ಮಳೆಗಾಲಕ್ಕೆ ಸಜ್ಜುಗೊಂಡಿಲ್ಲ ನಾಗೋಡಿ ಘಾಟಿ
ಅಲ್ಲಲ್ಲಿ ಕುಸಿಯುವ, ಮರಗಳು ರಸ್ತೆಗೆ ಉರುಳುವ ಆತಂಕ
Team Udayavani, May 27, 2024, 7:40 AM IST
ಕುಂದಾಪುರ:ಮುಂಗಾರು ಮಳೆ ಆರಂಭಕ್ಕೆ ಕೆಲವೇ ದಿನ ಬಾಕಿ. ಆದರೆ ಬೈಂದೂರು – ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766 ಸಿ ಹಾದುಹೋಗುವ ಕೊಲ್ಲೂರು ಸಮೀಪದ ನಾಗೋಡಿ ಘಾಟಿ ಮಾತ್ರ ಇನ್ನೂ ಮಳೆಗಾಲವನ್ನು ಸ್ವಾಗತಿಸಲು ಸಜ್ಜುಗೊಂಡಿಲ್ಲ. ಅಲ್ಲಲ್ಲಿ 2-3 ಕಡೆಗಳಲ್ಲಿ ಕುಸಿಯುವ ಭೀತಿಯಿದ್ದರೆ ಕೆಲವು ಕಡೆಗಳಲ್ಲಿ ಮರಗಳು ರಸ್ತೆಗೆ ಉರುಳುವ ಆತಂಕವೂ ಇದೆ.
ಕರಾವಳಿಯಿಂದ ಮಲೆನಾಡು ಮಾತ್ರವಲ್ಲದೆ, ರಾಜಧಾನಿ ಬೆಂಗಳೂರು ಮತ್ತಿತರ ಊರುಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿಗಳಲ್ಲಿ ನಾಗೋಡಿ ಘಾಟಿಯೂ ಒಂದು. ಹಲವು ಕಡೆಗಳಲ್ಲಿ ರಸ್ತೆಗೆ ಬಾಗಿರುವ ಅಪಾಯಕಾರಿ ಮರಗಳ ಕಟಾವು ಅಥವಾ ಮರಗಳ ಗೆಲ್ಲು ಕಡಿದು ರಸ್ತೆಗೆ ಬೀಳದಂತೆ ಎಚ್ಚರ ವಹಿಸುವ ಯಾವುದೇ ಕಾರ್ಯ ಆಗಿಲ್ಲ. ಕಳೆದ ಬಾರಿ ಉರುಳಿದ ಮರಗಳ ಗೆಲ್ಲುಗಳನ್ನೇ ಪೂರ್ಣ ಪ್ರಮಾಣದಲ್ಲಿ ರಸ್ತೆ ಬದಿಯಿಂದ ತೆರವುಗೊಳಿಸಿಲ್ಲ!
ಮರ ಬಿದ್ದರೂ ಕೇಳುವವರೇ ಇಲ್ಲ
ಈ ಘಾಟಿಯಲ್ಲಿ ರಸ್ತೆಗೆ ಬೃಹತ್ ಗಾತ್ರದ ಮರ ಬಿದ್ದರೂ ಯಾರೂ ಬಾರದಿರುವ ಪರಿಸ್ಥಿತಿಯಿದೆ. ಒಂದೋ ಕೊಲ್ಲೂರಿನಿಂದ ಅಥವಾ ಶಿವಮೊಗ್ಗದಿಂದ ಬರಬೇಕಿದೆ. ಗಾಳಿ – ಮಳೆಗೆ ಮರ ಬಿದ್ದರಂತೂ ಘಾಟಿ ದಿನಪೂರ್ತಿ ಅಥವಾ ಕೆಲವು ಗಂಟೆಗಳ ಕಾಲ ಬಂದ್ ಆಗುವುದಂತೂ ನಿಶ್ಚಿತ.
14 ಕಿ.ಮೀ. ಘಾಟಿ ಪ್ರದೇಶ
ಉಡುಪಿ ಹಾಗೂ ಶಿವಮೊಗ್ಗ ಎರಡೂ ಜಿಲ್ಲೆಯನ್ನು ಬೆಸೆಯುವ ಈ ಘಾಟಿಯು ಒಟ್ಟು 14 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಎರಡು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕೊಲ್ಲೂರು ಹಾಗೂ ಸಿಗಂದೂರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ನಿತ್ಯ ಸಾವಿರಾರು ವಾಹನಗಳು ಈ ಮೂಲಕ ಸಂಚರಿಸುತ್ತವೆ. ಬೆಂಗಳೂರಿನಿಂದ ಸಾಗರ ಮೂಲಕವಾಗಿ ಕೊಲ್ಲೂರು, ಕುಂದಾಪುರಕ್ಕೆ ಈ ಘಾಟಿ ಮೂಲಕ ಬಸ್ ಸಂಚರಿಸುತ್ತವೆ. ಶಿವಮೊಗ್ಗ, ಹೊಸನಗರ ಕಡೆಯಿಂದ ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳಕ್ಕೆ ತೆರಳಬೇಕಾದರೂ ಇದೇ ಮಾರ್ಗವಾಗಿ ಸಂಚರಿಸಬೇಕು.
ಒಂದೆರಡು ಕಡೆ ಕುಸಿಯುವ ಭೀತಿ
ನಾಗೋಡಿ ಘಾಟಿಯ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯ 7 ಕಿ.ಮೀ.ನ ಬಹುಭಾಗ ಕಾಂಕ್ರೀಟಿಕರಣಗೊಂಡಿದ್ದು, ಒಂದು ಬದಿಯಿಂದ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ. ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ 7 ಕಿ.ಮೀ. ಡಾಮರೀಕರಣ ಮಾತ್ರ ಮಾಡಲಾಗಿದೆ. ಒಂದೆರಡು ಕಡೆಗಳಲ್ಲಿ ಜರ್ಜರಿತಗೊಂಡು ಗುಡ್ಡ ಕುಸಿದು, ಮಣ್ಣು ಹೆದ್ದಾರಿಗೆ ಬರುವ ಅಪಾಯವೂ ಇದೆ.
ಮಳೆಗಾಲದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಘಾಟಿಯಲ್ಲಿ ಸುಗಮ ಸಂಚಾರಕ್ಕೆ ಸಕಲ ರೀತಿಯ ಕ್ರಮ ಕೈಗೊಳ್ಳಲಾಗುವುದು.
– ಮಂಜುನಾಥ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಶೃಂಗೇರಿ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.