ಮಿಕ್ಸಿ ಪುರಾಣ
Team Udayavani, Jun 3, 2020, 4:24 AM IST
ಮಗ ಹುಟ್ಟಿದ ಸಂದರ್ಭದಲ್ಲಿ ಮನೆಗೆ ಬಂದ ಕೆನ್‌ಸ್ಟಾರ್ ಮಿಕ್ಸರ್, ಬರೋಬ್ಬರಿ ಹದಿನಾಲ್ಕು ವರ್ಷ ಬಗೆಬಗೆಯ ಚಟ್ನಿ, ಮಸಾಲೆ, ಪುಡಿ, ಹಿಟ್ಟುಗಳನ್ನೆಲ್ಲಾ ಯಶಸ್ವಿಯಾಗಿ ರುಬ್ಬಿ, ಇನ್ನು ನನ್ನ ಕೈಲಾಗದು ಅಂತ ಉಸಿರು ಬಿಡಲು ಶುರುಮಾಡಿತ್ತು. ಆದರೂ ಅದನ್ನು ಮತ್ತಷ್ಟು ಕಾಳಜಿ ವಹಿಸಿ ನೋಡಿಕೊಂಡಿದ್ದರಿಂದ ಮತ್ತೂ ಕೆಲವು ದಿನಗಳ ಕಾಲ ಬದುಕಿತ್ತು. ಕೆಲದಿನಗಳ ನಂತರ ಮತ್ತೆ ಅದರ ಶಬ್ಧ ಜೋರಾದಾಗ, ನನ್ನ ಗಂಡನಿಗೆ ಏನನಿಸಿತೋ; ಕಪ್ಪುಸುಂದರಿ “ಪ್ರೀತಿ ಮಿಕ್ಸಿ’ಯನ್ನು ಮನೆಗೆ ತಂದರು. ನಾನು “ಪ್ರೀತಿ’ಯನ್ನೂ ಪ್ರೀತಿಯಿಂದಲೇ ಮನೆತುಂಬಿಸಿಕೊಂಡೆ.
ಅದುವರೆಗೂ ಸ್ಟಾರ್ ಆಗಿ ಮೆರೆದಿದ್ದ “ಕೆನ್ ಸ್ಟಾರ್’ ನಿಧಾನಕ್ಕೆ ಮೂಲೆ ಸೇರಿತು. ಈ “ಪ್ರೀತಿ’ಗೆ ಭಯಂಕರ ಶಕ್ತಿ. ಏನೇ ಹಾಕಿದರೂ ಕ್ಷಣಮಾತ್ರದಲ್ಲಿ ರುಬ್ಬಿ ಕೊಡುತ್ತಿತ್ತು. ಅದರ ಸೊಕ್ಕು ಎಷ್ಟಿತ್ತೆಂದರೆ, ಒಮ್ಮೊಮ್ಮೆ ಒತ್ತಿ ಹಿಡಿದ ಕೈಯನ್ನು ತಳ್ಳಿ, ಒಳಗಿದ್ದ ಪದಾರ್ಥವನ್ನು ಹೊರಗೆಲ್ಲಾ ಹಾರಿಸಿ ಬಿಡುತ್ತಿತ್ತು. ಆದರೂ ಹರೆಯದ ಮಗನನ್ನು ಸಹಿಸಿಕೊಂಡಷ್ಟೇ ಪ್ರೀತಿಯಿಂದ, ಅದನ್ನು ಸಹಿಸಿಕೊಂಡಿದ್ದೆ. ಹಾಗೂ ಹೀಗೂ ಒಂದೂವರೆ ವರ್ಷ ಆಗಿತ್ತು. ಇಂತಿಪ್ಪ ಸಮಯದಲ್ಲೇ ಜಗತ್ತಿಗೆ ಬರಬಾರದ ಅವಸ್ಥೆ ಬಂದು, ಎಲ್ಲರೂ ಮನೆಯಲ್ಲೇ ಬಂಧಿಗಳಾಗಿ, ಅಂಗಡಿ- ಮುಂಗಟ್ಟುಗಳೆಲ್ಲಾ ಮುಚ್ಚಿಹೋದವು.
ಒಂದು ದಿನ ಅದೇನು ಗ್ರಹಚಾರವೋ, ಕರೆಂಟ್ ಕೂಡಾ ಕೈಕೊಟ್ಟಿತ್ತು. ಇನ್ವರ್ಟರ್ ಸಹಾಯದಿಂದ ನಮ್ಮ ಕರಿಸುಂದರಿಯನ್ನು ತಿರುಗಿಸಿದೆ ನೋಡಿ! ಭಯಂಕರ ಚೀರಾಡಿ, ಧಡಬಡ ಶಬ್ದ ಮಾಡಿ, ಮುಂದೆ ಕೆಲಸ ಮಾಡಲಾರೆನೆಂದು ಮುಷ್ಕರ ಹೂಡಿಬಿಟ್ಟಿತ್ತು. ಹಳೆಯ ಮಿಕ್ಸಿಯಾದರೋ ಬಹಳ ಒಳ್ಳೆಯದು. ಹದಿನಾಲ್ಕು ವರ್ಷ ಕಾಲ ನಿರ್ವಂಚನೆಯಿಂದ ದುಡಿದಿತ್ತು. ಈ ಹೊಸ ಮಿಕ್ಸಿ ಥೇಡ್ “ಡೆಲಿಕೇಟ್ ಡಾರ್ಲಿಂಗ್’ನಂತೆ ಒಂದೂವರೆ ವರ್ಷಕ್ಕೇ ಸೋತುಹೋಗಿತ್ತು. ಅದರ ಆರೋಗ್ಯ ತಪಾಸಣೆ ಮಾಡಿಸೋಣವೆಂದರೆ, ಹೊರಹೋಗುವ ಹಾಗಿಲ್ಲ.
ಆಗ, “ಹಳೆಗಂಡನ ಪಾದವೇ ಗತಿ’ ಅಂತ ಹಳೆಯ ಮಿಕ್ಸರ್ ಕೆಳಗಿಳಿಸಿದೆ. ಹೊಸ ಮಿಕ್ಸಿಯ ಜಾರ್‌ಗಳನ್ನೇ ಹಳೆಯ ಮಿಕ್ಸಿಗೆ ಹಾಕಿ, ಪ್ರಯೋಗ ಆರಂಭಿಸಿದೆ. ಒಂದೆರಡು ದಿನ ಹೇಗೋ ಹೊಂದಿಕೊಂಡ ಅವು, ನಂತರ ಜಗಳಕ್ಕೆ ನಿಂತವು. ಎಷ್ಟೇ ಸಮಾಧಾನ ಮಾಡಿದರೂ ಸುಮ್ಮನಾಗಲಿಲ್ಲ. ಎಷ್ಟಾದರೂ ಜನರೇಷನ್ ಗ್ಯಾಪ್! ಮತ್ತೆ ಒಂದೆರಡು ದಿನ ಮಿಕ್ಸಿಯ ಅಗತ್ಯವಿಲ್ಲದ ಅಡುಗೆ ಮಾಡಿದೆ. ಹೊಟ್ಟೆಗೇನೋ ಸರಿ, ಆದರೆ ನಾಲಿಗೆ ಕೇಳಬೇಕಲ್ಲ!
ದಿಕ್ಕೇ ತೋಚದಂತಾಗಿ, ತಲೆ ಮೇಲೆ ಕೈ ಹೊತ್ತು ಕುಳಿತ ಸಂದರ್ಭದಲ್ಲೇ ನೆನಪಾದುದು, ಈ ಮಿಕ್ಸಿಗಳ ಮುತ್ತಜ್ಜಿ! ಬಹಳ ವರ್ಷಗಳಿಂದ, ತನ್ನ ಅಸ್ತಿತ್ವವನ್ನೇ ಮರೆತು ಮೂಲೆ ಹಿಡಿದಿದ್ದ ಒರಳುಕಲ್ಲಿನ ನೆನಪಾದದ್ದೇ- ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಕ್ಕಿಬಿಟ್ಟಿತು. ಒರಳುಕಲ್ಲಿನಲ್ಲಿ ರುಬ್ಬಿ ಮಾಡಿದ ಅಡುಗೆಯ ರುಚಿಗೆ ಸಾಟಿಯಿಲ್ಲ ಎಂಬ ಮಾತಿಗಿರುವ ಅರ್ಥ ನನಗೀಗ ಅನುಭವಕ್ಕೆ ಬಂತು. ಎಲ್ಲ ಕೆಲಸಗಳಿಗೂ ಯಂತ್ರಗಳನ್ನು ಅವಲಂಬಿಸಿರುವ ನನ್ನಂಥವರಿಗೆ, ಪ್ರಕೃತಿ ಹೀಗೆ ಪಾಠ ಕಲಿಸುತ್ತಿದೆಯಾ ಅನ್ನಿಸುತ್ತಿದೆ.
* ಡಾ. ಮಾನಸ ಕೀಳಂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.