ಬೊಮ್ಮಾಯಿ ಸಿಎಂ ಆಗುವಲ್ಲಿ ನನ್ನ ಪಾತ್ರ ದೊಡ್ಡದಿದೆ: ಬಸನಗೌಡ ಪಾಟೀಲ ಯತ್ನಾಳ್
Team Udayavani, May 8, 2022, 9:15 PM IST
ವಿಜಯಪುರ: ರಾಜಕೀಯದಲ್ಲಿ ದಲ್ಲಾಳಿಗಳ ಸಂಚಿಗೆ ಬಲಿಯಾಗಬೇಡಿ ಎಂದು ರಾಮದುರ್ಗ ಸಮಾವೇಶದಲ್ಲಿ ನನ್ನೊಂದಿಗೆ ವೇದಿಕೆ ಹಂಚಿಕೊಂಡಿದ್ದ ಚುನಾವಣೆ ಟಿಕೆಟ್ ಆಕಾಂಕ್ಷಿಗಳಿಗೆ ಸಲಹೆ ನೀಡಿದ್ದೆ. ವಂಚನೆಗೊಳಗಾಗಬೇಡಿ ಎಂದು ಬುದ್ಧಿ ಮಾತು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜಕೀಯ ಸಂಚಲನ ಸೃಷ್ಟಿಸಿರುವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಭಾನುವಾರ ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆ ಅನಾವರಣ ಹಾಗೂ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ರಾಮದುರ್ಗ ಸಮಾವೇಶದಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ಕೆಲವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಟಿಕೆಟ್ ಕೊಡಿಸುವುದಾಗಿ ಹೇಳಿಕೊಂಡು ಕೆಲವರು ಅವರನ್ನು ಭೇಟಿ ಮಾಡಿಸುತ್ತೇವೆ, ಈ ನಾಯಕನನ್ನು ಭೇಟಿ ಮಾಡಿಸುತ್ತೇವೆ ಎಂದಿದ್ದಾರೆ ಎಂದು ಹೇಳಿಕೊಂಡರು. ಇದನ್ನು ಆಧರಿಸಿ ನನಗೂ ಕೆಲವರು ಮುಖ್ಯಮಂತ್ರಿ ಮಾಡಸ್ತೀವಿ, ಅವರನ್ನು ಭೇಟಿ ಮಾಡಸ್ತೀವಿ ಎಂದಿದ್ದರು.
ನಾನು ಮೋಸಕ್ಕೊಳಗಾಗಲಿಲ್ಲ. ನಿಮಗೂ ಅಂಥವರೇ ಚಂಡ (ವಂಚಿಸಲು) ಹಾಕುವ ಕೆಲಸ ಮಾಡ್ತಾರ ಎಚ್ಚರ ಎಂದು ಸಲಹೆ ನೀಡಿದ್ದೆ. ಆದರೆ ಇದೇ ಹೇಳಿಕೆ ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಮತ್ತೂಂದೆಡೆ ಇದನ್ನೇ ಮುಂದಿಟುxಕೊಂಡು ಕೆಲವು ಚರ್ಚೆ ನಡೆದಿವೆ ಎಂದರು.
ಯತ್ನಾಳ ಅವರನ್ನು ಹೊರ ಹಾಕದಷ್ಟು ಪಕ್ಷ ದುರ್ಬಲವೇ, ಪಕ್ಷದ ನಾಯಕರಿಗೆ ತಾಕತ್ತಿಲ್ಲವೇ ಎಂದು ಮಾಧ್ಯಮದ ಮುಖ್ಯಸ್ಥರು ಚಿಂತೆಯಲ್ಲಿ ಬಡಿದುಕೊಳ್ಳುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವಲ್ಲಿ ನನ್ನ ಪಾತ್ರ ದೊಡ್ಡದಿದೆ. ನಾನು ಅವರನ್ನು (ಯಡಿಯೂರಪ್ಪ) ಕೆಳಗೆ ಇಳಿಸಿದ್ದರಿಂದಲೇ ಬೊಮ್ಮಾಯಿ ಅವರಿಗೆ ಸಿಎಂ ಆಗುವ ಅವಕಾಶ ಸಿಕ್ಕಿದೆ. ಆದರೆ ನನಗೇನೂ ಮಂತ್ರಿ ಸ್ಥಾನ ಬೇಡ, ನಮ್ಮ ಸಮಾಜಕ್ಕೆ ಮೀಸಲು ಸೌಲಭ್ಯ ಕೊಟ್ಟರೆ ಸಾಕು ಎಂದಿದ್ದೇನೆ. ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜಕ್ಕೆ ಮೀಸಲು ನೀಡುವ ಮನಸ್ಸಿದ್ದರೂ, ನಮ್ಮವರೇ ಮಾಡಬೇಡಿ ಎಂದು ಅಡ್ಡವಾಗಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.