ವಜ್ರದಂಥ ದೇಹ ಬೇಕೆ? ವಜ್ರಾಸನ ಹಾಕಿ…
Team Udayavani, Apr 14, 2020, 9:44 AM IST
ಕಳೆದವಾರ, ಪದ್ಮಾಸನ ಹಾಕಿದ್ರಾ? ಅದನ್ನು ಮಾಡುವಾಗ, ಕೈ ಕಾಲನ್ನೆಲ್ಲ ಮಡಚಿದ ಕಾರಣಕ್ಕೆ ತುಂಬಾ ನೋವು ಕಾಣಿಸಿರಬೇಕಲ್ವಾ? ಅದೇ ಕಾರಣ ಮುಂದಿಟ್ಟು ಯೋಗ ಮಾಡುವುದನ್ನು ನಿಲ್ಲಿಸುವುದು ಮೂರ್ಖತನ. ನೆನಪಿರಲಿ: ಯೋಗದಿಂದ ಹಲವು ಬಗೆಯ ಅನುಕೂಲಗಳಿವೆ. ಪದ್ಮಾಸನ ಕಲಿತವರು, ನಂತರ ವಜ್ರಾಸನವನ್ನೂ ಕಲಿಯ ಬಹುದು. ಅದು ಹೀಗೆ- ಮೊದಲು ಪದ್ಮಾಸನದಲ್ಲಿ ಕುಳಿತು, ಎರಡೂ ಕಾಲುಗಳನ್ನು ಚಾಚಿ. ನಂತರ ಎರಡೂ ಕೈಗಳನ್ನು ಆಕಾಶಮುಖವಾಗಿ ಮೇಲೆತ್ತಿ, ಸೊಂಟವನ್ನು ಬಗ್ಗಿಸುತ್ತಾ ಬಗ್ಗಿಸುತ್ತಾ, ನಿಮ್ಮ ಕೈಗಳು ಎಡ ಮತ್ತು ಬಲ ಗಾಲಿನ ಹೆಬ್ಬೆರಳನ್ನು ಹಿಡಿಯುವಂತೆ ಮಾಡಿ. ಇಷ್ಟಾದಮೇಲೆ, ಮೆಲ್ಲಗೆ ಒಂದೊಂದು ಕಾಲನ್ನು ಮಂಡಿಯ ಹಿಂಬದಿಗೆ ಹಾಕಿ, ಅದರ ಮೇಲೆ ಕುಳಿತುಕೊಳ್ಳಿ.
ಮೊದಲ ಸಲ ಹೀಗೆ ಮಾಡುವಾಗ, ಮೀನ ಖಂಡಗಳು ತುಂಬಾ ನೋಯುವುದುಂಟು. ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಕ್ತ ಪರಿಚಲನೆಯಲ್ಲಿ
ಏರುಪೇರಾಗಿದ್ದಕ್ಕೆ ಹಾಗೆ ಅನಿಸುತ್ತದೆ, ಅಷ್ಟೇ. ಗಾಬರಿಯಾಗದೆ, ನೋವನ್ನು ಎಷ್ಟು ನಿಮಿಷ ತಡೆದುಕೊಳ್ಳಬಹುದೋ ಅಷ್ಟು ಹೊತ್ತು ಹಾಗೇ ಕುಳಿತುಕೊಳ್ಳಿ. ಎರಡು ಮೂರು ಸಲ ಹೀಗೆ ಮಾಡುತ್ತಾ ಹೋದರೆ, ನೋವಿಗೆ ನೀವು, ನಿಮಗೆ ನೋವು ಅಡೆಸ್ಟ್ ಆಗುತ್ತಾ ಹೋಗುತ್ತದೆ. ವಜ್ರಾಸನ ಮಾಡುವುದ ರಿಂದ, ಪಾದ, ಮೀನಖಂಡ, ತೊಡೆಯ ಭಾಗದಲ್ಲಿ ರಕ್ತಪರಿಚಲನೆ ಚೆನ್ನಾಗಿ ಆಗುತ್ತದೆ. ವಜ್ರಾಸನದಲ್ಲಿ ಕೂತು ದೇಹವನ್ನು ಸಂಪೂರ್ಣ ಬಾಗಿಸಿ, ಹೀಗೆ ಬೆಂಡ್ ಮಾಡುವಾಗಲೇ ಹೊಟ್ಟೆಯೊಳಗಿನ ಉಸಿರನ್ನು ಹೊರಗೆ ಹಾಕಿ, ಮತ್ತೆ ಸ್ವಸ್ಥಿತಿಗೆ ಬರುವ ಹೊತ್ತಿಗೆ ಉಸಿರನ್ನು ಎಳೆದುಕೊಳ್ಳಿ. ಹೀಗೆ ಮಾಡುವುದರಿಂದ, ಮನಸ್ಸಿನ ಮೇಲೆ
ಧೂಳಿನಂತೆ ಕೂತಿರುವ ಯೋಚನೆಗಳು, ಬೇಡದ ವಿಚಾರಗಳು ಮೆಲ್ಲಗೆ ಕಾಲ್ಕಿಳುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.