ಮುಸ್ಲಿಮರು ಕಾಂಗ್ರೆಸ್‌ನ ಸಂಚಿನ ಬಲೆಗೆ ಬೀಳಬಾರದು


Team Udayavani, Dec 22, 2019, 7:40 PM IST

JOSHI

ಬೆಂಗಳೂರು: ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಗೂ (ಸಿಎಎ) ಸಂಬಂಧವಿಲ್ಲ. ಯಾರೊಬ್ಬರ ಪೌರತ್ವವನ್ನೂ ಕಸಿದುಕೊಳ್ಳುವ ಕಾಯ್ದೆಯಲ್ಲ. ಕಾಂಗ್ರೆಸ್‌ ಪಕ್ಷ ಮುಸ್ಲಿಮರನ್ನು ಸಂಚಿಗೆ ದೂಡುತ್ತಿದೆ. ಕಾಂಗ್ರೆಸ್‌ ಸದಾ ಕಾಲ ಮುಸ್ಲಿಮರಿಗೆ ಮೋಸ ಮಾಡಿ ಮತ ಬ್ಯಾಂಕ್‌ ಮಾಡಿಕೊಂಡಿದ್ದು, ಇನ್ನು ಮುಂದೆ ನಾವು ಅವಕಾಶ ನೀಡುವುದಿಲ್ಲ. ಮುಸ್ಲಿಮರೂ ಸಂಚಿನ ಬಲೆಯಲ್ಲಿ ಬೀಳಬಾರದು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಮುಸ್ಲಿಮರು ಹೆಚ್ಚು ಸುರಕ್ಷಿತ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವಾದವೇ ಅರ್ಥವಾಗುತ್ತಿಲ್ಲ. ಅವರಿಗೆ ಗೊಂದಲ, ದೊಂಬಿ, ಗಲಭೆ, ಹಿಂಸೆ ಮಾಡುವುದು, ಅಲ್ಪಸಂಖ್ಯಾತರ ದಾರಿ ತಪ್ಪಿಸುವುದನ್ನು ಹೊರತುಪಡಿಸಿದರೆ ಬೇರೆ ಉದ್ದೇಶವೇ ಇದ್ದಂತಿಲ್ಲ ಎಂದು ವಾಗ್ಧಾಳಿ ನಡೆಸಿದರು.

ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿ 10 -12 ದಿನ ಕಳೆದಿದೆ. ಈ 10 ದಿನದಲ್ಲಿ ಕಾಂಗ್ರೆಸ್‌ನವರು ಕಳೆದುಕೊಂಡಿದ್ದೇನು, ಯಾವ ಸಮಸ್ಯೆ ಅನುಭವಿಸಿದ್ದಾರೆ ಎಂಬುದನ್ನು ಹೇಳಲಿ. ಕಾಯ್ದೆಗೆ ತಿದ್ದುಪಡಿ ತಂದಿರುವುದು ಇದೇ ಮೊದಲ ಬಾರಿಯಲ್ಲ. ಉಗಾಂಡ ನಿರಾಶ್ರಿತರು, ತಮಿಳು ನಿರಾಶ್ರಿತರಿಗೆ ಪೌರತ್ವ ನೀಡಲು ಹಿಂದೆ ಕಾಂಗ್ರೆಸ್‌ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದೀಗ ಬಾಂಗ್ಲಾದೇಶ, ಆಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದಿರುವವರಿಗೆ ಪೌರತ್ವ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. 60-70 ವರ್ಷಗಳ ಬೇಡಿಕೆಗೆ ಈಗ ಕಾಲ ಕೂಡಿಬಂದಿದೆ ಎಂದು ಸಮರ್ಥಿಸಿಕೊಂಡರು.

ಆಫಾrನಿಸ್ತಾನದಲ್ಲಿ 2 ಲಕ್ಷದಷ್ಟು ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರಿದ್ದರು. ಇದೀಗ ಅವರ ಸಂಖ್ಯೆ 500ಕ್ಕೆ ಕುಸಿದಿದೆ. 1947ರಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮರು ಶೇ. 79, ಹಿಂದೂಗಳು ಶೇ.13.5, ಸಿಖVರು ಶೇ. 5.2, ಕ್ರೈಸ್ತರು ಶೇ. 1.5 ರಷ್ಟಿದ್ದರು. ಆದರೆ 2015ರಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮರು ಶೇ.96.28, ಹಿಂದುಗಳು ಸೇರಿದಂತೆ ಅಲ್ಪಸಂಖ್ಯಾತರ ಪ್ರಮಾಣ ಶೇ.2.6ಕ್ಕೆ ಇಳಿದಿದೆ. ಬಾಂಗ್ಲಾ ದೇಶದಲ್ಲಿ 1951ರಲ್ಲಿ ಶೇ.22ರಷ್ಟಿದ್ದ ಹಿಂದೂಗಳ ಸಂಖ್ಯೆ ಇದೀಗ ಶೇ.8.5ಕ್ಕೆ ಕುಸಿದಿದೆ ಎಂದು ಮಾಹಿತಿ ನೀಡಿದರು.

1990ರ ನಂತರ ಕಾಂಗ್ರೆಸ್‌ ನಿರಂತರವಾಗಿ ಹಿನ್ನಡೆ ಅನುಭವಿಸುತ್ತಿದೆ. ದೇಶದಲ್ಲಿ ಒಂದೆರಡು ರಾಜ್ಯ ಹೊರತುಪಡಿಸಿ ಉಳಿದೆಡೆ ವಿಳಾಸವಿಲ್ಲದಂತಾಗಿದೆ ಇಲ್ಲವೇ ಸಣ್ಣಪುಟ್ಟ ಪಾತ್ರ ವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಯಶಸ್ಸು ಸಹಿಸಲಾಗದೆ ಅಲ್ಪಸಂಖ್ಯಾತ ಮುಸ್ಲಿಂ ಯುವಕರನ್ನು ತಪ್ಪು ದಾರಿಗೆ ಎಳೆಯುವ ದುಷ್ಕೃತ್ಯದಲ್ಲಿ ತೊಡಗಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ. ಎನ್‌ಆರ್‌ಸಿ ಬೇರೆ ಪೌರತ್ವ ತಿದ್ದುಪಡಿ ಕಾಯ್ದೆ ಬೇರೆ. ಹಾಗಿದ್ದರೂ ದೇಶದಿಂದ ಹೊರಕ್ಕೆ ಹಾಕಿ ಮುಸ್ಲಿಂ ರಾಷ್ಟ್ರ ಮಾಡುತ್ತಿದ್ದಾರೆ ಎಂಬ ತಪ್ಪು ದ್ವೇಷ ಭಾವನೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್‌ಆರ್‌ಸಿ ಆದಾಗಲೂ ದಾಖಲೆ ಇಲ್ಲದಿದ್ದರೂ ದೇಶದಲ್ಲಿ ಜನಸಿದ್ದಕ್ಕೆ ಪ್ರಮಾಣ ಪತ್ರ ನೀಡಿದರೂ ಬೇರೆ ಯಾವುದೇ ರೀತಿಯಲ್ಲೂ ಪೌರತ್ವ ಸಾಬೀತುಪಡಿಸುವ ಅಗತ್ಯವಿಲ್ಲ. ಎನ್‌ಆರ್‌ಸಿ ಜಾರಿ ನಂತರವೂ ಪಾಸ್‌ಪೋರ್ಟ್‌ ಕಾಯ್ದೆ, ಸಿಎಎ ಕಾಯ್ದೆ ಆಧಾರದ ಮೇಲೆ ತನಿಖೆ ನಡೆಯಲಿದೆ. ಯಾರನ್ನೂ ಏಕಾಏಕಿ ಹೊರಗೆ ಕಳುಹಿಸಲು ಸಾಧ್ಯವಿಲ್ಲ. ಈ ನಾಗರಿಕತ್ವಕ್ಕೂ, ಎನ್‌ಆರ್‌ಸಿಗೂ ಸಂಬಂಧವಿಲ್ಲ. ಆದರೆ ಕಾಂಗ್ರೆಸ್‌ ಜನರನ್ನು ತಪ್ಪು ದಾರಿಗೆ ಎಳೆಯುವ ಷಡ್ಯಂತ್ರ ನಡೆಸುತ್ತಿದೆ ಎಂದು ಹೇಳಿದರು.

ಜನರ ಸ್ವಭಾವದಲ್ಲಿ ಜಾತ್ಯಾತೀತತೆ ಇದೆ
ದೇಶ ಜಾತ್ಯಾತೀತವಾಗಿರುವುದು ಕಾಂಗ್ರೆಸ್‌ನಿಂದ, ನೆಹರು, ಇಂದಿರಾಗಾಂಧಿಯವರು ಆಡಳಿತ ನಡೆಸಿದ ಕಾರಣಕ್ಕೆ ಜಾತ್ಯಾತೀತವಾಗಿದೆ ಎಂಬ ಭಾವನೆ ಬೇಡ. ದೇಶದಲ್ಲಿ ರಾಷ್ಟ್ರೀಯತೆ ಹೊಂದಿರುವ ಬಹುಸಂಖ್ಯಾತ ಹಿಂದೂ ಸಮುದಾಯದವರ ಸ್ವಭಾವ, ರಕ್ತದಲ್ಲಿ ಜಾತ್ಯಾತೀತತೆ ಇದೆ. ಹಾಗಾಗಿ ತಪ್ಪು ತಿಳಿವಳಿಕೆ ದೂರ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಎಲ್ಲ ರೀತಿಯ ರಕ್ಷಣೆ ಸಿಗಲಿದೆ. ಈ ಮುಠಾuಳ- ಮನೆಹಾಳ ಕಾಂಗ್ರೆಸ್‌, ಎಸ್‌.ಪಿ, ಟಿ.ಎಂ.ಸಿಯವರ ಸಂಚಿನಲ್ಲಿ ಬೀಳಬಾರದು. ಮೋದಿಯವರ ಸರ್ಕಾರದಲ್ಲಿ ಅಲ್ಪಸಂಖ್ಯಾತರು ಈ ಹಿಂದೆ ಐದು ವರ್ಷ ಸುರಕ್ಷಿತವಾಗಿದ್ದರು. ಈಗಿನ ಐದು ವರ್ಷದಲ್ಲೂ ಸುರಕ್ಷಿತವಾಗಿರಲಿದ್ದು, ಆ ನಂತರದ ಐದು ವರ್ಷಕ್ಕೂ ಪ್ರಧಾನಿ ಮೋದಿಯವರೇ ಇರಲಿದ್ದು, ಹೆಚ್ಚು ಸುರಕ್ಷಿತವಾಗಿರಲಿದ್ದಾರೆ ಎಂದು ಭರವಸೆ ನೀಡಿದರು.

ಪಾಕಿಸ್ತಾನ, ಆಫ್ಘಾನಿಸ್ಥಾನ, ಬಾಂಗ್ಲಾ ದೇಶದಿಂದ ಮುಸ್ಲಿಮರು ಶರಣಾಗಿ ಸಹಜ ಪ್ರಕ್ರಿಯೆಯಡಿ ಅರ್ಜಿ ಸಲ್ಲಿಸಿ ಪೌರತ್ವ ಬಯಸಿದರೆ ಪರಿಶೀಲಿಸಿ ನೀಡಲಾಗುತ್ತದೆ. ಹಾಗೆಂದು ಜಗತ್ತಿನ 40 ಮುಸ್ಲಿಂ ರಾಷ್ಟ್ರಗಳಿಂದ ಎಲ್ಲರನ್ನು ಕರೆತರಲು ಭಾರತ ಧರ್ಮಶಾಲೆಯೇನು. ಕಳೆದ ಐದು ವರ್ಷದಲ್ಲಿ 550 ಮುಸ್ಲಿಮರಿಗೆ ಪೌರತ್ನ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಜನರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ಕೇಂದ್ರ ಸರ್ಕಾರ ವಿಫ‌ಲವಾಯಿತೆ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಹ್ಲಾದ್‌ ಜೋಷಿ, ತಪ್ಪು ಮಾಹಿತಿ ಬಹುಬೇಗ ಹರಡುತ್ತದೆ. ಇದೀಗ ಸರಿಯಾದ ಮಾಹಿತಿ ನೀಡುವ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.

ಜಿಡಿಪಿ ಪ್ರಗತಿ, ಆರ್ಥಿಕ ಸ್ಥಿತಿ ಕುರಿತು ಚರ್ಚೆಯಾಗದಂತೆ ತಡೆಯಲು ಕಾಯ್ದೆ ತಂದು ಗೊಂದಲ ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ನಿರಾಧಾರ. ಆರ್ಥಿಕತೆ ಕುರಿತು ಚರ್ಚೆ ನಡೆಸದಂತೆ ಕಾಂಗ್ರೆಸ್‌ನವರನ್ನು ತಡೆದವರು ಯಾರು. ಕಾಂಗ್ರೆಸ್‌ನವರು ಈ ಗಲಾಟೆ ಮಾಡಿಸದಿದ್ದರೆ ಚರ್ಚೆ ನಡೆಸಬಹುದಿತ್ತು. ಹಾಗೆಯೇ ಬಿಜೆಪಿ ಸರ್ಕಾರಗಳಿರುವ ರಾಜ್ಯಗಳಲ್ಲೇ ಪ್ರತಿಭಟನೆಯಾಗುತ್ತಿದೆ ಆರೋಪವೂ ಅರ್ಥಹೀನ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿಟ್ಟುಕೊಂಡು ನಾವೇ ಕಾನೂನು- ಸುವ್ಯವಸ್ಥೆ ಹದಗೆಸಿಕೊಂಡು ಆರೋಪ ಹೊತ್ತುಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಶಾಸಕ ಶಿವನಗೌಡ ನಾಯಕ್‌, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ್‌, ಮಾಧ್ಯಮ ಸಂಚಾಲಕ ಎ.ಎಚ್‌. ಆನಂದ್‌ ಉಪಸ್ಥಿತರಿದ್ದರು.

ಕಚೇರಿಯಲ್ಲೇ ಮಾಹಿತಿ ವ್ಯವಸ್ಥೆ
ಸಿಎಎ ಬಗ್ಗೆ ಯವುದೇ ರೀತಿಯ ಪ್ರಶ್ನೆ, ಸ್ಪಷ್ಟತೆ ಅಗತ್ಯವೆನಿಸಿದರೆ ಪಕ್ಷದ ಕಚೇರಿಯಲ್ಲೇ ಒಬ್ಬರನ್ನು ಮಾಹಿತಿಗೆ ನಿಯೋಜಿಸಲಾಗುವುದು. ಶಾಂತಿಯುವಾಗಿ ಕೋರಿದರೆ ಎಲ್ಲರಿಗೂ ಮಾಹಿತಿ ನೀಡಲು ಸಿದ್ಧ. ಇಂದು ದೊಂಬಿ, ಗಲಭೆ, ಹಿಂಸೆಗೆ ಪ್ರಚೋದನೆ ನೀಡುವರರು ಮುಂದೆ ಜೈಲಿಗೆ ಹೋದಾಗ ಬಿಡಿಸಲು ಬರುವುದಿಲ್ಲ. ಈವರೆಗೆ ಮುಸ್ಲಿಂ ಸಮುದಾಯವರನ್ನು ಬಾವಿಯಲ್ಲಿದ್ದು, ಐದು ವರ್ಷಕ್ಕೊಮ್ಮೆ ಹಗ್ಗ ಬಿಟ್ಟು ಮೇಲೆತ್ತಿ ಹೆದರಿಸಿ ಮತ ಪಡೆದು ಅದೇ ಸ್ಥಿತಿಯಲ್ಲಿಟ್ಟರು. ಯುಪಿಎ ಸರ್ಕಾರದ ಅವಧಿಯ ಸಮಿತಿಗಳೇ ಮುಸ್ಲಿಮರು ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ್ದಾರೆ ಎಂದು ಹೇಳಿವೆ. ಇದನ್ನು ಅಲ್ಪಸಂಖ್ಯಾತರು ಅರಿತುಕೊಳ್ಳಬೇಕು.
– ಪ್ರಹ್ಲಾದ್‌ ಜೋಷಿ, ಕೇಂದ್ರ ಸಚಿವ

ಟಾಪ್ ನ್ಯೂಸ್

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

Yatnal-Team

Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್‌ ಬಿಜೆಪಿ ವಕ್ಫ್ ಪ್ರವಾಸ

Congress-Session

Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್‌ ಪಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

1(1

Puttur ನಗರಕ್ಕೂ ಬೇಕು ಟ್ರಾಫಿಕ್‌ ಸಿಗ್ನಲ್‌

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.