀರಾಮ್ ಎಂದು ಬರೆದಿದ್ದಾರೆ. ಜೊತೆಗೆ ರಾಮ ಭಕ್ತ ಹನುಮನನ್ನು ಬಿಡಿಸುವ ಮೂಲ ರಾಮಲಲ್ಲಾ ಜಪ ಮಾಡಿ, ಸಂಭ್ರಮಿಸಿದ್ದಾರೆ. ಕಲಾವಿದ ಮುನಾಫ್ ಹರ್ಲಾಪುರ ಅವರು ಈ ಹಿಂದೆಯೂ ವಿವಿಧೆ ಹಬ್ಬ,
ಹರಿದಿನಗಳ ಸಂದರ್ಭದಲ್ಲಿ ದೇವರು, ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಬಿಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುನಾಫ್ ಹರ್ಲಾಪುರ, ಕಲೆಗೆ ಧರ್ಮ, ಜಾತಿಗಳೆಂಬುದಿಲ್ಲ. ಅದು ಎಲ್ಲವನ್ನೂ ಮೀರಿದೆ. ಕಲೆಯ
ಮೂಲಕ ಜನರಲ್ಲಿ ಸೌಹಾರ್ದತೆ ಬೆಸೆಯುವುದು ಇದರ ಹಿಂದಿನ ಉದ್ದೇಶ. ಈ ಹವ್ಯಾಸದಿಂದ ಆನಂದವಾಗುತ್ತದೆ ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.