ನನ್ನ ಬರವಣಿಗೆ ಕಾಲ ಮುಗಿಯಿತು: ಭೈರಪ್ಪ


Team Udayavani, Feb 1, 2020, 3:10 AM IST

nanna-baravani

ಧಾರವಾಡ: “ವಯಸ್ಸಿನ ಮಿತಿಯೋ ಅಥವಾ ಹೊಸ ಆಲೋಚನೆಗಳ ಹೊಳೆಯುವಿಕೆಯ ಕೊರತೆಯೋ ಗೊತ್ತಿಲ್ಲ. ನನ್ನ ಬರವಣಿಗೆ ಕಾಲ ಮುಗಿಯಿತು ಎನಿಸುತ್ತಿದೆ’ ಎಂದು ಹಿರಿಯ ಕಾದಂಬರಿಕಾರ ಡಾ|ಎಸ್‌.ಎಲ್‌.ಭೈರಪ್ಪ ತಿಳಿಸಿದ್ದಾರೆ.

ಸಾಧನಕೇರಿಯಲ್ಲಿ ಡಾ|ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಆಯೋಜಿಸಿದ್ದ “ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭಕ್ಕೂ ಪೂರ್ವದಲ್ಲಿ ಆಯೋಜಿಸಿದ್ದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಾ ದದಲ್ಲಿ ಅವರು ತಮ್ಮ ಬರವಣಿಗೆ, ಚಳವಳಿ, ಸಾಹಿತ್ಯ, ಶಿಕ್ಷಣ ಮಾಧ್ಯಮ, ಜಾತಿ ವ್ಯವಸ್ಥೆ…ಹೀಗೆ ವಿವಿಧ ವಿಷಯಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು.

ಹೊಸ ಆಲೋಚನೆಗಳು ಹೊಳೆದಿಲ್ಲ: “ಈವರೆಗೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ವಿಚಾರಗಳನ್ನು ನಾನು ನನ್ನ ಕಾದಂಬರಿಗಳಲ್ಲಿ ಹಿಡಿದಿಡುತ್ತ ಬಂದಿದ್ದೇನೆ. “ಉತ್ತರಕಾಂಡ’ ಕಾದಂಬರಿ ನಂತರ ನಾನು ಏನನ್ನೂ ಬರೆದಿಲ್ಲ. ಹೊಸ ಆಲೋಚನೆಗಳು ಏನೂ ಹೊಳೆದಿಲ್ಲ. ಇದಕ್ಕೆ ವಯಸ್ಸಿನ ಮಿತಿಯೂ ಕಾರಣ ಇರಬಹುದು. ನನ್ನ ಬರವಣಿಗೆ ಕಾಲ ಮುಗಿಯಿತು ಅನಿಸುತ್ತಿದೆ. ಮತ್ತೆ ಬರೆಯುತ್ತೇನೋ, ಇಲ್ಲವೋ ಗೊತ್ತಿಲ್ಲ’ ಎಂದರು.

ಸಾಹಿತ್ಯದಲ್ಲಿ ಚಳವಳಿಗಳು ಬಂದರೆ ಅಪಾಯಕಾರಿ: ಚಳವಳಿಗಳು ಮತ್ತು ಸಾಹಿತ್ಯ, ಎರಡೂ ಪರಸ್ಪರ ಮುಖಾಮುಖೀಯಾಗುವ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ನನ್ನ ದೃಷ್ಟಿಯಲ್ಲಿ ಸಾಹಿತ್ಯದಲ್ಲಿ ಚಳವಳಿಗಳು ಬಂದರೆ ಹೆಚ್ಚು ಅಪಾಯವಾಗುತ್ತದೆ. ಯಾವುದೋ ಒಂದು ಚಳವಳಿ ನಡೆಯುವ ಕಾಲಘಟ್ಟದಲ್ಲಿ ಅದರ ಪರವಾಗಿ ಕೃತಿ ರಚಿಸಿದರೆ ಜನಪ್ರಿಯವಾಗುತ್ತದೆ. ಅಂತಹ ಚಳವಳಿಯನ್ನು ಪ್ರಶಂಸಿಸುವವರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ.

ಹಾಗೆಯೇ, ಆ ಚಳವಳಿ ಬೆಂಬಲಿಸುವ ಪತ್ರಿಕೆಗಳೂ ಅದಕ್ಕೆ ಮನ್ನಣೆ ನೀಡುತ್ತವೆ. ಚಳವಳಿ ವಿರುದ್ಧ ಬರೆದರೆ ಅದಕ್ಕೆ ಭಾರಿ ಪ್ರಮಾಣದ ಪ್ರತಿರೋಧ ಎದುರಾಗುತ್ತದೆ. ಹೀಗಾಗಿ, ಈ ಕಾಲಘಟ್ಟದಲ್ಲಿ ಸಾಹಿತ್ಯ ರಚಿಸುವ ಸಾಹಿತಿಗೆ ಎಲ್ಲವೂ ಗೊತ್ತಿರಬೇಕು. ಆದರೆ, ಯಾವುದಕ್ಕೂ ಜೋತು ಬೀಳದೇ ಒಬ್ಬ ಸಾಹಿತಿ ತನ್ನ ಕೆಲಸ ಮಾಡಬೇಕು ಎಂದರು.

4ನೇ ತರಗತಿಯವರೆಗೂ ರಾಜ್ಯ ಭಾಷೆಯಲ್ಲೇ ಕಲಿಸಲಿ: ಕನ್ನಡ ಶಿಕ್ಷಣ ಮಾಧ್ಯಮ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಭಾಷಾ ಮಾಧ್ಯಮ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಾನು ಮಾತನಾಡಿದ್ದೇನೆ. 4ನೇ ತರಗತಿವರೆಗೂ ರಾಜ್ಯ ಭಾಷೆಯಲ್ಲೇ ಮಕ್ಕಳಿಗೆ ವಿಷಯ ಕಲಿಸಬೇಕು. ನಂತರ, ಇಂಗ್ಲಿಷ್‌ ಭಾಷೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಲಿಸಬೇಕು. ಇತರ ವಿಷಯಗಳನ್ನು ಎರಡೂ ಭಾಷೆಯಲ್ಲಿ ಕಲಿಸಿದರೆ ಮಕ್ಕಳಿಗೆ ಅರ್ಥವಾಗುತ್ತದೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಇದಕ್ಕೆ ಮೋದಿ ಕೂಡ ಒಪ್ಪಿಕೊಂಡಿದ್ದು, ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಜಾತಿ ವ್ಯವಸ್ಥೆ ಬಂದಿದ್ದು ಬ್ರಾಹ್ಮಣರಿಂದಲ್ಲ: ಜಾತಿ ವ್ಯವಸ್ಥೆ ವಿಷಯವಾಗಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಸಮಾಜದಲ್ಲಿ ಜಾತಿ ವ್ಯವಸ್ಥೆ ಹುಟ್ಟಿಕೊಂಡಿದ್ದು ವೃತ್ತಿಗಳಿಂದಾಗಿಯೇ ಹೊರತು ಅದನ್ನು ಬ್ರಾಹ್ಮಣರು ಮಾಡಿಲ್ಲ. ನೇಕಾರಿಕೆ ಮಾಡುವ ತಂದೆ ತನ್ನ ಮಗಳನ್ನು ಇನ್ನೊಬ್ಬ ನೇಕಾರ ವರನಿಗೆ ಕೊಟ್ಟು ಮದುವೆ ಮಾಡುತ್ತಾ ಬಂದನೇ ಹೊರತು ಬೇರೆ ಕಸುಬುದಾರರಿಗೆ ಕೊಡಲಿಲ್ಲ. ಇಂದು ವೈದ್ಯ ಕೂಡ ಇನ್ನೊಬ್ಬ ವೈದ್ಯಳನ್ನೇ ಮದುವೆಯಾಗುತ್ತಾನೆ. ಹಳೆಯ ಪದ್ಧತಿಯೇ ಇಂದೂ ಮುಂದುವರಿದಿದೆ ಎಂದರು.

ಸಂವಾದದಲ್ಲಿ ಹಿರಿಯ ಸಾಹಿತಿ ಡಾ|ಜಿ.ಎಂ.ಹೆಗಡೆ, ಡಾ| ಸಂಗಮನಾಥ ಲೋಕಾಪುರ, ಡಾ| ಶಶಿಧರ ನರೇಂದ್ರ ಪಾಲ್ಗೊಂಡಿದ್ದರು. ಟ್ರಸ್ಟ್‌ ಅಧ್ಯಕ್ಷ ಡಾ|ಡಿ.ಎಂ.ಹಿರೇಮಠ ಮತ್ತು ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಇದ್ದರು.

2020ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿ ಪ್ರದಾನ
ಧಾರವಾಡ: ಬೇಂದ್ರೆ ಅವರ ಕಾವ್ಯಗಳಲ್ಲಿ ಚತು ರ್ಮುಖ ಸೌಂದರ್ಯದ ಸತ್ಯವಿದ್ದು, ಅವರ ಕಾವ್ಯ ಗಳು ವಿಶ್ವಪ್ರಜ್ಞೆಯನ್ನು ಒಳಗೊಂಡಿವೆ ಎಂದು ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಹೇಳಿದರು. ಬೇಂದ್ರೆ ಭವನದಲ್ಲಿ ಹಮ್ಮಿಕೊಂಡಿದ್ದ 2020ನೇ ಸಾಲಿನ “ಅಂಬಿಕಾತನಯದತ್ತ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಡಾ| ಎಸ್‌.ಎಲ್‌. ಭೈರಪ್ಪ ಅವರಿಗೆ ಅಂಬಿಕಾತನಯದತ್ತ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವರಕವಿ ದ.ರಾ.ಬೇಂದ್ರೆಯವರು ನಾಲ್ಕು ಸೌಂದರ್ಯದ ಸತ್ಯಗಳನ್ನು ಹೇಳಿದ್ದಾರೆ. ಅರವಿಂದರು ಕೂಡ ಈ ಸತ್ಯಗಳ ಬಗ್ಗೆ ಹೇಳಿದ್ದರು. ಇದನ್ನು ಬೇಂದ್ರೆ ಅವರು ತಮ್ಮ ಕಾವ್ಯಗಳಲ್ಲಿ ಅಳವಡಿಸಿದ್ದಾರೆ ಎಂದರು. ತಮ್ಮ ಗೆಳೆಯರ ಗುಂಪನ್ನು ಗಾಂಧಿ, ಅರವಿಂದ, ರವೀಂದ್ರ ಈ ಮೂರು ಒಲೆಯ ಮೇಲೆ ಗುಂಪಿನ ಪಾಕ ನಡೆದಿದೆ ಎಂದು ಬೇಂದ್ರೆ ಹೇಳುತ್ತಿದ್ದರು. ಅವರ ಕಾವ್ಯಗಳಲ್ಲಿ ವಿಶ್ವ ಮತ್ತು ರಾಷ್ಟ್ರ ಪ್ರಜ್ಞೆ ಎರಡೂ ಸಮ್ಮಿಳಿತವಾಗಿವೆ.

ಬೇಂದ್ರೆ ಅವರು ಹಲಸಂಗಿ ಗೆಳೆಯರು ಮತ್ತು ಇತರ ಸಾಹಿತ್ಯ ಬಳಗವನ್ನು ಒಗ್ಗೂಡಿಸಿದ ಯತ್ನ ನಿಜಕ್ಕೂ ಸ್ಮರಣೀಯ. ಬೇಂದ್ರೆ ಅವರು ಬರೀ ಕಾವ್ಯ ಮಾತ್ರವಲ್ಲ, ಗಣಿತ ಮತ್ತು ಭೌತಶಾಸ್ತ್ರವನ್ನು ಕೂಡ ಅಧ್ಯಯನ ಮಾಡಿದ್ದರು. ಕವಿಯಾಗಿ ವಿಜ್ಞಾನವನ್ನು ತಿಳಿದ ಅಂಬಿಕಾತನಯದತ್ತರ ಪ್ರಶಸ್ತಿಯನ್ನು ಕಾದಂಬರಿಕಾರರಾಗಿ ವಿಜ್ಞಾನ ತಿಳಿದ ಎಸ್‌.ಎಲ್‌.ಭೈರಪ್ಪ ಅವರಿಗೆ ನೀಡುತ್ತಿರುವುದೇ ವಿಶೇಷ.

ಲೇಖಕ ಪ್ರಸಿದ್ಧನಾಗಲು ದೇವರ ಕೃಪೆಯೂ ಬೇಕು. ಇವೆರಡೂ ಎಸ್‌.ಎಲ್‌.ಭೈರಪ್ಪ ಅವರಿಗೆ ಇದ್ದು, ಇದು ಕನ್ನಡದ ಭಾಗ್ಯ ಮತ್ತು ಕನ್ನಡದ ಕೀರ್ತಿ. ಹೀಗಾಗಿ, ಈ ಪ್ರಶಸ್ತಿಗೆ ಆಯ್ಕೆ ಸಮಿತಿ ಅಧ್ಯಕ್ಷನಾಗಿದ್ದ ನಾನು ಎಸ್‌.ಎಲ್‌.ಭೈರಪ್ಪ ಅವರನ್ನೇ ಆಯ್ಕೆ ಮಾಡಿದೆ ಎಂದರು.

ವಿದ್ಯಾವಂತ ಓದುಗರನ್ನು ಆಕರ್ಷಿಸುವ ಕೃತಿಯೇ ಬೆಸ್ಟ್‌: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ|ಎಸ್‌.ಎಲ್‌. ಭೈರಪ್ಪ, “ನಾನು ಗ್ರಾಮೀಣ ಭಾರತವನ್ನು ಅನುಭವದ ಮೂಲಕ ಕಂಡುಕೊಂಡೆ. ಹೀಗಾಗಿ, ಕನ್ನಡದ ಮೂಲಕ ಭಾರತೀಯ ಕಾದಂಬರಿಕಾರನಾಗಲು ಸಾಧ್ಯವಾ ಯಿ ತು. ನವ್ಯ ಬರುವುದಕ್ಕೆ ಮುಂಚೆ ನಮ್ಮ ಸಾಹಿತಿಗಳು ಕವನ, ಕಥೆಯನ್ನು ಬರಿಯುತ್ತಿದ್ದರು. ಅದು ಕನ್ನಡ ಕಟ್ಟಲು, ಕರ್ನಾಟಕ ಏಕೀಕರಣಕ್ಕೆ ಸಹಾಯಕವಾ ಯಿತು.

ನವ್ಯ ಬಂದ ಮೇಲೆ ಸೃಜನಶೀಲ ಲೇಖಕ ವಿಮರ್ಶಕನಾಗಿಬಿಟ್ಟ. ವಿಮರ್ಶೆ ನೆಪದಲ್ಲಿ ತನ್ನನ್ನು ಸಮರ್ಥಿಸಿಕೊಂಡು ವಿರೋಧಿಗಳನ್ನು ಮಟ್ಟ ಹಾಕು ವುದಕ್ಕೆ ವಿಮರ್ಶೆ ಬಳಕೆಯಾಯಿತು. ಸಾಹಿತಿ ಯಾ ವತ್ತು ತನ್ನ ಸಾಹಿತ್ಯ ಕೃತಿ ಬಗ್ಗೆ ಮಾತನಾಡಬಾರದು’ ಎಂದರು. ವಿದ್ಯಾವಂತ ಓದುಗರನ್ನು ಮತ್ತೆ, ಮತ್ತೆ ಆಕರ್ಷಿಸುವ ಕೃತಿಯೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇನ್ನುಳಿದ ಎಲ್ಲಾ ಅಂಶಗಳು ಎರಡನೇ ಅಂಶಗಳು.

“ಉತ್ತರಕಾಂಡ’ ಮತ್ತು “ಧರ್ಮಶ್ರೀ’ ಉತ್ತಮ ಕಾದಂಬರಿಗಳಲ್ಲ ಎಂಬುದು ನನಗೂ ಗೊತ್ತು. ಆದರೆ, ಅದರಲ್ಲಿನ ಆದರ್ಶ ಮತ್ತು ಆದರ್ಶ ಶ್ರೇಷ್ಠವಲ್ಲದ ಪಾತ್ರಗಳ ವೈಶಿಷ್ಟ ತಿಳಿಸುವುದಾಗಿತ್ತು. “ರಾಮಾಯಣ’ ಉತ್ತಮ ಕೃತಿಯಾಗಿದ್ದು ರಾಮ ಸರ್ವ ಶ್ರೇಷ್ಠ ರಾಜನಾ ಗಿದ್ದ ಎಂದು ಎಲ್ಲರಿಗೂ ಗೊತ್ತು. ಆದರೆ, ಅಂದು ರಾಮ ಸೀತೆಯನ್ನು ಕಾಡಿಗೆ ಅಟ್ಟಿದ್ದನ್ನು ನಾವು ಇಂದು ಒಪ್ಪುವುದಿಲ್ಲ. ಹೀಗಾಗಿ, ಪ್ರತಿಯೊಂದು ಕಾದಂಬರಿ ಯಲ್ಲಿನ ಅಂಶಗಳು ವಿಭಿನ್ನ ನೆಲೆಗಟ್ಟಿನಲ್ಲಿ ಚರ್ಚಿತವಾ ಗುವುದೇ ಆಯಾ ಕಾದಂಬರಿಗಳ ವಿಶೇಷ ಎಂದರು.

ಬೇಂದ್ರೆ ಟ್ರಸ್ಟ್‌ ಅಧ್ಯಕ್ಷ ಡಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರಾಜಕಾರಣಿ ಚಂದ್ರಕಾಂತ ಬೆಲ್ಲದ, ಡಾ| ತೇಜಸ್ವಿ ಕಟ್ಟಿಮನಿ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಸ್ವಾಗತಿಸಿದರು. ರಮ್ಯ ವಶಿಷ್ಠ ತಂಡ ಬೇಂದ್ರೆ ಕಾವ್ಯಗಳನ್ನು ಹಾಡಿ ಗಮನ ಸೆಳೆಯಿತು.

ವಯಸ್ಸಿನ ಮಿತಿಯೋ, ಹೊಸ ಆಲೋಚನೆಗಳ ಹೊಳೆಯುವಿಕೆ ಕೊರತೆಯೋ ಗೊತ್ತಿಲ್ಲ. “ಉತ್ತರಕಾಂಡ’ ಕಾದಂಬರಿ ನಂತರ ನಾನು ಏನನ್ನೂ ಬರೆದಿಲ್ಲ. ಹೊಸ ಆಲೋಚನೆಗಳು ಏನೂ ಹೊಳೆದಿಲ್ಲ.
-ಡಾ|ಎಸ್‌.ಎಲ್‌.ಭೈರಪ್ಪ, ಹಿರಿಯ ಕಾದಂಬರಿಕಾರ

ಟಾಪ್ ನ್ಯೂಸ್

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

Paddy 2

Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ

R Ashok (2)

BPL ಕಾರ್ಡ್‌ನಿಂದ ಎಪಿಎಲ್‌ಗೆ 6ನೇ ಗ್ಯಾರಂಟಿ: ಅಶೋಕ್‌ ಲೇವಡಿ

renukaacharya

Waq ಹೋರಾಟಕ್ಕೆ ವಿಜಯೇಂದ್ರ ತಂಡಗಳೇ ಅಧಿಕೃತ: ರೇಣುಕಾಚಾರ್ಯ

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.