ನಾಗರಹೊಳೆಯಲ್ಲಿ ಮೊದಲ ಹಂತದ ಗಣತಿ ಮುಕ್ತಾಯ: ಮಲ,ಹಿಕ್ಕೆ, ಲದ್ದಿ ಸಂಗ್ರಹ, ಆ್ಯಪ್ ಮೂಲಕ ದಾಖಲು
Team Udayavani, Jan 25, 2022, 8:43 PM IST
ಹುಣಸೂರು : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಗಣತಿಯ ಮೊದಲ ಹಂತದ ಮೂರು ದಿನಗಳ ಕಾಲ ದೊಡ್ಡ ಸಸ್ಯಹಾರಿ ಪ್ರಾಣಿಗಳ ಹಾಗೂ ಮಾಂಸಹಾರಿ ಸೈನ್ ಸರ್ವೆ ಅಂತ್ಯಗೊಂಡಿದ್ದು, ಸಿಬ್ಬಂದಿಗಳು, ಲದ್ದಿ, ಮಲ, ಹಿಕ್ಕೆಯನ್ನು ಸಂಗ್ರಹಿಸಿದರು, ಪ್ರಾಣಿಗಳ ಹೆಜ್ಜೆಗುರುತು, ಮರಪರಚಿರುವುದನ್ನು ಸಿಬ್ಬಂದಿಗಳು ಎಂ-ಸ್ಟ್ರೈಪ್ಸ್ ಎಕೊಲಾಜಿಕಲ್(ಆ್ಯಪ್) ಅಪ್ಲಿಕೇಷನ್‌ನಲ್ಲಿ ದಾಖಲಿಸಿದರು.
ಕಳೆದ ಮೂರು ದಿನ ಹಲವು ವಲಯಗಳಲ್ಲಿ ಹುಲಿ ಹಾಗೂ ಬೃಹತ್ ಸಸ್ಯಹಾರಿ ಪ್ರಾಣಿಗಳಾದ ಆನೆ, ಕಾಡೆಮ್ಮೆ ಮತ್ತಿತರ ಪ್ರಾಣಿಗಳು ನೇರವಾಗಿ ಕಾಣಿಸಿಕೊಂಡಿದ್ದನ್ನು ಆಪ್‌ನಲ್ಲಿ ದಾಖಲಿಸಿದರು.
ಹುಲಿ ಪತ್ತೆ, ದಾಖಲು :
ಪ್ರಥಮ ಹಂತದ ಮೂರು ದಿನಗಳ ಕಾಲ ಗಣತಿಯಲ್ಲಿ ನಿತ್ಯ ಉದ್ಯಾನದ 91 ಬೀಟ್‌ಗಳಲ್ಲೂ 5ಕಿ.ಮೀ.ವರೆಗೆ ಮೂವರು ಅರಣ್ಯ ಸಿಬ್ಬಂದಿಗಳ ತಂಡ ಗಣತಿ ನಡೆಸಿದೆ. ಮತ್ತಿಗೋಡು ವಲಯದಲ್ಲಿ ಮಂಗಳವಾರದಂದು ಹುಲಿ ಜಿಂಕೆಯನ್ನು ಭೇಟೆಯಾಡಿರುವುದು ಪತ್ತೆಯಾಗಿದೆ. ಕಲ್ಲಹಳ್ಳ ವಲಯದಲ್ಲಿ ಸೋಮವಾರ-ಮಂಗಳವಾರ ಸಹ ಹುಲಿ ಗಣತಿದಾರರಿಗೆ ನೇರವಾಗಿ ಕಾಣಿಸಿಕೊಂಡಿದೆ. ಇದೇ ರೀತಿ ಗಣತಿ ಸಿಬ್ಬಂದಿಗಳಿಗೆ ನಾಗರಹೊಳೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ಅಂತರಸಂತೆ, ಹುಣಸೂರು ವಲಯಗಳಲ್ಲಿ ಹುಲಿ ಕಾಣಿಸಿಕೊಂಡಿದ್ದರೆ, ವೀರನಹೊಸಹಳ್ಳಿ ವಲಯದಲ್ಲಿ ಜಾರ್‌ಗಲ್ – ತುಪ್ಪದಕೊಳ ಗಸ್ತಿನ ಅಂಚಿನಲ್ಲಿ ಹುಲಿ ಘರ್ಜಿಸಿರುವುದನ್ನು ಸಹ ದಾಖಲಿಸಿದ್ದಾರೆ. ಇದೇ ರೀತಿ ಎಲ್ಲ ವಲಯಗಳಲ್ಲೂ ಆನೆ, ಕಾಡೆಮ್ಮೆ ನೇರ ಕಾಣಿಸಿಕೊಂಡಿರುವುದನ್ನು ಆ್ಯಪ್ ನಲ್ಲಿ ದಾಖಲಿಸಿದ್ದಾರೆ.
ರಣಹದ್ದು ವೀಕ್ಷಣೆ : ಅಲ್ಲದೆ ರಣಹದ್ದುಗಳು ಮತ್ತು ಇತರೆ ಪಕ್ಷಿಗಳನ್ನು ವೀಕ್ಷಿಸಿ, ಅವುಗಳನ್ನು ಕೂಡ ದಾಖಲೆ ಮಾಡಿದ್ದಾರೆ.
ಲದ್ದಿ, ಹಿಕ್ಕೆ ಡೆಹರಾಡೂನ್‌ಗೆ ರವಾನೆ:
ಎಲ್ಲ ವಲಯಗಳಲ್ಲೂ ಹುಲಿ, ಆನೆ, ಕಾಡೆಮ್ಮೆ ಮತ್ತಿತರ ದೊಡ್ಡ ಸಸ್ಯಹಾರಿ ಪ್ರಾಣಿಗಳ ಮಲ, ಹಿಕ್ಕೆ ಹಾಗೂ ಲದ್ದಿಯನ್ನು ಆಪ್‌ನಲ್ಲಿ ದಾಖಲಿಸಿ ಡೆಹರಾಡೂನ್‌ನ ವೈಲ್ಡ್ ಲೈಫ್ ಇನ್ಸಿಟ್ಯೂಟ್ ಆಫ್ ಇಂಡಿಯಾಗೆ ಕಳುಹಿಸಲು ಸಂಗ್ರಹಿಸಿದರು. ಇನ್ನು ಅವುಗಳ ಹೆಜ್ಜೆ, ಗಡಿ ಗುರುತಿಸುವಿಕೆ, ಮರಗಳನ್ನು ಪರಚಿರುವ ಗುರುತನ್ನು ಪತ್ತೆಹಚ್ಚಿ ಆ್ಯಪ್ ನಲ್ಲಿ ದಾಖಲಿಸಿದರು.
ಜ.27 ರಿಂದ ಲೈನ್ ಟ್ರ್ಯಾಕ್ ಜಾಕ್ಟ್:
ಜ.27 ರಿಂದ ಫೆ.1 ರವರೆಗೆ 105 ಲೈನ್ ಟ್ರ್ಯಾಕ್ ಜಾಕ್ಟ್ ಮೂಲಕ ಎರಡು ಕಿ.ಮೀ.ವರೆಗೆ ಸಂಚರಿಸಿ ಹುಲಿಯ ಆಹಾರವಾದ ಸಸ್ಯಹಾರಿ ಪ್ರಾಣಿಗಳ ಹಾಗೂ ಸಸ್ಯಪ್ರಭೇಧಗಳ ಗಣತಿ ನಡೆಯಲಿದೆ ಎಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.