Navarathri: ಮಹಾವಿಘ್ನಗಳ ನಿವಾರಿಸುವ ನವದುರ್ಗೆಯರು
Team Udayavani, Oct 14, 2023, 11:22 PM IST
ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ ||
ಯಾರು ಎಲ್ಲ ಜೀವಿಗಳಲ್ಲೂ ತಾಯಿಯಾಗಿ ನೆಲಸಿದ್ದಾಳ್ಳೋ, ಅವಳಿಗೆ ಮತ್ತೆ ಮತ್ತೆ ನನ್ನ ನನ್ನ ನಮಸ್ಕಾರಗಳು.
ತಾಯಿಯ ಗರ್ಭದಿಂದ ಹೊರಬಂದಂದಿನಿಂದ ಮಾತೃ ಪ್ರೇಮದ ಅಮೃತವನ್ನು ನಾವು ಸವಿಯುತ್ತಾ ಬೆಳೆಯುತ್ತೇವೆ. ನಾವು ಬೆಳೆಯುತ್ತಾ ಆ ಮಾತೃ ಪ್ರೇಮವೂ ಬೆಳೆಯುತ್ತಾ, ವಿಸ್ತಾರವಾಗುತ್ತದೆ. ನಾವು ಓಡಾಡುವ ಭೂಮಿ ಭೂತಾಯಿಯಾಗಿ, ನಮ್ಮ ನಾಡು ತಾಯ್ನಾಡಾಗಿ, ನಮ್ಮ ದೇಶ ಭರತ ಮಾತೆಯಾಗಿ ಪೂಜಿತಳಾಗುತ್ತಾಳೆ. ನಮ್ಮ ಜೀವನದಲ್ಲಿ ನೆರವಾಗುವ ಅನೇಕ ಸ್ತ್ರೀಯರನ್ನು ನಾವು ತಾಯಿಯಂತಲೇ ಆರಾಧಿಸುತ್ತೇವೆ. ಇನ್ನು ಪರಬ್ರಹ್ಮ ಶಕ್ತಿಯು ನಮಗೆ ಜ್ಞಾನ ನೀಡಿದಾಗ ಸರಸ್ವತಿ, ಸಂಪತ್ತನ್ನು ನೀಡಿದಾಗ ಲಕ್ಷ್ಮಿ, ಶಕ್ತಿಯನ್ನು ನೀಡಿದಾಗ ಪಾರ್ವತಿ, ದುರ್ಗೆ ಹೆಸರುಗಳಿಂದ ಕರೆದು, ಅರ್ಚಿಸುತ್ತೇವೆ. ಅನಾದಿ ಕಾಲದಿಂದಲೂ ನಮ್ಮ ಭರತ ಭೂಮಿಯಲ್ಲಿ, ಸನಾತನ ಧರ್ಮದಲ್ಲಿ ಮಾತೃ ಪೂಜೆ, ದೇವಿಯ ಪೂಜೆ ವಿಶೇಷವಾಗಿ ನಡೆದುಕೊಂಡು ಬಂದಿದೆ.
ನಾಲ್ಕು ರೀತಿಯ ನವರಾತ್ರಿಗಳು
ಭಗವಾನ್ ಶ್ರೀರಾಮನು ರಾವಣನನ್ನು ಸಂಹಾರ ಮಾಡುವ ಮುನ್ನ ದೇವಿಯನ್ನು ವಿಶೇಷವಾಗಿ ಪೂಜಿಸಿ, ಅವಳ ಕೃಪೆಗೆ ಪಾತ್ರನಾಗಿ ರಾವಣನ ಸಂಹಾರ ಮಾಡುತ್ತಾನೆ. ಶರದೃತುವಿನಲ್ಲಿ ಬರುವ ಈ ನವರಾತ್ರಿಯು ಪ್ರಸಿದ್ಧವಾಯಿತು. ಆದ್ದರಿಂದಲೇ ಈ ನವರಾತ್ರಿಯನ್ನು ಶರನ್ನವರಾತ್ರಿ ಎಂದು ಕರೆಯುವುದು. ಅದಕ್ಕೆ ಮುನ್ನ ವಸಂತ ಋತು, ಚೈತ್ರ ಮಾಸದಲ್ಲಿ ಬರುವ ನವರಾತ್ರಿಯಲ್ಲಿ ದೇವಿ ಪೂಜೆಯನ್ನು ಮಾಡಲಾಗುತ್ತಿತ್ತು. ಅದನ್ನು ವಸಂತ ನವರಾತ್ರಿ ಎಂದು ಕರೆಯುತ್ತೇವೆ. ಇದಲ್ಲದೆ ಆಷಾಢ ಮಾಸದಲ್ಲಿ ಆಷಾಢ ನವರಾತ್ರಿಯನ್ನು ಮತ್ತು ಮಾಘ ಮಾಸದಲ್ಲಿ ಮಾಘ ನವರಾತ್ರಿಯನ್ನು ಆಚರಿಸಲಾಗುತ್ತದೆ. ಒಟ್ಟು 4 ನವರಾತ್ರಿಗಳು ಇದ್ದರೂ, ಶರನ್ನವರಾತ್ರಿಯೂ ಪ್ರಸಿದ್ಧಿಯನ್ನು ಪಡೆದು, ಅದನ್ನು ಮಾತ್ರ ಎಲ್ಲರೂ ಆಚರಿಸುತ್ತಾರೆ.
ಈ ವಿಶಿಷ್ಟ ಹಬ್ಬವನ್ನು ನವರಾತ್ರಿ, ದುರ್ಗಾ ಪೂಜೆ, ದಸರಾ, ದಶಹರ, ಶರನ್ನವರಾತ್ರಿ, ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಈ ಸಮಯದಲ್ಲಿ ದೇವಿಗೆ ವಿಶೇಷ ಪೂಜೆ ಮಾಡಿ ಅವಳ ಕೃಪೆಗೆ ಪಾತ್ರರಾಗುವುದೇ ಮುಖ್ಯ ಗುರಿ. ಅವಳ ಕೃಪೆಯಿಂದ ಮಾಯಾ ಬಂಧನದಿಂದ ಮುಕ್ತರಾಗಲು, ಸಚ್ಚಿದಾನಂದನ ದರ್ಶನವನ್ನು ಪಡೆಯಲು ಅಥವಾ ವಿಶೇಷ ಶಕ್ತಿಗಳನ್ನು ಪಡೆಯಲು ಭಕ್ತರು ಅವಳನ್ನು ಪೂಜಿಸುತ್ತಾರೆ. ಉಪಾಸಿಕಾನಾಂ ಕಾರ್ಯಾರ್ಥೇ ಬ್ರಹ್ಮಣೋ ರೂಪ ಕಲ್ಪತೇ | ಪರಬ್ರಹ್ಮನನ್ನು ಉಪಾಸಿಸುವ, ಆರಾಧಿಸುವ ಭಕ್ತರ ಉಪಯೋಗಕ್ಕಾಗಿ, ಪ್ರಯೋಜನಕ್ಕಾಗಿ ಭಗವಂತನು ವಿವಿಧ ರೂಪಗಳನ್ನು ತಾಳುತ್ತಾನೆ. ಅದೇ ರೀತಿ ಭಕ್ತರ ಉಪಯೋಗಕ್ಕಾಗಿ, ರಕ್ಷಣೆಗಾಗಿ ಭಗವತಿಯೂ ಸರಸ್ವತಿ, ಲಕ್ಷಿ¾à, ಪಾರ್ವತಿ, ಚಾಮುಂಡಿ, ಭವಾನಿ, ಮುಂತಾದ ಅನೇಕ ರೂಪಗಳನ್ನು ತಾಳಿದ್ದಾಳೆ. ಅವಳ ಮೂಲ ಉದ್ದೇಶ ಶಿಷ್ಟರ ರಕ್ಷಣೆ, ದುಷ್ಟರ ಶಿಕ್ಷೆ. ಆ ಎಲ್ಲ ಅವತಾರ ತತ್ತ್ವಗಳೂ ಪರಬ್ರಹ್ಮವನ್ನೇ ಬಿಂಬಿಸುತ್ತವೆ. ಆ ಪರತತ್ತ್ವದ ಒಂದು ಸಾಕಾರ ರೂಪವನ್ನು ನಾವು ದುರ್ಗಾ ಎಂದು ಕರೆಯುತ್ತೇವೆ.
ದೈತ್ಯನಾಶಾರ್ಥವಚನೋ “ದಕಾರಃ ಪರಿಕೀರ್ತಿತಃ |
“ಉಕಾರೋ ವಿಘ್ನನಾಶಸ್ಯ ವಾಚಕೋ ವೇದಸಂಮತಃ ||
“ರೇಫೋ ರೋಗಘ್ನವಚನೋ “ಗಶ್ಚ ಪಾಪಘ್ನವಾಚಕಃ |
ಭಯಶತ್ರುಘ್ನ “ಶ್ಚಾಕಾರಃ ಪರಿಕೀರ್ತಿತಃ ||
ಸ್ಮತ್ಯುಕ್ತಿಶ್ರವಣಂದ್ಯಸ್ಯಾ ಏತೇ ನಶ್ಯಂತಿ ನಿಶ್ಚಿತಮ್ |
ತತೋ ದುರ್ಗಾ ಹರೇಃ ಶಕ್ತಿರ್ಹರಿಣಾ ಪರಿಕೀರ್ತಿತಾ ||
ದ್ + ಉ + ೯ + ಗ್ + ಆ = ದುರ್ಗಾ. ಇದರಲ್ಲಿ “ದ’ಕಾರವು ತೊಂದರೆಗಳನ್ನುಂಟು ಮಾಡುವ ದುಷ್ಟ ಶಕ್ತಿಗಳನ್ನು ನಾಶ ಮಾಡು ವುದು. “ಉ’ಕಾರವು ಬಂದೊದಗುವ ಎಲ್ಲ ವಿಘ್ನಗಳನ್ನೂ ಪರಿ ಹರಿಸುವುದು ಎಂದು ವೇದಗಳು ಸಾರುತ್ತವೆ. “೯” ಅಕ್ಷರವು ರೋಗಗಳನ್ನು ನಿವಾರಿಸುವುದು. “ಗ’ಕಾರವು ಪಾಪಗಳನ್ನು ತೊಡೆದು ಹಾಕುವುದು. “ಆ’ಕಾರವು ಭಯಗಳನ್ನು, ಶತ್ರುಗಳನ್ನು ಹೋಗಲಾಡಿಸುವುದು. “ದುರ್ಗಾ’ ಎಂಬ ಹೆಸರನ್ನು ನೆನಪಿಸಿಕೊಂಡರೇ ಸಾಕು, ಅಷ್ಟರಿಂದಲೇ ಎಲ್ಲ ಮಹಾವಿಘ್ನಗಳು, ರೋಗಗಳು, ಇತ್ಯಾದಿ ನಾಶವಾಗುವುದೆಂದು ಹರಿಯ ಶಕ್ತಿಯಾದ ದುರ್ಗೆಯ ಕುರಿತು ಸ್ವತಃ ಹರಿಯೇ ಹೇಳಿರುವುನು.
ತತ್ರೈವ ಚ ವಧಿಷ್ಯಾಮಿ ದುರ್ಗಮಾಖ್ಯಂ ಮಹಾಸುರಮ್||
ದುರ್ಗಾ ದೇವೀತಿ ವಿಖ್ಯಾತಂ ತನ್ಮೈ ನಾಮ ಭವಿಷ್ಯತಿ ||
ಅಲ್ಲಿ ದುರ್ಗನೆಂಬ ಮಹಾರಾಕ್ಷಸನನ್ನು ಸಂಹಾರ ಮಾಡುತ್ತೇನೆ. ಆದ್ದರಿಂದ ನಾನು ದುರ್ಗಾ ಎಂಬ ಹೆಸರಿನಿಂದ ಪ್ರಸಿದ್ಧಳಾಗುತ್ತೇನೆ ಎಂದು ಸ್ವಯಂ ಜಗನ್ಮಾತೆಯೇ ಹೇಳಿದ್ದಾಳೆ. ನವರಾತ್ರಿಯಲ್ಲಿ ಪ್ರತೀ ದಿವಸ ದುರ್ಗಾಮಾತೆಯ ಒಂದು ಒಂದು ರೂಪವನ್ನು ಪೂಜಿಸುವುದು ನಮಗೆಲ್ಲ ತಿಳಿದಿರುವ ವಿಷಯ. ಇದರ ಉಲ್ಲೇಖವನ್ನು ನಾವು ಬ್ರಹ್ಮವೈವರ್ತ ಪುರಾಣದಲ್ಲಿ ಕಾಣಬಹುದು. ಅದರಲ್ಲಿ ಸ್ವಯಂ ಬ್ರಹ್ಮನೇ ಈ ಒಂಬತ್ತು ದುರ್ಗೆಯರ ಹೆಸರುಗಳನ್ನು ತಿಳಿಸಿದ್ದಾನೆ.
ಪ್ರಥಮಂ ಶೈಲಪುತ್ರೀ ಚ ದ್ವಿತೀಯಂ ಬ್ರಹ್ಮಚಾರಿಣೀ |
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್||
ಪಂಚಮಂ ಸ್ಕಂದಮಾತೇತಿ ಷಷ್ಟಂ ಕಾತ್ಯಾಯನೀತಿ ಚ |
ಸಪ್ತಮಂ ಕಾಲರಾತ್ರಿಶ್ಚ ಮಹಾಗೌರೀತಿ ಚಾಷ್ಟಕಮ್ ||
ನವಮಂ ಸಿದ್ಧದಾ ಪ್ರೋಕ್ತಾ ನವದುರ್ಗಾಃ ಪ್ರಕೀರ್ತಿತಾಃ |
ಉಕ್ತಾನ್ಮೈತಾನಿ ನಾಮಾನಿ ಬ್ರಹ್ಮಣೈವ ಮಹಾತ್ಮನಾ ||
ಸ್ವಾಮಿ ಶಾಂತಿವ್ರತಾನಂದಜೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.