Indian Navy: ನೇವಿಗೆ ಸಿಕ್ಕಿದ ಮೊದಲ ಮೇಕ್ ಇನ್ ಇಂಡಿಯಾ ಡ್ರೋನ್
ಭಾರತೀಯ ನೌಕಾಪಡೆಗೆ "ದೃಷ್ಟಿ 10 ಸ್ಟಾರ್‌ಲೈನರ್" ಸೇರ್ಪಡೆ - ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್‌ನಿಂದ ಉತ್ಪಾದನೆ
Team Udayavani, Jan 10, 2024, 9:55 PM IST
ಹೈದರಾಬಾದ್: ಭಾರತೀಯ ನೌಕಾಪಡೆದಾಗಿ ಮೊದಲ ಬಾರಿಗೆ ದೇಶಿಯವಾಗಿಯೇ ಡ್ರೋನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಹೈದರಾಬಾದ್‌ನಲ್ಲಿ ಇರುವ ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಕಂಪನಿ ಅದನ್ನು ನಿರ್ಮಾಣ ಮಾಡಿದೆ. ಅದಕ್ಕೆ “ದೃಷ್ಟಿ 10 ಸ್ಟಾರ್‌ಲೈನರ್’ ಎಂದು ಹೆಸರು ಇರಿಸಲಾಗಿದೆ. ಅದು ಒಟ್ಟು 36 ಗಂಟೆಗಳ ಕಾಲ ಹಾರಾಟ ಸಾಮರ್ಥ್ಯಹೊಂದಿದೆ.
ಬುಧವಾರ ಅದನ್ನು ನೌಕಾಪಡೆ ಮುಖ್ಯಸ್ಥ ಆರ್.ಹರಿಕುಮಾರ್ ಬಿಡುಗಡೆ ಮಾಡಿದರು. ಹೈದರಾಬಾದ್‌ನಿಂದ ಹಾರಾಟ ಆರಂಭಿಸಿದ ಅದು ಪೋರಬಂದರ್‌ನತ್ತ ಧಾವಿಸಿತು. ಈ ಮೂಲಕ ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು.
ಸೇನಾ ಸಾಧನ, ಉಪಕರಣಗಳ ನಿರ್ಮಾಣದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸುವುದು ಕೇಂದ್ರ ಸರ್ಕಾರ ಉದ್ದೇಶ. ಅದಕ್ಕೆ ಅನುಗುಣವಾಗಿ ಈ ಡ್ರೋನ್ ಅನ್ನು ಸಿದ್ಧಪಡಿಸಲಾಗಿದೆ.
ಏನಿದರ ವಿಶೇಷಗಳು?
1. 2 ರೀತಿಯ ವಾಯುಪ್ರದೇಶದಲ್ಲಿ ಬಳಕೆ. ಸಾಮಾನ್ಯ ವಾಯು ಮಾರ್ಗ ಮತ್ತು ನಿರ್ದಿಷ್ಟ ಉದ್ದೇಶಕ್ಕಾಗಿ ನಿಗದಿಪಡಿಸಿರುವ ಮಾರ್ಗಗಳಲ್ಲಿ ಸಂಚಾರ.
2. ಎಲ್ಲ ರೀತಿಯ ಹವಾಮಾನ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಬಲ್ಲ, ನ್ಯಾಟೋ ಪಡೆಗಳ ಸ್ಟಾನಗ್ ಪ್ರಮಾಣಪತ್ರ ಹೊಂದಿದೆ.
3. 450 ಕೆಜಿ ತೂಕ ಹೊತ್ತು ಸಂಚಾರ ಸಾಮರ್ಥ್ಯ
ಸ್ಟಾನಗ್ ಪ್ರಮಾಣದ ಮಹತ್ವ:
ನ್ಯಾಟೋ ಪಡೆಗಳ ಸ್ಟಾನಗ್ 4671 ಪ್ರಮಾಣಪತ್ರವನ್ನು ದೃಷ್ಟಿ 10 ಪಡೆದಿದೆ. ಈ ಪ್ರಮಾಣಪತ್ರವಿದ್ದರೆ ನ್ಯಾಟೋ ಸದಸ್ಯ ರಾಷ್ಟ್ರಗಳ ವಾಯುಮಾರ್ಗದಲ್ಲೂ ಹಾರಾಟ ಸಾಧ್ಯ.
ಏನಿದು ಐಎಸ್‌ಆರ್ ತಂತ್ರಜ್ಞಾನ?
ದೃಷ್ಟಿ 10 ಸ್ಟಾರ್‌ಲೈನರ್ ಐಎಸ್‌ಆರ್ ತಂತ್ರಜ್ಞಾನವನ್ನು ಹೊಂದಿದೆ. ಗುಪ್ತಚರ (ಇಂಟೆಲಿಜೆನ್ಸ್), ಕಣ್ಗಾವಲು (ಸರ್ವೈಲೆನ್ಸ್), ಸ್ಥಳಾನ್ವೇಷಣೆಯನ್ನು (ರೆಕನೈಸಾನ್ಸ್) ಮಾಡುವ ಸಾಮರ್ಥ್ಯ ಈ ವ್ಯವಸ್ಥೆಯಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.