ನರೇಂದ್ರ ಮೋದಿ ಪ್ರಧಾನಿ ಆಗಲು ಚೌಡೇಶ್ವರಿ ದೇವಿಯ ಆಶೀರ್ವಾದ
Team Udayavani, May 23, 2019, 6:00 AM IST
ತಿಪಟೂರು: ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ತ್ರಾಸದಾಯಕ. ಆದರೂ, ಅವರಿಗಿರುವ ಎಡರುತೊಡರುಗಳನ್ನು ಸರಿಪಡಿಸಿ, ಅವರು ಪ್ರಧಾನಿಯಾಗಲು ನಾನು ಆಶೀರ್ವದಿಸುತ್ತೇನೆ. ಇದು ದಸರೀಘಟ್ಟ ಶ್ರೀಚೌಡೇಶ್ವರಿ ದೇವಿಯ ಭವಿಷ್ಯ ವಾಣಿ. ಕಳೆದ 4-5 ದಿನಗಳ ಹಿಂದೆ ಭಕ್ತರೊಬ್ಬರು ಈ ಬಾರಿ ಮೋದಿ ಪ್ರಧಾನಿಯಾಗ್ತಾರಾ ಎಂದು ದೇವಿಯನ್ನು ಪ್ರಶ್ನೆ ಮಾಡಿ ಭವಿಷ್ಯ ಕೇಳಿದ್ದಕ್ಕೆ, ದೇವಿ ನೀಡಿದ ವಚನವಿದು.
ಈ ಹಿಂದೆ ನರ್ಮದಾ ನದಿಗೆ ಕಟ್ಟಿರುವ ಅಣೆಕಟ್ಟು ಎತ್ತರಿಸಬಾರದೆಂದು ನರ್ಮದಾ ಬಚಾವೋ ಆಂದೋಲನದ ಮೇಧಾ ಪಾಟ್ಕರ್ ನಡೆಸುತ್ತಿದ್ದ ಉಪವಾಸ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಕಂಗೆಡಿಸಿತ್ತು. ಈ ಸಂಬಂಧ ಪರಿಹಾರ ಪಡೆಯಲು ಮೋದಿ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಕೇಂದ್ರಕ್ಕೆ 2006ರಲ್ಲಿ ದಸರೀಘಟ್ಟ ಶ್ರೀಚೌಡೇಶ್ವರಿ ದೇವಿಯನ್ನು ಕರೆಸಿಕೊಂಡು ಶಾಸ್ತ್ರ ಕೇಳಿದ್ದರು.
ಚೌಡೇಶ್ವರಿ ದೇವಿಯ ಮೂರ್ತಿಯನ್ನು ಶಾಖಾಮಠದ ಆಗಿನ ಪ್ರಭುಲಿಂಗನಾಥ ಸ್ವಾಮೀಜಿ ಹಾಗೂ 19 ಜನ ಬೆಂಗಳೂರಿಗೆ ಕರೆದೊಯ್ದಿದ್ದರು. ಆರ್ಟ್ ಅಫ್ ಲಿವಿಂಗ್ನ ರವಿಶಂಕರ್ ಗುರೂಜಿ ಹಾಗೂ ಮೋದಿ ಬೆಂಗಳೂರಿನಲ್ಲಿ ಪ್ರಭು ಲಿಂಗನಾಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ದೇವಿಯನ್ನು ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ್ದರು. ಸ್ವತ: ವಿಗ್ರಹ ಹಿಡಿದು ಅವರು ಕೇಳಿದ್ದ ಭವಿಷ್ಯದಲ್ಲಿ, ಮೋದಿಗೆ ಶತ್ರುಗಳು ಜಾಸ್ತಿ. ಮುಂದೆ ಅವರ ಆರೋಗ್ಯ ಸುಧಾರಿಸುತ್ತದೆ. ಮತ್ತೆ ಚುನಾವಣೆ ನಡೆದರೆ ಮೋದಿ ಕೇಂದ್ರದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ ಎಂದು ನುಡಿಯಲಾಗಿತ್ತು. ಬಳಿಕ, ಮೋದಿ ಪ್ರಧಾನಿಯಾಗಿ 5 ವರ್ಷ ಪೂರೈಸಿದ್ದಾರೆ.
ಆದರೆ, ಪ್ರಧಾನಿಯಾದ ಬಳಿಕ ತುಮಕೂರು ಜಿಲ್ಲೆಗೆ 3 ಬಾರಿ ಮೋದಿ ಬಂದಿದ್ದರೂ ಕ್ಷೇತ್ರಕ್ಕೆ ಬರಲಿಲ್ಲ ಎಂಬುದು ಭಕ್ತರ ಅಳಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.