Mysuru Palace ವಾಟ್ಸ್‌ಪ್‌ನಲ್ಲೇ ಮೈಸೂರು ಅರಮನೆಯ ಟಿಕೆಟ್ ಲಭ್ಯ
Team Udayavani, Aug 14, 2024, 8:49 PM IST
ಮೈಸೂರು: ಕರ್ನಾಟಕ ಸರ್ಕಾರದ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ವತಿಯಿಂದ ಮೊಬೈಲ್ ಒನ್ ಯೋಜನೆಯ ಮೂಲಕ ಮೈಸೂರು ಅರಮನೆಯನ್ನು ವೀಕ್ಷಿಸಲು ನಾಗರಿಕರು ಸಮಯ ಮತ್ತು ಶ್ರಮವನ್ನು ಉಳಿಸಲು ಹಾಗೂ ಅತಿ ಸುಲಭವಾಗಿ ಮೈಸೂರು ಅರಮನೆ ವೀಕ್ಷಿಸಲು ಮೊಬೈಲ್ ಮೂಲಕ ಟಿಕೆಟ್ ಖರೀದಿಸಲು ವಾಟ್ಸಪ್ ಟಿಕೆಟಿಂಗ್ ತಂತ್ರಾಂಶವನ್ನು ಸರ್ಕಾರದ ಇಡಿಸಿಎಸ್ ಸಂಸ್ಥೆಯಿಂದ ಅಭಿವೃದ್ಧಿಪಡಿಸಲಾಗಿರುತ್ತದೆ.
ಸಾರ್ವಜನಿಕರು ಈ ಯೋಜನೆಯ ಸೌಲಭ್ಯವನ್ನು ಆ.14 ಬುಧವಾರದಿಂದಲೇ ಪಡೆಯಬಹುದಾಗಿದ್ದು, ಮೊ.ಸಂ: 8884160088 ಗೆ ವಾಟ್ಸಪ್‌ನಲ್ಲಿ “ಏಜಿ’ ಎಂದು ಟೈಪ್ ಮಾಡುವ ಮೂಲಕ ಅಥವಾ ಮೈಸೂರು ಅರಮನೆ ಮಂಡಳಿಯ ವೆಬ್‌ಸೈಟ್ https://mysorepalace.karnataka.gov.in ನಲ್ಲಿ ನೀಡಿರುವ ವಾಟ್ಸಪ್ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ವಾಟ್ಸಪ್ ಟಿಕೆಟನ್ನು ಖರೀದಿಸಬಹುದಾಗಿರುತ್ತದೆ. ಟಿಕೆಟ್ ಅನ್ನು ಖರೀದಿಸಿದ ದಿನದಿಂದ 5 ದಿನಗಳವರೆಗೆ ಮಾನ್ಯತೆ ಇರುತ್ತದೆ. ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಅರಮನೆಯನ್ನು ವೀಕ್ಷಿಸಬಹುದಾಗಿರುತ್ತದೆ ಎಂದು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.