ಶಿಕ್ಷಕರ ಸಂಖ್ಯೆ ಹೆಚ್ಚಳವಾದರೆ ಖಾಸಗಿಗೂ ಪೈಪೋಟಿ
ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
Team Udayavani, Oct 3, 2021, 6:30 AM IST
ಉಪ್ಪುಂದ: ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ದಾನಿಗಳ ಸಹಕಾರದಿಂದ ಖಾಸಗಿ ಶಾಲೆಯನ್ನು ಮೀರಿಸುವ ರೀತಿಯಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿಯಲ್ಲಿ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
92 ವಿದ್ಯಾರ್ಥಿಗಳ ಸೇರ್ಪಡೆ
ನಾವುಂದ ಗ್ರಾ.ಪಂ.ವ್ಯಾಪ್ತಿಯ ರಾ.ಹೆದ್ದಾರಿ 66ರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗೆ 88 ವರ್ಷ. ಕಳೆದ ಸಾಲಿನಲ್ಲಿ 219 ವಿದ್ಯಾರ್ಥಿಗಳು ಇದ್ದರೆ ಪ್ರಸ್ತುತ ವರ್ಷದಲ್ಲಿ 131 ಹುಡುಗರು ಹಾಗೂ 141 ಹುಡುಗಿಯರನ್ನೊಳಗೊಂಡಂತೆ 272 ವಿದ್ಯಾರ್ಥಿಗಳಿದ್ದಾರೆ. 1ನೇ ತರಗತಿಗೆ 48 ಮಕ್ಕಳು ಸೇರ್ಪಡಿದ್ದಾರೆ. ಎ, ಬಿ ವಿಭಾಗಗಳಲ್ಲಿ ತರಗತಿ ನಡೆಯುತ್ತದೆ.
ಶಿಕ್ಷಕರ ಕೊರತೆ
ಶಾಲೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗಗಳಿವೆ. 1ನೇ ತರಗತಿಯಲ್ಲಿ ಎ, ಬಿ ವಿಭಾಗಗಳಿವೆ, 2ನೇ ತರಗತಿ ಯಲ್ಲಿ 44, 3ನೇ ತರಗತಿಯಲ್ಲಿ 48 ಮಕ್ಕಳಿದ್ದು ಎ, ಬಿ ವಿಭಾಗ ಹೊಂದಿದೆ. 4ಮತ್ತು 5ರಲ್ಲಿ 29ಹಾಗೂ 19 ಮಕ್ಕಳಿದ್ದಾರೆ. 6 ಮತ್ತು 7ರಲ್ಲಿ 48 ಮತ್ತು 38 ವಿದ್ಯಾರ್ಥಿಗಳಿದ್ದು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಎ, ಬಿ ವಿಭಾಗಗಳಿವೆ. ಒಟ್ಟು 272 ವಿದ್ಯಾರ್ಥಿಗಳಿಗೆ 6 ಶಿಕ್ಷಕರಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ 4 ಶಿಕ್ಷಕರ ಕೊರತೆ ಉಂಟಾಗಿದೆ.
ಎಲ್‌ಕೆಜಿ ಮತ್ತು ಯುಕೆಜಿಯಲ್ಲಿ 30 ಮಕ್ಕಳಿದ್ದಾರೆ. ಹೆತ್ತವರ ಹಾಗೂ ಎಸ್‌ಡಿಎಂಸಿ ಅವರ ಸಹಕಾರ ದಿಂದ ಇಬ್ಬರು ಗೌರವ ಶಿಕ್ಷಕ ರನ್ನು ನೇಮಿಸಲಾಗಿದೆ. ವಿಜ್ಞಾನ, ಗಣಿತ, ಸಮಾಜ ವಿಷಯಕ್ಕೆ ಸಂಬಂಧಿಸಿ ವಿಷಯವಾರು ಶಿಕ್ಷಕರ ಅಗತ್ಯವಿದೆ.
ಇದನ್ನೂ ಓದಿ:ಚೈ-ಸ್ಯಾಮ್ ದಾಂಪತ್ಯ ಮುರಿದು ಬೀಳಲು ಕಾರಣವಾಯ್ತೇ ‘ದಿ ಫ್ಯಾಮಿಲಿ ಮ್ಯಾನ್ 2’ ?
ಕೊಠಡಿ ಕೊರತೆ
ಶಾಲೆಯಲ್ಲಿ ಅನ್ನದಾಸೋಹ ಕೊಠಡಿ ಸೇರಿದಂತೆ12 ತರಗತಿ ಕೋಣೆಗಳಿದ್ದು ಇದರಲ್ಲಿ 5ತರಗತಿ ಕೋಣೆಗಳ ಮಹಡಿ ದುಸ್ಥಿತಿಯಿಂದ ಕೂಡಿದೆ. ತುರ್ತು 5 ಕೊಠಡಿಗಳ ಅಗತ್ಯವಿದೆ.
ಸ್ಥಳೀಯ ಸಂಘ ಸಂಸ್ಥೆಗಳಿಂದ ಕೈ ತೊಳೆಯುವ ಘಟಕ ಅಳವಡಿಸಲಾಗಿದೆ. ದಾನಿಗಳ ಸಹಕಾರದೊಂದಿಗೆ 1.5 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ಪಾರ್ಕ್ ನಿರ್ಮಿಸುವ ಯೋಜನೆ ಹೊಂದ ಲಾ ಗಿದೆ. ಹಳೆ ವಿದ್ಯಾರ್ಥಿ ಸಂಘದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ದೂರದ ಗ್ರಾಮೀಣ ಪ್ರದೇಶಗಳಾದ ರಾಗಿಹಕ್ಲು, ಹೇರೂರು, ಕುದ್ರಕೋಡು, ಉಳ್ಳೂರು, ಬಡಾಕರೆ ಸೇರಿದಂತೆ ನಿತ್ಯ 100 ಕಿ.ಮೀ. ವಿದ್ಯಾರ್ಥಿಗಳಿಗಾಗಿ ಸಂಚರಿಸುತ್ತದೆ. ಜನಪ್ರತಿನಿಧಿಗಳ ಹಾಗೂ ಇಲಾಖೆಗಳಿಂದ ಇನ್ನಷ್ಟು ಮೂಲ ಸೌಕರ್ಯಗಳ ಸಮಸ್ಯೆಗಳಿಗೆ ಸ್ಪಂದಿಸಿದರೆ ಖಾಸಗಿ ಶಾಲೆಗಳ ಸಂಖ್ಯೆಯನ್ನು ಮೀರಿಸುವ ವಿಶ್ವಾಸ ಶಿಕ್ಷಕರ ಹಾಗೂ ಎಸ್‌ಡಿಎಂಸಿ ಅವರದ್ದು.
ಮೂಲಸೌಕರ್ಯಗಳ ಸಮಸ್ಯೆ
ನಲಿ-ಕಲಿ ತರಗತಿಗಳಿಗೆ ಕುರ್ಚಿ, ಟೇಬಲ್‌ಗಳ ಕೊರತೆ ಉಂಟಾಗಿದೆ. ಡೆಸ್ಕ್ ಗಳ ದುರಸ್ತಿ ಮಾಡಲು ಬಾಕಿ ಇದೆ. ಈಗ ಇರುವ 4 ಶೌಚಾಲಯವು ಶಿಥಿಲಗೊಂಡಿದ್ದು ಹೆಚ್ಚುವರಿ ಶೌಚಾಲಯದ ಅಗತ್ಯವಿದೆ. ಗ್ರಾ.ಪಂ. ನರೇಗ ಯೋಜನೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರದಲ್ಲಿ 5 ಲಕ್ಷ ರೂ.ದಲ್ಲಿ ಶೌಚಾಲಯ ನಿರ್ಮಾಣವಾಗಲಿದೆ ಎನ್ನಲಾಗಿದೆ. ಗ್ರಂಥಾಲಯಕ್ಕೆ ಕಟ್ಟಡದ ಅಗತ್ಯ ಇದೆ. ಪ್ರಯೋಗಾಲಯ, ಕಂಪ್ಯೂಟರ್, ಪ್ರೊಜೆಕ್ಟರ್, ಕ್ರೀಡಾ ಸಾಮಗ್ರಿಗಳ ಆವಶ್ಯಕತೆ ಇದೆ.
ಭೌತಿಕ ಸೌಲಭ್ಯ ನೀಡಿ
ಎಸ್‌ಡಿಎಂಸಿ ಅವರ ಸಂಪೂರ್ಣ ಸಹಕಾರ ಹಾಗೂ ಹಳೆ ವಿದ್ಯಾರ್ಥಿಗಳ ಮತ್ತು ದಾನಿಗಳ ಬೆಂಬಲದಿಂದ ಸರಕಾರಿ ಶಾಲೆಯು ಖಾಸಗಿ ಶಾಲೆಗಿಂತ ಹೆಚ್ಚು ವ್ಯವಸ್ಥಿತವಾಗಿ ನಡೆಯುತ್ತಿದೆ.ಸರಕಾರ ಭೌತಿಕ ಸೌಲಭ್ಯಗಳನ್ನು ನೀಡಿದರೆ ಖಾಸಗಿ ಶಾಲೆಗೆ ಪೈಪೋಟಿ ನೀಡಬಹುದು.
-ಶೇಖರ, ಮುಖ್ಯಶಿಕ್ಷಕ
-ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.