ಕರ್ನಾಟಕದಲ್ಲಿರುವ ಪ್ರಮುಖ ಉದ್ಯಾನವನಗಳ ಮಾಹಿತಿ ಇಲ್ಲಿದೆ…
Team Udayavani, Sep 9, 2020, 3:31 PM IST
1.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ
ಕೊಡಗು ಮತ್ತು ಮೈಸೂರು ಜಿಲ್ಲೆಗಳ ನಡುವೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳು ಹರಡಿಕೊಂಡಿದೆ. ಕರ್ನಾಟಕ ಅತ್ಯಂತ ಸುಂದರ ಮತ್ತು ದಟ್ಟ ಅರಣ್ಯವಾಗಿದೆ. ಅಪಾರ ಪ್ರಮಾಣದಲ್ಲಿ ಇಲ್ಲಿ ವನ್ಯಜೀವಿ ಮತ್ತು ಸಸ್ಯ ಸಂಕುಲಗಳನ್ನು ಹೊಂದಿದೆ. 1988 ರಲ್ಲಿ ಸ್ಥಾಪನೆ ಮಾಡಲಾಗಿದೆ.
1999ರಲ್ಲಿ ಹುಲಿ ಮೀಸಲು ಪ್ರದೇಶವಾಗಿದೆ ಘೋಷಿಸಲಾಯಿತು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಕಬಿನಿ,ಲಕ್ಷ್ಮಣ ತೀರ್ಥ ನದಿಗಳು ಹರಿಯುತ್ತದೆ. 250 ಹೆಚ್ಚು ಪಕ್ಷಿಗಳು ಇಲ್ಲಿವೆ.
ಕಪ್ಪು ಚಿರತೆ, ಕಳಿಂಗ ಸರ್ಪಗಳನ್ನು ಇಲ್ಲಿ ಮಾತ್ರ ಕಾಣಬಹುದು. ಇವುಗಳ ಜತೆಗೆ ಹೆಬ್ಟಾವು, ಕಟ್ಟೆ ಹಾವು, ಜಿಂಕೆ, ಕಾಡುಪಾಪ,ನೀರು ನಾಯಿ,ಮೊಸಳೆ,ಮರಕುಟುಕ, ಕರಡಿ, ಚಿರತೆ,ಆನೆ ಸಹಿತ ಅನೇಕ ವನ್ಯ ಜೀವಿ ತಾಣ ಇದಾಗಿದೆ.
ಈ ರಾಷ್ಟ್ರೀಯ ಉದ್ಯಾನವನ ಜೇನು ಕುರುಬರು,ಬೆಟ್ಟ ಕುರುಬರು ಮತು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗಗಳು ನೆಲೆಬೀಡಾಗಿದೆ.
2. ಅಣಶಿ ರಾಷ್ಟ್ರೀಯ ಉದ್ಯಾನವನ
ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಅಣಶಿ ರಾಷ್ಟ್ರೀಯ ಉದ್ಯಾನವನವಿದೆ.ಕಾಳಿ ಹುಲಿ ಸಂರಕ್ಷಿತ ಪ್ರದೇಶ ಎಂದೂ ಕರೆಯಲಾಗುತ್ತದೆ. ಇಲ್ಲಿ ಕಾಳಿ ನದಿ ಹರಿಯುತ್ತದೆ. ಕಪ್ಪು ಚಿರತೆ,ಹುಲಿ ಮತ್ತು ಆನೆ ಇಲ್ಲಿನ ಪ್ರಮುಖ ಪ್ರಾಣಿಗಳಾಗಿವೆ.
13 ಹುಲಿಗಳು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲಿದೆ.
1987ರಲ್ಲಿ ಈ ರಾಷ್ಟ್ರೀಯ ಉದ್ಯಾನವನ್ನು ಸ್ಥಾಪಿಸಲಾಗಿದೆ.
3. ಬಂಡೀಪುರ ರಾಷ್ಟ್ರೀಯ ಉದ್ಯಾನವನ
ಈ ಉದ್ಯಾನವನ್ನು ಹುಲಿ ಸಂರಕ್ಷಣ ಕಾಯ್ಕೆಯಡಿಯಲ್ಲಿ 1974ರಲ್ಲಿ ಸ್ಥಾಪಿಸಲಾಗಿದೆ. ಹಿಂದಿನ ಕಾಲದಲ್ಲಿ ಮೈಸೂರು ಮಹಾರಾಜರು ಬೇಟೆಯಾಡುವ ಪ್ರದೇಶ ಇದ್ದಾಗಿತ್ತು. ಬಂಡೀಪುರ ರಾಷ್ಟ್ರೀಯ ಉದ್ಯಾನವನವೂ ಚಾಮರಾಜನಗರ ಜಿಲ್ಲೆಯಲ್ಲಿದ್ದು, ತಮಿಳುನಾಡಿನ ಮದುಮಲೈ ಮತ್ತು ಕೇರಳದ ವಾಯಾನಾಡ್ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಿದೆ. 874 ಕಿ.ಮೀ ವಿಸ್ತ್ರೀರ್ಣಹೊಂದಿದೆ. ಹುಲಿ, ವಿಷಪೂರಿತ ಹಾವುಗಳು,ಕಾಡುಕೋಣ, ಜೀರುಂಡೆಗಳು ಇಲ್ಲಿನ ವಿಶೇಷತೆಗಳು.
4.ಬನ್ನೇರುಘಟ್ಟ ಜೈವಿಕ ಉದ್ಯಾನವನ
ಬೆಂಗಳೂರಿನಿಂದ 22 ಕಿ.ಮೀ ದೂರದಲ್ಲಿ ಈ ಉದ್ಯಾನವನವಿದೆ. 1974ರಲ್ಲಿ ಸ್ಥಾಪಿಸಲಾಗಿದ್ದು 260 ಕಿ.ಮೀ ವಿಸ್ತ್ರೀರ್ಣಹೊಂದಿದೆ. ಇಲ್ಲಿ ಸಫಾರಿ ಜತೆಗೆ ಮೃಗಾಲಯದ ಸಂದರ್ಶನಕ್ಕೂ ಅವಕಾಶವಿದೆ. ದೇಶದ ಮೊದಲ ಬಟರ್ ಪ್ಲೆ„ ಪಾರ್ಕ್ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 2006 ರಂದು ಸ್ಥಾಪನೆ ಮಾಡಲಾಗಿದೆ. ಬಿಳಿ ಹುಲಿ ಇಲ್ಲಿನ ವಿಶೇಷತೆಯಾಗಿದೆ. ಚಿರತೆ, ಗೋಲ್ಡನ್ ಜ್ಯಾಕಲ್ (ತೋಳ – ಚಿನ್ನದ ಮೈ ಬಣ್ಣ), ಕಾಡುಹಂದಿ ಸಹಿತ ಅನೇಕ ಪ್ರಾಣಿ, ಸಸ್ಯ ಸಂಕುಲಗಳಿಗೆ ತಾಣವಾಗಿದೆ.
5. ಕುದುರೆಮುಖ ರಾಷ್ಟ್ರೀಯ ಉದ್ಯಾನವನ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅತ್ಯಂತ ಸುಂದರ ಹಸಿರು ತಾಣಗಳನ್ನು ಹೊಂದಿರುವ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಈ ಉದ್ಯಾನವನವಿದೆ. ಪವರ್ತ ಶ್ರೇಣಿ, ಹಳ್ಳ-ಕೊಳ್ಳ,ಕಂದಕಗಳು, ತೊರೆಗಳಿಂದ ಕೂಡಿದೆ. ಕುದುರೆಯ ಮುಖವನ್ನು ಹೋಲುವುದರಿಂದ ಇದನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಎಂದು ಕರೆಯಲಾಗುತ್ತದೆ.
ಕರಡಿ, ಬೆಂಗಾಲ್ ಟೈಗರ್,ಮುಳ್ಳು ಹಂದಿ ಇಲ್ಲಿನ ವಿಶೇಷತೆಗಳಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.