ಪ್ರಾಚೀನ ಮಠ, ಅರ್ವಾಚೀನ ಪರಿಸರ, ನೈಸರ್ಗಿಕ ಬಣ್ಣ

ಮಠಕ್ಕೆ ಎಂಟು ಶತಮಾನಗಳ ಇತಿಹಾಸ ; ಮಣ್ಣು, ಸೆಗಣಿ, ಗೋಪಿಚಂದನ, ಗೋಂದು ಬಳಕೆ

Team Udayavani, Jun 18, 2020, 5:30 AM IST

ಪ್ರಾಚೀನ ಮಠ, ಅರ್ವಾಚೀನ ಪರಿಸರ, ನೈಸರ್ಗಿಕ ಬಣ್ಣ

ಉಡುಪಿ: ಶ್ರೀಕೃಷ್ಣಮಠಕ್ಕೆ ಸುಮಾರು ಎಂಟು ಶತಮಾನಗಳ ಇತಿಹಾಸವಿದೆ. ಆದರೆ ಬ್ರಿಟಿಷರ ಆಡಳಿತಾವಧಿಯಿಂದಲೇ (1935ರಿಂದ) ಉಡುಪಿ ತಾಲೂಕು ಕೇಂದ್ರಕ್ಕೆ ನಗರಸಭೆ ಮಾನ್ಯತೆ ದೊರಕಿದೆ. 1960ರ ದಶಕದಲ್ಲಿ ನಗರಸಭೆ ಮಾನ್ಯತೆ ಹೋಗಿ ಪುರಸಭೆ ಮಾನ್ಯತೆ ಬಂದರೂ, 1995ರ ವೇಳೆ ಮತ್ತೆ ಅದೇ ನಗರ ಮಟ್ಟ ಬಂತು.

ಎಲ್ಲ ನಗರಗಳೂ ದಿನದಿಂದ ದಿನಕ್ಕೆ ತನ್ನ ನಗರತನವನ್ನು ಬೆಳೆಸಿಕೊಳ್ಳುತ್ತಲೇ ಇವೆ. ಇದರ ಪರಿಣಾಮ ಪರಿಸರ- ಪ್ರಕೃತಿಗೆ ಪೂರಕ, ನೈಸರ್ಗಿಕ ಇತ್ಯಾದಿ ಶಬ್ದಗಳು ನಿಘಂಟಿಗೆ ಸೇರುವ ಹಂತದಲ್ಲಿರುವಾಗ ಒಂದರ್ಥದಲ್ಲಿ ಎಲ್ಲರ ಬದುಕಿನಲ್ಲಿ ಇದರ ಸಹಾಯಕ್ಕೆ ಬಂದದ್ದು ಕೋವಿಡ್-19 ವೈರಸ್‌.

ಕೋವಿಡ್-19 ಕಾರಣದಿಂದ ಲಾಕ್‌ಡೌನ್‌ ಆಗಿರುವಾಗ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಅವಧಿಯಲ್ಲಿ ಬಾಕಿ ಉಳಿದ ಸುಣ್ಣಬಣ್ಣಕ್ಕೆ ಕಾಲಕೂಡಿ ಬಂದಿದೆ. ಜನವರಿಯಲ್ಲಿ ಬಣ್ಣ ಕೊಟ್ಟದ್ದು ಶ್ರೀಕೃಷ್ಣಮಠದ ಕನಕಗೋಪುರ, ಮಹಾದ್ವಾರಗೋಪುರ, ಉತ್ತರ ಭಾಗದ ಗೋಪುರಕ್ಕೆ ಮತ್ತು ಅದಮಾರು ಮಠಕ್ಕೆ ಮಾತ್ರ. ಈಗ ಶ್ರೀಕೃಷ್ಣಮಠದ ಭೋಜನಶಾಲೆ, ಬಡಗುಮಾಳಿಗೆ, ರಾಜಾಂಗಣ ಸಭಾಭವನದ ವೇದಿಕೆಗಳಿಗೆ ನೈಸರ್ಗಿಕ ಬಣ್ಣ ಕೊಡುವ ಕೆಲಸ ನಡೆಯುತ್ತಿದೆ.

ಇಲ್ಲಿ ಕೇವಲ ಮಣ್ಣು, ಸೆಗಣಿ, ಗೋಪಿಚಂದನ, ಗೋಂದು, ಅಂಟನ್ನು ಬಳಸಲಾಗುತ್ತಿದೆ. 3:2ರ ಪ್ರಮಾಣದಲ್ಲಿ ಮಣ್ಣು ಮತ್ತು ಸೆಗಣಿ ಬಳಸಲಾಗುತ್ತದೆ. ಗೋಪಿಚಂದನ, ಅಂಟು, ಗೋಂದಿನ ಪ್ರಮಾಣ ಬಹಳ ಕಡಿಮೆ. ಆಧುನಿಕ ಪೇಂಟಿನಲ್ಲಿ ಜಿಂಕ್‌ ಪ್ರಧಾನ ವಾಗಿರಲಿದ್ದು ಇಲ್ಲಿ ಮಣ್ಣು ಅದರ ಪಾತ್ರ ವಹಿಸುತ್ತದೆ. ಉತ್ತಮ ಗುಣಮಟ್ಟದ ಎರಡು ಟೆಂಪೋ ಕೆಮ್ಮಣ್ಣನ್ನು (ಕೆಂಪು ಮಣ್ಣು) ಅದಮಾರು ಮೂಲ ಮಠದ ಸುತ್ತಮುತ್ತದಿಂದ ತರಿಸಲಾಗಿದೆ. ಮಠದಲ್ಲಿಯೇ ಇರುವ ದೇಸೀ ತಳಿಯ ದನಗಳ ಒಂದು ಟೆಂಪೋ ಸೆಗಣಿ (ಗೋಮಯ) ಸಂಗ್ರಹಿಸಿ ಬಣ್ಣ ತಯಾರಿಸಲಾಗಿದೆ. ಮಣ್ಣಿನಲ್ಲಿರುವ ಸಣ್ಣ ಕಲ್ಲು, ಕಸಗಳನ್ನು ತೆಗೆದು ಶುದ್ಧೀಕರಿಸಿ ಗೋಮಯ, ಗೋಂದು, ಅಂಟು, ಗೋಪಿಯನ್ನು 200 ಲೀ. ಬ್ಯಾರೆಲ್‌ನಲ್ಲಿ ಮಿಶ್ರಣ ಮಾಡಿ ಅದರಿಂದ ತಯಾರಾದ ಬಣ್ಣವನ್ನು ಸ್ಥಳೀಯ ಕಾರ್ಮಿಕರು ಕೊಡುತ್ತಿದ್ದಾರೆ. ವಲಸೆ ಕಾರ್ಮಿಕರು ಊರಿಗೆ ಹೋದರೆಂಬ ಮಾತು ಕೇಳಿಬರುತ್ತಿರುವಾಗಲೇ ಸ್ಥಳೀಯ ಕಾರ್ಮಿಕರ ಕೊರತೆಯಾಗದಿರುವುದು ಕಂಡುಬರುತ್ತಿದೆ.

ಖರ್ಚೂ ಕಡಿಮೆ, ಆರೋಗ್ಯಕ್ಕೂ ಲಾಭ
ನೈಸರ್ಗಿಕ ಬಣ್ಣವೆಂದಾಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಕೊಡಲೇ ಇಲ್ಲ ಎಂದರ್ಥವಲ್ಲ. ಎಲ್ಲಿ ಮಳೆ ನೀರು ಹೆಚ್ಚಾಗಿ ಬೀಳುತ್ತದೋ ಅಲ್ಲಿ ಮಣ್ಣು ತೋಯ್ದು ಹೋಗುವ ಕಾರಣ ಅಂತಹ ಕಡೆ ಮಾರುಕಟ್ಟೆ ಬಣ್ಣವನ್ನು ಕೊಡಲಾಗಿದೆ. ಎಲ್ಲಿ ಮಳೆ ನೀರು ಬೀಳುವುದಿಲ್ಲವೋ, ಎತ್ತರ ಪ್ರದೇಶವೋ ಅಲ್ಲಿ ನೈಸರ್ಗಿಕ ಬಣ್ಣ ಕೊಡಲಾಗುತ್ತಿದೆ. ಬಣ್ಣ ಕೊಡುವುದೆಂದರೆ ಇರುವ ಬಣ್ಣದ ಪದರದ ಮೇಲೆ ಇನ್ನೊಂದು ಪದರ ಕೊಡುವುದೆಂಬ ತಿಳಿವಳಿಕೆ ಇದೆ. ಇದು ಹಾಗಲ್ಲ. ಹಳೆಯ ಪದರಗಳನ್ನು ತೆಗೆದು ಹೊಸ ಪದರವನ್ನು ನೀಡಲಾಗುತ್ತಿದೆ. ಇದು ಆರೋಗ್ಯಕ್ಕೂ ಲಾಭ, ಖರ್ಚೂ ಕಡಿಮೆ, ಏನೇ ಖರ್ಚಿದ್ದರೂ ಅದು ಕೆಲಸದವರಿಗೆ ಮಾತ್ರ. ಕಲಾವಿದ ಪುರುಷೋತ್ತಮ ಅಡ್ವೆಯವರು ನವೀಕರಣ ಕೆಲಸಗಳಿಗೆ ಮಾರ್ಗದರ್ಶನ ಕೊಡುತ್ತಿದ್ದಾರೆ.

ಕಣ್ಮರೆಯ ಕಲೆ ಮೇಲೆ ಕಣ್ಣು
ಮಣ್ಣು, ಸೆಗಣಿ ಮಿಶ್ರಿತ ಬಣ್ಣವು ಹಳೆಯ ಶೈಲಿ, ಹಳೆಯ ಸಂಸ್ಕೃತಿ. ಹಿಂದೆ ಮನೆಗಳಲ್ಲಿ ಇಂತಹ ಗೋಡೆಗಳಿದ್ದವು, ಗೋಮಯದಿಂದ ಮಾಡಿದ ನೆಲಗಳು ಕಾಣುತ್ತಿದ್ದವು. ಮುಖ್ಯವಾದ ಸಂತೃಪ್ತಿ ಎಂದರೆ ಈಗಲೂ 28 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿರುವುದು. ಕೊನೆಗೆ ಶ್ರೀಕೃಷ್ಣಮಠದ ಚಂದ್ರಶಾಲೆ, ಸೂರ್ಯಶಾಲೆಯ ಕೆಲಸ ಮಾಡುತ್ತೇವೆ.
-ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಅದಮಾರು ಮಠ,
ಶ್ರೀಕೃಷ್ಣಮಠ, ಉಡುಪಿ

ಇದು ಸುಮಾರು ನಾಲ್ಕು ತಿಂಗಳ ಕೆಲಸ. 28 ಕೆಲಸದವರು ಇದ್ದಾರೆ. ಮಜೂರಿ ಸುಮಾರು 20 ಲ.ರೂ. ತಗಲುತ್ತದೆ.
-ಗೋವಿಂದರಾಜ್‌, ವ್ಯವಸ್ಥಾಪಕರು, ಶ್ರೀಕೃಷ್ಣಮಠ, ಉಡುಪಿ

ನಾನು ಇದೇ ಮೊದಲ ಬಾರಿಗೆ ಈ ನೈಸರ್ಗಿಕ ಬಣ್ಣವನ್ನು ಕೊಟ್ಟಿದ್ದೇನೆ. ಮಿತವ್ಯಯದಲ್ಲಿ ಬಣ್ಣ ಕೊಡಬೇಕೆನ್ನುವವರಿಗೆ ಇದೊಂದು ಉತ್ತಮ ಅವಕಾಶ.
-ರಮೇಶ್‌, ಬೈಲಕೆರೆ

ಮಾರುಕಟ್ಟೆಯಲ್ಲಿ ಸಿಗುವ ಪೇಂಟಿಂಗ್‌ ಕೈ, ಮೈಗೆ ತಾಗಿದರೆ ಅದನ್ನು ತೆಗೆಯುವುದು ಕಷ್ಟ. ಇದನ್ನು ಕೈಯಲ್ಲಿಯೇ ತಯಾರಿಸುತ್ತೇವೆ. ನಾವೆಲ್ಲರೂ ತುಂಬು ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದೇವೆ.
-ವಿನ್ಸಿ, ಮಣಿಪಾಲ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.