ಶಿಕ್ಷಕರೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡ ಹಣ ಮರಳಿಸಿದ ಪೊಲೀಸರು
Team Udayavani, Jan 23, 2022, 3:14 PM IST
ಬಾಗಲಕೋಟೆ : ಶಿಕ್ಷಕರೊಬ್ಬರು ಆಕಸ್ಮಿಕವಾಗಿ ಕಳೆದುಕೊಂಡಿದ್ದ 2.85 ಲಕ್ಷ ಮೊತ್ತದ ಹಣ ಹಾಗೂ ವಿವಿಧ ದಾಖಲೆಗಳು ಒಳಗೊಂಡ ಬ್ಯಾಗ್ ಅನ್ನು 24 ಗಂಟೆಯಲ್ಲಿ ಹುಡುಕಿಕೊಡುವಲ್ಲಿ ನವನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಹೊಸ ಹಿರಿಯ ಪ್ರಾಥಮಿಕ ಶಾಲೆಯ ವಿ.ಎಚ್. ಕುಲಕರ್ಣಿ ಅವರು ಕೊರೊನಾ ವೇಳೆ ಕಾರ್ಯ ನಿರ್ವಹಿಸಿದ ಶಿಕ್ಷಕರ ಅರ್ಜಿ ಹಾಗೂ ಶಿಕ್ಷಕರ ವೈದ್ಯಕೀಯ ಬಿಲ್‌ಗಳ ದಾಖಲೆಗಳನ್ನು ಬಿಇಒ ಕಚೇರಿಗೆ ನೀಡಲು ಹೊರಟಿದ್ದರು. ಈ ವೇಳೆ ದಾಖಲೆಗಳ ಜತೆಗೆ 2,85,600 ರೂ. ನಗದು ಹಣ ಕೂಡ ಇತ್ತು. ಆಕಸ್ಮಿಕವಾಗಿ ಬ್ಯಾಗ್ ಕಳೆದುಕೊಂಡಿದ್ದರು.
ಕೂಡಲೇ ನವನಗರ ಪೊಲೀಸ್ ಠಾಣೆಗೆ ಈ ಕುರಿತು ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಠಾಣಾಧಿಕಾರಿ ಜಿ.ಎಚ್. ಕುಪ್ಪಿ, ಸಿಬ್ಬಂದಿಗಳಾದ ಎಂ.ಎಂ. ಬೀಳಗಿ, ವಿ.ವಿ. ಸಾಳಗುಂದಿ, ಜಮೀನ ದಳವಾಯಿ, ಎಚ್.ಎಂ. ಹುಕ್ಕೇರಿ ಅವರ ಸಮ್ಮುಖದಲ್ಲಿ ಬ್ಯಾಗ್ ಪತ್ತೆಹಚ್ಚಿದ್ದಾರೆ.
ಬಳಿಕ ಶಿಕ್ಷಕರಾದ ಎಲ್.ಸಿ ಯಂಕಂಚಿ, ಎನ್.ಬಿ. ಡೊಂಬರ, ಎಸ್.ಎಸ್. ಅಂಗಡಿ ಅವರ ಸಮ್ಮುಖದಲ್ಲಿ ಶಿಕ್ಷಕ ವಿ.ಎಚ್. ಕುಲಕರ್ಣಿ ಅವರಿಗೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ : ಈ ಆಟಗಾರರು ಕಳೆದ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಈ ಬಾರಿ ಕೇವಲ 20 ಲಕ್ಷ ಮೂಲಬೆಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.