Nandalike Siri Jatre: ಇಂದು ನಂದಳಿಕೆ ಸಿರಿ ಜಾತ್ರೆ
Team Udayavani, Apr 6, 2023, 6:32 AM IST
ಬೆಳ್ಮಣ್: ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಂದಳಿಕೆ ಅಯನೋತ್ಸವ, ಸಿರಿಜಾತ್ರಾ ವೈಭವ ಎ. 6ರಂದು ನಡೆಯಲಿದೆ.
ಕ್ಷೇತ್ರದ ಉರಿಬ್ರಹ್ಮ, ಗಣಪತಿ, ವೀರಭದ್ರ, ನಂದಿಗೋಣ, ಸಿರಿ ಕುಮಾರ, ಅಬ್ಬಗ-ದಾರಗ, ಖಡ್ಗೇಶ್ವರೀ, ರಕ್ತೇಶ್ವರೀ, ಚಾಮುಂಡಿ, ಅಣ್ಣಪ್ಪ, ಕ್ಷೇತ್ರಪಾಲ, ಭೂತರಾಜ, ಗಜಮಲ್ಲ, ಮಹಾನಾಗ ರಾಜ ಸ್ವಾಮಿ ಸನ್ನಿಧಿಗಳಲ್ಲಿ ಪೂಜೆ ನಡೆಯಲಿದೆ.
ಬೆಳಗ್ಗೆ 8ರಿಂದ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ಹಸಿರು ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ನಂದಳಿಕೆ ಚಾವಡಿ ಆರಮನೆಯಿಂದ ಶ್ರೀ ಹೆಗ್ಡೆಯವರ ಆಗಮನ, ರಾತ್ರಿ 10.30ರಿಂದ ಅಯನೋತ್ಸವ ಬಲಿ, ಕೆರೆ ದೀಪೋತ್ಸವ, ಕೆರೆದೀಪ ಕಟ್ಟೆಪೂಜಾ ಮಹೋತ್ಸವ, ರಾತ್ರಿ 11ರಿಂದ ಶ್ರೀ ಆಲಡೆ ಸನ್ನಿಧಿಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿಜಾತ್ರೆ ಪ್ರಾಚೀನ ವಿಧಿ ವೈಭವಗಳು, ಬ್ರಹ್ಮಮಂಡಲ ಸೇವೆ, ಬೆಳಗಿನ ಬಲಿ, ಭೂತ ಬಲಿ ಇತ್ಯಾದಿ ನಡೆಯಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.