ಮೈಸೂರು : ಆತಂಕ ಸೃಷ್ಟಿಸಿದ್ದ ಬಾಲಕಿ ನಾಪತ್ತೆ ಪ್ರಕರಣ ಕೊನೆಗೂ ಸುಖಾಂತ್ಯ
Team Udayavani, Dec 9, 2021, 4:07 PM IST
ಮೈಸೂರು: ನಗರದಲ್ಲಿ ಆತಂಕಕ್ಕೆ ಈಡುಮಾಡಿದ್ದ ಬಾಲಕಿ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದ್ದು, ಸಂಬಂಧಿಯೇ ಮನೆಯಲ್ಲಿ ಯಾರಿಗೂ ಹೇಳದೆ ಮಗುವನ್ನು ತನ್ನೊಂದಿಗೆ ಹೊರಗೆ ಕರೆದುಕೊಂಡು ಹೋಗಿದ್ದೇ ಅವಾಂತರಕ್ಕೆ ಕಾರಣವಾಗಿದೆ.
ನಗರದ ಯಾದವಗಿರಿ 8ನೇ ಮುಖ್ಯರಸ್ತೆಯ ದಿನೇಶ್, ಕ್ಲಾಸಿಯಾ ದಂಪತಿ ಪುತ್ರಿ ರಿಯಾ (3) ಮರಳಿ ಮನೆಗೆ ಬಂದಿದ್ದು, ಕುಟುಂಬದಲ್ಲಿ ನೆಮ್ಮದಿ ತಂದಿದೆ. ಬುಧವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಮನೆಯ ಮುಂದೆ ದಿಯಾ ಆಟವಾಡುತ್ತಿದ್ದಳೆನ್ನಲಾಗಿದೆ.
ಈ ವೇಳೆ ಸೋಮವಾರಪೇಟೆಯಿಂದ ಮನೆಗೆ ಬಂದಿದ್ದ ದಿಯಾ ಚಿಕ್ಕಪ್ಪ ಪ್ರಸನ್ನ ಅವರು, ಮನೆಯಲ್ಲಿ ಯಾರಿಗೂ ವಿಷಯ ಹೇಳದೆ ಆಕೆಯನ್ನು ಕರೆದುಕೊಂಡು ಹೋಗಿದ್ದರೆನ್ನಲಾಗಿದೆ. ಹೆಬ್ಟಾಳಿನಲ್ಲಿರುವ ತನ್ನ ಸ್ನೇಹಿತರ ಮನೆಗೆ ಮಗುವಿನೊಂದಿಗೆ ತೆರಳಿ ಅಲ್ಲಿಯೇ ವಿಶ್ರಾಂತಿ ಪಡೆದಿದ್ದರು. ಆದರೆ ಮಗು ಕಾಣದೆ ಇದ್ದುದ್ದರಿಂದ ಯಾರೋ ಅಪರಹಣ ಮಾಡಿದ್ದಾರೆ ಎಂದು
ಆತಂಕಗೊಂಡ ತಾಯಿ ಕ್ಲಾಸಿಯಾ, ಅವರು ಹುಡುಕಾಟ ನಡೆಸಿ ನಗರದ ವಿ.ವಿ.ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹೀಗಾಗಿ ಪೊಲೀಸರು ವಿವಿಧೆಡೆ ಸಂಚಾರ ನಡೆಸಿ ಮಗುವಿನ ಹುಡುಕಾಟದಲ್ಲಿ ನಿರತರಾಗಿದ್ದರು. ಬಳಿಕ ಮಗುವಿನ ಚಿಕ್ಕಪ್ಪನ ಸ್ನೇಹಿತರ ಮೊಬೈಲ್ ನಂಬರ್ ಪಡೆದು ಕರೆ ಮಾಡಿದಾಗ ಮಗು ಹೆಬ್ಟಾಳಿನಲ್ಲಿರುವುದು ತಿಳಿದು ಬಂದಿತು. ಬಳಿಕ ಅಲ್ಲಿಗೆ ತೆರಳಿ ಮಗುವನ್ನು ಮನೆಗೆ ಕರೆತರಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.