ಜಾಗತಿಕ ಮಟ್ಟದ ಸ್ಪರ್ಧೆಗೆ ಎನ್‌ಇಪಿ ಪೂರಕ


Team Udayavani, Oct 6, 2021, 6:15 AM IST

ಜಾಗತಿಕ ಮಟ್ಟದ ಸ್ಪರ್ಧೆಗೆ ಎನ್‌ಇಪಿ ಪೂರಕ

ಪ್ರಸಕ್ತ ಸಾಲಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ‌ ನಿರ್ಧರಿಸಿದೆ. ಈ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿಕೊಂಡಿರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯಕ್ರಮದಲ್ಲಿನ ಹೊಸ ವಿಷಯಗಳ ಕುರಿತು “ಉದಯವಾಣಿ’ಯು ಮುಂದಿಟ್ಟಿರುವ ಪಂಚಪ್ರಶ್ನೆಗಳಿಗೆ ಕುಲಪತಿಗಳ ಉತ್ತರ ಇಲ್ಲಿದೆ..

ಪಂಚ ಪ್ರಶ್ನೆಗಳು
1. ಎನ್‌ಇಪಿ ಅನುಷ್ಠಾನಕ್ಕೆ ಸಿದ್ಧತೆ ಹೇಗಿದೆ? 2. ಎನ್‌ಇಪಿ ಅನುಷ್ಠಾನಕ್ಕೆ ಸಂಬಂ ಧಿಸಿದಂತೆ ವಿದ್ಯಾರ್ಥಿಗಳು, ಉಪನ್ಯಾಸಕರಲ್ಲಿಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಯಾವುವು? 3. ಎನ್‌ಇಪಿ ಅನುಷ್ಠಾನದ ಅನಂತರ ಪಠ್ಯಕ್ರಮದಲ್ಲಿ ಆಗಬಹುದಾದ ಬದಲಾವಣೆ ಏನು? 4. ಎನ್‌ಇಪಿ ಅನುಷ್ಠಾನದ ಅನಂತರ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೇಗೆ ಸುಧಾರಿಸ ಲಿದೆ ಮತ್ತು ಉಪನ್ಯಾಸಕರ ಕೊರತೆ ಅನುಷ್ಠಾನಕ್ಕೆ ಅಡ್ಡಿಯಾಗಲಿದೆಯೇ? 5. ಎನ್‌ಇಪಿಯಿಂದ ಮೂರು ವರ್ಷವೂ ಎಕ್ಸಿಟ್‌ ಇರುವುದರಿಂದ ಉನ್ನತ ಶಿಕ್ಷಣದಲ್ಲಿ ಡ್ರಾಪ್‌ಔಟ್‌ ಹೆಚ್ಚಾಗುವ ಆತಂಕ ಇದೆಯೇ?

ವಿದ್ಯಾರ್ಥಿ ಬಳಿ ಓದಿನ ಪ್ರಮಾಣಪತ್ರ ಇದ್ದೇ ಇರುತ್ತದೆ
1.ನೂತನ ಶಿಕ್ಷಣ ನೀತಿ ಅನ್ವಯ ಹೊಸ ವಿಶ್ವವಿದ್ಯಾನಿಲಯಕ್ಕೆ ಹೊಸ ನಿಯಮಾವಳಿಗಳನ್ನು ಈಗಾಗಲೇ ಸಿದ್ಧಪಡಿಸಿಕೊಳ್ಳಲಾಗಿದೆ. ಇದಕ್ಕೆ ಸಿಂಡಿಕೇಟ್‌ ಮತ್ತು ವಿದ್ಯಾ ಪರಿಷತ್‌ನಲ್ಲಿ ಅನುಮೋದನೆ ಸಿಕ್ಕಿದೆ. ಮುಂದಿನ ಕ್ರಮಕ್ಕೆ ಸರಕಾರಕ್ಕೆ ರವಾನೆ ಮಾಡಲಾಗುತ್ತಿದೆ. ಗುಲಬರ್ಗಾ ವಿಶ್ವವಿದ್ಯಾನಿಲಯದ ವ್ಯಾಪ್ತಿಯ 350 ಕಾಲೇಜುಗಳಲ್ಲಿ ಅನುಷ್ಠಾನವಾಗಲಿದೆ.

2.ಎನ್‌ಇಪಿ ಬಗ್ಗೆ ಗೊಂದಲಗಳ ನಿವಾರಣೆಗಾಗಿ ಎಲ್ಲ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮ ಹಮ್ಮಿ ಕೊಳ್ಳಲಾಗುತ್ತಿದೆ. ಜತೆಗೆ ಜಿಲ್ಲಾಮಟ್ಟದಲ್ಲೂ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

3.ಈ ಹಿಂದೆ ಪದವಿ ಹಂತದಲ್ಲಿ ಮೂರು ಪ್ರಮುಖ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿ ಕೊಳ್ಳುತ್ತಿದ್ದರು. ಈಗ 2 ವರ್ಷಕ್ಕೆ 2 ಪ್ರಮುಖ ವಿಷಯಗಳು ಮಾತ್ರ ಇರುತ್ತವೆ. ಮೂರನೇ ವರ್ಷದಲ್ಲಿ ಕೌಶಲಕ್ಕೆ ಸಂಬಂಧಿಸಿದ ಒಂದೇ ವಿಷಯದಲ್ಲಿ ಆಳವಾದ ಅಧ್ಯಯನ ಇರಲಿದೆ.

4.ಗುಣಮಟ್ಟದ ಶಿಕ್ಷಣಕ್ಕೆ ಹೊಸ ಶಿಕ್ಷಣ ನೀತಿ ಪೂರಕವಾಗಲಿದೆ. ಪಠ್ಯ, ಪ್ರಾಯೋಗಿಕ ಕಾರ್ಯಕ್ಕೂ ಹೆಚ್ಚು ಒತ್ತು ನೀಡುವುದರಿಂದ ಗುಣಮಟ್ಟ ಹೆಚ್ಚಲು ಸಾಧ್ಯವಾಗಲಿದೆ. ಈಗಾಗಲೇ ಎಲ್ಲ ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರು ಇರುವುದರಿಂದ ಉಪನ್ಯಾಸಕರ ಕೊರತೆ ಅಡ್ಡಿಯಾಗದು. ಆದರೆ ಕೌಶಲ ವೃದ್ಧಿ ಮತ್ತು ಪ್ರಾಯೋಗಿಕ ಕಾರ್ಯಕ್ಕೆ ಉಪನ್ಯಾಸಕರು ಬೇಕಾಗುತ್ತದೆ. ಅವರನ್ನು ಅತಿಥಿ ಉಪನ್ಯಾಸಕರ ರೂಪದಲ್ಲಿ ಪೂರೈಸಿಕೊಳ್ಳಬೇಕಾಗುತ್ತದೆ.

5.ಎಕ್ಸಿಟ್‌ ಕಾರಣದಿಂದ ಡ್ರಾಪ್‌ಔಟ್‌ ಹೆಚ್ಚಾಗುತ್ತದೆ ಎಂಬುದು ಕೇವಲ ಊಹೆ ಮಾತ್ರ. ಆ ರೀತಿ ಏನೂ ಆಗದು. ಅನಿವಾರ್ಯ ಕಾರಣದಿಂದ ಡ್ರಾಪ್‌ಔಟ್‌ ಆದರೂ ವಿದ್ಯಾರ್ಥಿ ಬಳಿ ಓದಿನ ಪ್ರಮಾಣಪತ್ರ ಇದ್ದೇ ಇರುತ್ತದೆ.

ಗೊಂದಲಕ್ಕೆ ಆಸ್ಪದವಿಲ್ಲ
1.ಕಾನೂನು ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನ ಕುರಿತು ಅಖೀಲ ಭಾರತೀಯ ವಕೀಲರ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ಕಾನೂನು ಶಿಕ್ಷಣದಲ್ಲಿ ಹೊಸ ಶಿಕ್ಷಣ ನೀತಿ ಅನುಷ್ಠಾನ, ಪೂರ್ವಸಿದ್ಧªತೆ ಹೀಗೆ ಪ್ರತೀ ವಿಷಯಗಳ ಕುರಿತು ಅಧ್ಯಯನ ಮಾಡಲು ವಿವಿಯಿಂದ ಟಾಸ್ಕ್ಫೋರ್ಸ್‌ ರಚಿಸಲಾಗಿದೆ. ಈ ಸಮಿತಿ ಅಕಾಡೆಮಿಕ್‌ ಕೌನ್ಸಿಲ್‌ಗೆ ವಿವರವಾದ ವರದಿ ನೀಡಲಿದೆ. ಇದರ ಆಧಾರದ ಮೇಲೆ ಪಠ್ಯಕ್ರಮ ಪರಿಷ್ಕರಣೆ ಸೇರಿ ಪ್ರತಿಯೊಂದು ಕಾರ್ಯ ಕೈಗೊಳ್ಳಲಿದ್ದೇವೆ.

2.ಕಾನೂನು ವಿವಿಗಳಲ್ಲಿ ಮೂರು ಹಾಗೂ ಐದು ವರ್ಷದ ಕೋರ್ಸ್‌ಗಳಿವೆ. ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿ ಕಾನೂನು ಕೋರ್ಸ್‌ ಕಲಿಕೆ ಸಾಧ್ಯವಿಲ್ಲ. ಈ ಕುರಿತು ಯಾವುದೇ ನಿರ್ಧಾರಗಳು ಆಗಿಲ್ಲ.

3.ಹೊಸ ಶಿಕ್ಷಣ ನೀತಿ ಜಾರಿಯಿಂದ ಪಠ್ಯಕ್ರಮದಲ್ಲಿ ದೊಡ್ಡ ಬದಲಾವಣೆಯಾ ಗಲಿದೆ. ಜಾಗತಿಕ ಮಟ್ಟದ ಸ್ಪರ್ಧೆಗೆ ಪೂರಕವಾಗಿ ಶಿಕ್ಷಣ ನೀಡುವುದು. ಹೊಸ ಕೋರ್ಸ್‌ಗಳ ಪರಿಚಯ, ಸಂಶೋಧನಾತ್ಮಕ ಪ್ರಬಂಧಗಳ ಹೆಚ್ಚಳ, ಮಾಹಿತಿ ತಂತ್ರಜ್ಞಾನ ಬಳಸಿ ಕಾನೂನು ಸೇವೆ ನೀಡುವುದು. ಕಾನೂನು ಸೇವೆಯಿಂದ ದೂರ ಉಳಿದವರಿಗೆ ಸೇವೆ ದೊರಕಿಸಿಕೊಡುವ, ಸಣ್ಣಪುಟ್ಟ ಕಾನೂನು ತೊಡಕುಗಳ ನಿವಾರಣೆಗೆ ಮೂಲಕ ಕಲಿಕೆಯಲ್ಲಿ ಸಾಮಾಜಿಕ ಜವಾಬ್ದಾರಿ ಕಲಿಯುವರು.

4.ಪಠ್ಯಕ್ರಮ ಬದಲಾವಣೆ, ಜಾಗತಿಕ ಮಟ್ಟದ ಸ್ಪರ್ಧೆಗೆ ಪೂರಕವಾಗಿ ಕಲಿಕೆ, ದ್ವಿಭಾಷಾ ಅಧ್ಯಯನದಿಂದ ಕಾನೂನು ಶಿಕ್ಷಣ ಸಾಕಷ್ಟು ಸುಧಾರಿಸಲಿದೆ. ವೃತ್ತಿಪರ, ಪ್ರಾಚೀನ ಕಾನೂನು, ಕಲಿಕೆ ಹಂತದಲ್ಲಿ ಸಾಮಾಜಿಕ ಜವಾಬ್ದಾರಿಯಂತಹ ಅಧ್ಯಯನ, ಹೊಸ ವಿಷಯಗಳ ಕಲಿಕೆ ಗುಣ ಮಟ್ಟ ಸುಧಾರಿಸಲಿದೆ. ಈಗಿರುವ ಉಪನ್ಯಾಸಕರಂತೆ ಬದಲಾಗುವ ಪಠ್ಯಕ್ರಮಗಳಿಗೆ ಪೂರಕವಾಗಿ ಉಪನ್ಯಾಸಕರು, ಪ್ರಾಧ್ಯಾಪಕರು ಬೇಕಾಗುತ್ತಾರೆ.

5.ಹೊಸ ಶಿಕ್ಷಣ ನೀತಿಯಲ್ಲಿರುವ ಎಕ್ಸಿಟ್‌ ಎನ್ನುವ ಪಾಲಿಸಿಗೆ ಸಂಬಂಧಿಸಿದಂತೆ ಬಾರ್‌ ಕೌನ್ಸಿಲ್‌ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವ ಸ್ಪಷ್ಟತೆ ಇಲ್ಲ. ಕಾನೂನು ಪದವಿಗಳಲ್ಲಿ ಹೆಚ್ಚಾಗಿ ಡ್ರಾಪ್‌ಔಟ್‌ ಆಗುವುದು ಕಡಿಮೆ. ಪದವಿ ಮುಗಿಸಿಕೊಂಡು ಮೂರು ವರ್ಷದ ಕಾನೂನು ಕೋರ್ಸ್‌ಗೆ ಸೇರಿದವರು ಯಾವುದಾದರೂ ನೌಕರಿ ಪಡೆದು ಡ್ರಾಪ್‌ಔಟ್‌ ಆಗುತ್ತಾರೆಯೇ ವಿನಃ ಕಾನೂನು ಕೋರ್ಸ್‌ ಪೂರ್ಣಗೊಳಿಸಬೇಕೆಂದು ಬಂದವರು ಕೋರ್ಸ್‌ ಬಿಡುವುದಿಲ್ಲ.

ಇದನ್ನೂ ಓದಿ:ರಾಷ್ಟ್ರ ರಾಜಕಾರಣದಲ್ಲಿ‌ ನನಗೆ ಆಸಕ್ತಿ‌ ಇಲ್ಲ‌ : ಸಿದ್ದರಾಮಯ್ಯ

ಮಹಾವಿದ್ಯಾಲಯಗಳು ಸೂಕ್ತವಾಗಿ ಸ್ಪಂದಿಸಲಿವೆ
1.ನೂತನ ರಾಷ್ಟ್ರೀಯ ಶಿಕ್ಷಣ ಯೋಜನೆ ಅನುಷ್ಠಾನಕ್ಕೆ ಭರದಿಂದ ಸಿದ್ಧತೆ ಸಾಗಿದೆ. ಈಗಾಗಲೇ ಹಲವು ಬಾರಿ ಪ್ರಾಂಶುಪಾಲರ ಜತೆ ಚರ್ಚಿಸಲಾಗಿದೆ. ಹಾಗೆಯೇ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಜತೆ ನಿರಂತರ ಸಂಪರ್ಕದಲ್ಲಿದ್ದು, ಈ ಕುರಿತ ನಿರ್ದೇಶನಗಳನ್ನು ಅನುಸರಿಸಲಾಗುತ್ತದೆ. ಪ್ರವೇಶಾವಕಾಶಗಳು ಎಲ್ಲ ಮಹಾವಿದ್ಯಾಲಯಗಳಲ್ಲಿ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ದೊರೆಯಲಿದೆ. ಮಹಾವಿದ್ಯಾಲಯಗಳು ಇದಕ್ಕೆ ಸೂಕ್ತವಾಗಿ ಸ್ಪಂದಿಸುತ್ತವೆ.

2.ಪ್ರತೀ ಮಹಾವಿದ್ಯಾಲಯದಲ್ಲೂ ಸಹಾಯವಾಣಿ-ಸಹಾಯ ಕೇಂದ್ರ ಸ್ಥಾಪಿಸಿದ್ದು, ನುರಿತ ಶಿಕ್ಷಕ ಸಿಬಂದಿ ವಿದ್ಯಾರ್ಥಿನಿಯರ ಗೊಂದಲ ನಿವಾರಿಸುತ್ತಾರೆ. ಕುಲಪತಿಯಾಗಿ ಯುಟ್ಯೂಬ್‌ ಚಾನೆಲ್‌ ಮೂಲ ಕ ಮಾಹಿತಿ ನೀಡಿದ್ದು ಅದಕ್ಕೆ ಬಹಳಷ್ಟು ಜನ ಪ್ರತಿಕ್ರಿಯಿ ಸಿದ್ದಾರೆ. ಹಾಗೆಯೇ ಅಕ್ಕ ಟಿವಿ ಯುಟ್ಯೂಬ್‌ ಚಾನೆಲ್‌ ಮುಖಾಂತರ ಆನ್‌ಲೈನ್‌ ಸಂವಾದ ಕಾರ್ಯಕ್ರಮ ದಲ್ಲಿ ಭಾಗವಹಿಸಿ ವಿದ್ಯಾರ್ಥಿನಿಯರ ಹಾಗೂ ಪೋಷಕರ ಸಂದೇಹ ನಿವಾರಣೆಗೆ ಪ್ರಯತ್ನಿಸುತ್ತಿದ್ದೇನೆ.

3.ನೂತನ ರಾಷ್ಟ್ರೀಯ ಶಿಕ್ಷಣ ಯೋಜನೆ ಅನ್ವಯ ಕನ್ನಡ ಭಾಷೆ ಕಲಿಯುವುದನ್ನು ರಾಜ್ಯ ಸರಕಾರ ಕಡ್ಡಾಯ ಗೊಳಿಸಿದ್ದು, ಕನ್ನಡ ಕಲಿಯದವರಿಗಾಗಿ ವ್ಯಾವಹಾರಿಕ ಕನ್ನಡ ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಇದರ ಜತೆಗೆ ಎಬಿಲಿಟಿ ಎನ್ಹಾ ನ್ಸ್‌ಮೆಂಟ್‌ ಕೋರ್ಸ್‌, ಸ್ಕಿಲ್‌ ಬೇಸ್ಡ್ ಕೋರ್ಸ್‌, ಮತ್ತು ವೊಕೇಶನಲ್‌ ಕೋರ್ಸ್‌ ಕಲಿಯುವುದನ್ನು ಕಡ್ಡಾಯ ಮಾಡಲಾಗಿದೆ. ದೈಹಿಕ ಶಿಕ್ಷಣ/ ಎನ್‌ಎಸ್‌ಎಸ್‌/ ಎನ್‌ಸಿಸಿ/ ಕ್ರೀಡೆ/ ಸಾಂಸ್ಕೃತಿಕ ಚಟುವಟಿಕೆಗಳು ಪಠ್ಯಕ್ಕೆ ಪೂರಕ ಚಟುವಟಿಕೆಗಳು ಪಠ್ಯಕ್ರಮದ ಭಾಗವಾಗಿವೆ.

4.ಈ ಪಠ್ಯಕ್ರಮವನ್ನು ಲರ್ನಿಂಗ್‌ ಔಟ್‌ಕಮ್‌ ಬೇಸ್ಡ್ ಫಾರ್ಮ್ವರ್ಕ್‌ ಆಧರಿಸಿ ರಚಿಸಲಾಗಿರುವುದರಿಂದ, ಇದು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತದೆ. ಕಲಿಕಾ ವಿಧಾನದಲ್ಲೂ ಕೂಡಾ ಬದಲಾ ವಣೆಗಳಿರುವು ದರಿಂದ, ಪಠ್ಯಕ್ರಮದ ನಾವೀನ್ಯತೆಯ ಮೂಲಕ ಗುಣಮಟ್ಟಕ್ಕೆ ಒತ್ತು ನೀಡಲಾಗುವುದು. ಬ್ಲೆಂಡೆಡ್‌ ಲರ್ನಿಂಗ್‌ ಮತ್ತು ಡಿಜಿಟಲ್‌ ಲರ್ನಿಂಗ್‌ಗೆ ಅವಕಾಶ ಕಲ್ಪಿಸಿರುವುದರಿಂದ ಉಪನ್ಯಾಸಕರ ಕೊರತೆಯಾಗಲಾರದು.

5.ಖಂಡಿತವಾಗಿಯೂ ಇಲ್ಲ. ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಾರೆ.

ಹೊಸ ಜಗತ್ತಿಗೆ ತೆರೆದುಕೊಳ್ಳಲು ಸನ್ನದ್ಧ
1. ಕಳೆದ 3 ತಿಂಗಳಿಂದ ಎನ್‌ಇಪಿ ಅಳವಡಿಕೆ ಕಾರ್ಯವನ್ನು ಚುರುಕುಗೊಳಿಸಿದೆ. ತಜ್ಞರ ನೆರವಿನೊಂದಿಗೆ ರಾಷ್ಟ್ರಿಯ ಹೊಸ ಶಿಕ್ಷಣ ನೀತಿಯ ಆಶಯಗಳಿಗೆ ಪೂರಕವಾಗಿ ನೂತನ ಪಠ್ಯಕ್ರಮವನ್ನು ರಚಿಸಿದ್ದು, ಪ್ರವೇಶ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ.

2.ಎನ್‌ಇಪಿ ಕುರಿತು ಪ್ರಾಧ್ಯಾಪಕರಿಗೆ ಕಾರ್ಯಾಗಾರ ನಡೆಸಿದ್ದೇವೆ. ಸಾಮಾಜಿಕ ಜಾಲತಾಣ ಗಳು, ವಿವಿಯ ಅಂತರ್ಜಾಲ, ಕರಪತ್ರಗಳ ಮೂಲಕ ವಿದ್ಯಾರ್ಥಿ ಗಳು, ಪೋಷಕರಿಗೆ ಎನ್‌ಇಪಿ ಮಹತ್ವ ತಿಳಿಸುತ್ತಿದ್ದೇವೆ. ವಿವಿಗೆ ಭೇಟಿ ನೀಡುವ ಪೋಷಕರಿಗೂ ಇದನ್ನು ಮನದಟ್ಟು ಮಾಡುತ್ತಿದ್ದೇವೆ.

3.ಉದ್ಯೋಗ ಮುಖಿ , ಸಮಾಜಮುಖಿ , ಅಭಿವೃದ್ಧಿ ದೃಷ್ಟಿಯಿಂದ ಸಹಕಾರಿಯಾಗುವ ನಿಟ್ಟಿನಲ್ಲಿ ಪದವಿ ತರಗತಿಗಳನ್ನು ಆರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪ್ರಾಯೋಗಿಕ ಕಲಿಕೆ, ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

4.ಪಠ್ಯಕ್ರಮ ರಚನೆ, ಬೋಧನ ಪದ್ಧತಿ ಮಹತ್ವ ಪಡೆಯುತ್ತವೆ. ಗ್ರಾವಿವಿ ಪಠ್ಯ ರಚನೆಗಾಗಿ ರಾಷ್ಟ್ರದ ಶಿಕ್ಷಣ ತಜ್ಞರು ಹಾಗೂ ಪರಿಣತರನ್ನು ಒಟ್ಟು ಗೂಡಿಸಿ ಪಠ್ಯಕ್ರಮ ರಚಿಸಲಾಗಿದೆ.

5.ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪದವಿ ಹಂತದಲ್ಲಿ ಡ್ರಾಪ್‌ಔಟ್‌ ಎಂಬ ಪ್ರಶ್ನೆಯೇ ಇಲ್ಲ.ಪ್ರಥಮ ವರ್ಷದ ಸರ್ಟಿಫಿಕೇಟ್‌ ಕೋರ್ಸ್‌, ದ್ವಿತೀಯ ವರ್ಷ ಡಿಪ್ಲೊಮಾ, ತೃತೀಯ ವರ್ಷ ಪದವಿ ಹಾಗೂ 4ನೇ ವರ್ಷ ಗೌರವ(ಹಾನರ್‌) ಎಂದು ವಿಂಗಡಿಸಲಾಗಿದೆ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-festival

Deepawali: ಬಾಂಬಿನ ಸದ್ದು ಮತ್ತು ಅಪ್ಪನ ಗುದ್ದು!

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

Akshaya Patra: ಗ್ಯಾರಂಟಿಗಳೆಂದರೆ ಆರ್ಥಿಕ ಶಕ್ತಿ ತುಂಬುವ ಅಕ್ಷಯ ಪಾತ್ರೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

“ರಾಜೀ’ಕೀಯದಿಂದ ಗಡಿ ಸಮಸ್ಯೆ ಜೀವಂತ… 6 ರಾಜ್ಯಗಳ ಗಡಿಭಾಗದಲ್ಲೂ ಒಂದಲ್ಲ ಒಂದು ಸಮಸ್ಯೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

Balipadyami: ಅನ್ನದಾತೆ ಆರಾಧನೆಯ ಬಲಿಪಾಡ್ಯಮಿ… ಇಂದು ಬಲಿಪಾಡ್ಯಮಿ, ಗೋಪೂಜೆ

8-book

Karnataka Rajyotsava: ಮನೆ ತುಂಬಾ 5 ಲಕ್ಷ ಕನ್ನಡ ಪುಸ್ತಕ: ಹರಿಹರಪ್ರಿಯರ ಪ್ರಪಂಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.